IPL 2021: ಸನ್ ರೈಸರ್ಸ್ಗೆ ಕೈಕೊಟ್ಟ ಜಾನಿ ಬೈರ್‌ಸ್ಟೋ; ಬದಲಿ ಆಟಗಾರನಾಗಿ ಹೈದರಾಬಾದ್ ತಂಡ ಸೇರಿದ ಕೆರಿಬಿಯನ್ ದೈತ್ಯ!
IPL 2021: ಐಪಿಎಲ್ 2021 ರ ಎರಡನೇ ಹಂತದಲ್ಲಿ ನಮ್ಮ ತಂಡದಲ್ಲಿ ಜಾನಿ ಬೈರ್ ಸ್ಟೋ ಬದಲಿಗೆ ಶೆರ್ಫಾನ್ ರುದರ್ ಫರ್ಡ್ ನೇಮಕಗೊಳ್ಳಲಿದ್ದೇವೆ ಎಂದು ಬರೆದುಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಸೀಸನ್ನ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು ಇದು ಅಕ್ಟೋಬರ್ 15 ರವರೆಗೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆ ನಡೆಸಿವೆ. ಆದರೆ ಎರಡನೇ ಹಂತದ ಆರಂಭಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್ ಹಿನ್ನಡೆ ಅನುಭವಿಸಿತು. ತಂಡದ ಆರಂಭಿಕ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೊ ವೈಯಕ್ತಿಕ ಕಾರಣಗಳಿಂದ ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಈಗ ಅವರ ಸ್ಥಾನದಲ್ಲಿ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಆಟಗಾರನ ಹೆಸರು ಶೆರ್ಫೇನ್ ರುದರ್‌ಫೋರ್ಡ್. ಸನ್ ರೈಸರ್ಸ್ ಟ್ವೀಟ್ ಮೂಲಕ ವಿಂಡೀಸ್ ಆಟಗಾರನನ್ನು ತಮ್ಮ ತಂಡದಲ್ಲಿ ಬೈರ್ ಸ್ಟೋ ಬದಲಿಗೆ ಸೇರಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದೆ.
ಫ್ರಾಂಚೈಸಿ ಟ್ವೀಟ್ನಲ್ಲಿ ಹೀಗೆ ಬರೆದಿದೆ, ವೆಸ್ಟ್ ಇಂಡೀಸ್ನ ಬಿರುಗಾಳಿಯ ಬ್ಯಾಟ್ಸ್ಮನ್ ಈಗ ರೈಸರ್ಸ್ ಆಗಿದ್ದಾರೆ. ಐಪಿಎಲ್ 2021 ರ ಎರಡನೇ ಹಂತದಲ್ಲಿ ನಮ್ಮ ತಂಡದಲ್ಲಿ ಜಾನಿ ಬೈರ್ ಸ್ಟೋ ಬದಲಿಗೆ ಶೆರ್ಫಾನ್ ರುದರ್ ಫರ್ಡ್ ನೇಮಕಗೊಳ್ಳಲಿದ್ದೇವೆ ಎಂದು ಬರೆದುಕೊಂಡಿದೆ.
The explosive Caribbean is now a #Riser! ?
Sherfane Rutherford will replace Jonny Bairstow in our squad for the second phase of #IPL2021 #OrangeArmy #OrangeOrNothing pic.twitter.com/ypqqAl1Zyk
— SunRisers Hyderabad (@SunRisers) September 11, 2021
ಮುಂಬೈ ಇಂಡಿಯನ್ಸ್ ಪರ ಆಡಿದ್ದರು ಪ್ರಸ್ತುತ ವಿಜೇತ ಮುಂಬೈ ಇಂಡಿಯನ್ಸ್‌ಗಾಗಿ ರುದರ್‌ಫೋರ್ಡ್ ಈ ಹಿಂದೆ ಐಪಿಎಲ್‌ನಲ್ಲಿ ಆಡಿದ್ದರು. ಅವರು ಐಪಿಎಲ್ 2019 ರಲ್ಲಿ ಮುಂಬೈ ತಂಡದ ಭಾಗವಾಗಿದ್ದರು. ಮುಂಬೈ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ 2019 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್‌ನಲ್ಲಿ ರುದರ್‌ಫೋರ್ಡ್ ಆಡಿದ್ದು ಇದೇ ಮೊದಲು. ಅವರು ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು ಏಳು ಪಂದ್ಯಗಳನ್ನು ಆಡಿದ್ದಾರೆ ಮತ್ತು 73 ರನ್ ಗಳಿಸಿದ್ದಾರೆ. ಮೊದಲು ಅವರನ್ನು 2018 ರಲ್ಲಿ ದೆಹಲಿ ಕ್ಯಾಪಿಟಲ್ಸ್ ಖರೀದಿಸಿತ್ತು ಆದರೆ ಕೊನೆಯ -11 ರಲ್ಲಿ ಅವಕಾಶ ಸಿಗಲಿಲ್ಲ. ಅವರು 2018 ರಲ್ಲಿಯೇ ವೆಸ್ಟ್ ಇಂಡೀಸ್ ತಂಡದಲ್ಲಿ ಆಯ್ಕೆಯಾದರು. ಅವರು ಬಾಂಗ್ಲಾದೇಶ ವಿರುದ್ಧ ಟಿ 20 ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಟ್ಟು ಆರು ಟಿ 20 ಪಂದ್ಯಗಳನ್ನು ಆಡಿದ್ದಾರೆ.
ಪ್ರಸ್ತುತ CPL ಆಡುತ್ತಿದ್ದಾರೆ ರುದರ್‌ಫೋರ್ಡ್ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಆಡುತ್ತಿದ್ದಾರೆ. ಅವರು ಈ ಲೀಗ್‌ನಲ್ಲಿ ಇದುವರೆಗೆ ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಬಾರ್ಬಡೋಸ್ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಅವರು 43 ಎಸೆತಗಳಲ್ಲಿ 53 ರನ್ ಗಳಿಸಿದರು. ಇದರ ನಂತರ, ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ 34 ಎಸೆತಗಳಲ್ಲಿ ಅಜೇಯ 58 ರನ್ಗಳ ಇನ್ನಿಂಗ್ಸ್ ಆಡಿದರು ಮತ್ತು ತಂಡದ ಗೆಲುವಿಗೆ ಕಾರಣರಾದರು. ಮುಂದಿನ ಪಂದ್ಯದಲ್ಲಿ, ಅವರು 26 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳ ನೆರವಿನಿಂದ ಅಜೇಯ 50 ರನ್ ಗಳನ್ನು ಜಮೈಕಾ ತಲ್ಲವಾಸ್ ವಿರುದ್ಧ ಆಡಿ, ತಮ್ಮ ತಂಡಕ್ಕೆ ಆರು ವಿಕೆಟ್ ಜಯವನ್ನು ನೀಡಿದರು.