ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ (IPL 2021) ಪುನರಾರಂಭಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ಕೋವಿಡ್ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ಸ್ಥಗಿತಿಗೊಂಡಿದ್ದ ಟೂರ್ನಿಯನ್ನು ಬಿಸಿಸಿಐ (BCCI) ಯುಎಇನಲ್ಲಿ ಆಯೋಜಿಸಲಿದೆ. ಸೆಪ್ಟೆಂಬರ್ 19 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ತಂಡಗಳು ಮುಖಾಮುಖಿ ಆಗುವ ಮೂಲಕ ಐಪಿಎಲ್ 2021 ಎರಡನೇ ಚರಣಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಬಹುತೇಕ ಎಲ್ಲ ಫ್ರಾಂಚೈಸಿಯ ಆಟಗಾರರು ದುಬೈಗೆ ತಲುಪಿದ್ದಾರೆ. ಕೆಲ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡರೆ, ಇನ್ನೂ ಕೆಲ ಆಟಗಾರರು ಕ್ವಾರಂಟೈನ್ನಲ್ಲಿದ್ದಾರೆ.
ಇದರ ನಡುವೆ ಸನ್ರೈಸರ್ಸ್ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಕೂಡ ದುಬೈಗೆ ತಲುಪಿದ್ದು ಏಳು ದಿನಗಳ ಕಡ್ಡಾಯ ಕ್ವಾರಂಟೈನ್ನಲ್ಲಿದ್ದಾರೆ. ವಿಶೇಷ ಎಂದರೆ ವಾರ್ನರ್ ಹೋಟೆಲ್ನಲ್ಲಿ ಇದ್ದುಕೊಂಡೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವಾರ್ನರ್ ಅವರು ಫುಟ್ಬಾಲ್ನಷ್ಟು ದೊಡ್ಡದಿರುವ ಬಾಲ್ ಜೊತೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
Quarantine or No Quarantine: ? practice is a must, right @davidwarner31?#OrangeArmy #OrangeOrNothing ?: @davidwarner31 pic.twitter.com/h1IBulR51m
— SunRisers Hyderabad (@SunRisers) September 12, 2021
ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಸೀಸನ್ನ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು ಇದು ಅಕ್ಟೋಬರ್ 15 ರವರೆಗೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆ ನಡೆಸಿವೆ.
ಆದರೆ ಎರಡನೇ ಹಂತದ ಆರಂಭಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್ ಹಿನ್ನಡೆ ಅನುಭವಿಸಿದೆ. ತಂಡದ ಆರಂಭಿಕ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೊ ವೈಯಕ್ತಿಕ ಕಾರಣಗಳಿಂದ ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಈಗ ಅವರ ಸ್ಥಾನದಲ್ಲಿ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಆಟಗಾರನ ಹೆಸರು ಶೆರ್ಫೇನ್ ರುದರ್‌ಫೋರ್ಡ್. ಸನ್ ರೈಸರ್ಸ್ ಟ್ವೀಟ್ ಮೂಲಕ ವಿಂಡೀಸ್ ಆಟಗಾರನನ್ನು ತಮ್ಮ ತಂಡದಲ್ಲಿ ಬೈರ್ ಸ್ಟೋ ಬದಲಿಗೆ ಸೇರಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದೆ.
Virat Kohli: ಬಿಸಿಸಿಐಯಿಂದ ಸದ್ಯದಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅತಿ ದೊಡ್ಡ ಘೋಷಣೆ: ಏನದು ಗೊತ್ತೇ?
Virat Kohli: ಆರ್ಸಿಬಿ ತಂಡ ಸೇರಿಕೊಂಡ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್
(IPL 2021 SRH skipper David Warner seen practicing in his hotel room ahead of tournament)