AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾವನ್ನು ದೂಷಿಸುತ್ತಿದ್ದ ಆಂಗ್ಲರಿಗೆ ಇರ್ಫಾನ್ ಪಠಾಣ್ ಮಾತಿನ ಚಡಿ ಏಟು

ಪಠಾಣ್ ಟ್ವಿಟರ್​ನಲ್ಲಿ "ನನ್ನ ಹಲ್ಲು ಮುರಿದುಹೋಗಿದೆ, ಹಾಗಂತ ನಾನು ಐಪಿಎಲ್ ಅನ್ನು ದೂಷಿಸುವುದಕ್ಕಾಗುತ್ತಾ? ಎಂದು ಟ್ವೀಟ್ ಮಾಡುವ ಮೂಲಕ ನಿಂದಕರಿಗೆ ಸರಿಯಾದ ಟಾಂಗ್ ನೀಡಿದ್ದಾರೆ.

ಟೀಂ ಇಂಡಿಯಾವನ್ನು ದೂಷಿಸುತ್ತಿದ್ದ ಆಂಗ್ಲರಿಗೆ ಇರ್ಫಾನ್ ಪಠಾಣ್ ಮಾತಿನ ಚಡಿ ಏಟು
ಇರ್ಫಾನ್ ಪಠಾಣ್
TV9 Web
| Edited By: |

Updated on:Sep 11, 2021 | 8:45 PM

Share

ಐಪಿಎಲ್ 2021, ಪ್ರಸ್ತುತ ಹಲವು ಮಾಜಿ ಇಂಗ್ಲೆಂಡ್ ಕ್ರಿಕೆಟಿಗರು, ಪತ್ರಕರ್ತರು ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಐಪಿಎಲ್ ಮೇಲೆ ಇಂಗ್ಲಿಷ್ ಶಿಬಿರದ ಅಸಮಾಧಾನಕ್ಕೆ ಕಾರಣ ಈಗಾಗಲೇ ಎಲ್ಲರಿಗೂ ತಿಳಿದಿದೆ – ಮ್ಯಾಂಚೆಸ್ಟರ್ ಟೆಸ್ಟ್. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯ ಶುಕ್ರವಾರ ಆರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಅದನ್ನು ರದ್ದುಗೊಳಿಸಬೇಕಾಯಿತು. ಈ ಕಾರಣದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ತಜ್ಞರು ಬಿಸಿಸಿಐ ಅನ್ನು ದೂಷಿಸುತ್ತಿದ್ದಾರೆ ಮತ್ತು ಐಪಿಎಲ್‌ಗಾಗಿ ಆಟಗಾರರು ದುರಾಸೆ ಪಡುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಅಂಥ ಕೆಲವರಿಗೆ ಭಾರತೀಯ ಮಾಜಿ ಕ್ರಿಕೆಟ್ ಇರ್ಫಾನ್ ಪಠಾಣ್ ತಮಾಷೆಯ ಉತ್ತರ ನೀಡಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಈ ಪ್ರಸಿದ್ಧ ಟಿ 20 ಲೀಗ್‌ನ 14 ನೇ ಸೀಸನ್ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು, ಇದಕ್ಕಾಗಿ ತಂಡಗಳು ಅಲ್ಲಿಗೆ ತಲುಪಿವೆ. ಮ್ಯಾಂಚೆಸ್ಟರ್ ಟೆಸ್ಟ್ ಅಧಿಕೃತವಾಗಿ ಸೆಪ್ಟೆಂಬರ್ 14 ರಂದು ಕೊನೆಗೊಳ್ಳಬೇಕಿತ್ತು. ನಂತರ ಆಟಗಾರರು ಇಂಗ್ಲೆಂಡಿನಿಂದ ನೇರವಾಗಿ ಯುಎಇಗೆ ಹೊರಡಬೇಕಾಯಿತು. ಈಗ ಟೆಸ್ಟ್ ಆಡಲಾಗಲಿಲ್ಲ ಮತ್ತು ಭಾರತೀಯ ಆಟಗಾರರು ಯುಎಇ ತಲುಪಲು ಆರಂಭಿಸಿದ್ದಾರೆ. ಈ ಕಾರಣದಿಂದಾಗಿ, ಇಡೀ ಇಂಗ್ಲೀಷ್ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು, ಮಾಜಿ ಇಂಗ್ಲೀಷ್ ಕ್ರಿಕೆಟಿಗರು ಐಪಿಎಲ್ ಅನ್ನು ದೂಷಿಸುವ ಟೀಕೆಗಳಿಂದ ತುಂಬಿವೆ.

ನನ್ನ ಹಲ್ಲು ಮುರಿದಿದೆ, ಹಾಗಂತ ನಾನು ಐಪಿಎಲ್ ಅನ್ನು ದೂಷಿಸುವುದಕ್ಕಾಗುತ್ತಾ? ಟೀಂ ಇಂಡಿಯಾದ ಸಹಾಯಕ ಫಿಸಿಯೊ ಯೋಗೀಶ್ ಪರ್ಮಾರ್ ಕೊರೊನಾ ಸೋಂಕಿಗೆ ಒಳಗಾದ ನಂತರ ಭಾರತೀಯ ಆಟಗಾರರು ಮ್ಯಾಂಚೆಸ್ಟರ್ ಟೆಸ್ಟ್ ಆಡಲು ನಿರಾಕರಿಸಿದರು. ಇದರ ನಂತರ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಇಲ್ಲಿಂದ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್, ಕೆವಿನ್ ಪೀಟರ್ಸನ್, ಮಾಜಿ ಬೌಲರ್ ಸ್ಟೀವ್ ಹಾರ್ಮಿಸನ್ ಸೇರಿದಂತೆ ಇಂಗ್ಲೆಂಡ್‌ನ ಕ್ರಿಕೆಟ್ ಪತ್ರಕರ್ತರು ಐಪಿಎಲ್ ಅನ್ನು ದೂಷಿಸುತ್ತಿದ್ದಾರೆ.

ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಈ ಜನರಿಗೆ ಚಕಿತ ಉತ್ತರ ನೀಡಿದ್ದಾರೆ. ಪಠಾಣ್ ಟ್ವಿಟರ್​ನಲ್ಲಿ “ನನ್ನ ಹಲ್ಲು ಮುರಿದುಹೋಗಿದೆ, ಹಾಗಂತ ನಾನು ಐಪಿಎಲ್ ಅನ್ನು ದೂಷಿಸುವುದಕ್ಕಾಗುತ್ತಾ? ಎಂದು ಟ್ವೀಟ್ ಮಾಡುವ ಮೂಲಕ ನಿಂದಕರಿಗೆ ಸರಿಯಾದ ಟಾಂಗ್ ನೀಡಿದ್ದಾರೆ.

ಭಾರತೀಯ ಆಟಗಾರರು ಟೆಸ್ಟ್ ಆಡಲು ನಿರಾಕರಿಸಿದರು ಭಾರತೀಯ ಆಟಗಾರರು ಟೆಸ್ಟ್ ಪಂದ್ಯಗಳನ್ನು ಆಡಲು ಸಿದ್ಧರಿರಲಿಲ್ಲ. ಏಕೆಂದರೆ ಪಂದ್ಯವನ್ನು ಒಂದು ದಿನ ಅಥವಾ ಎರಡು ದಿನ ತಡವಾಗಿ ಆರಂಭಿಸಿದರೆ, ಆ ಸಮಯದಲ್ಲಿ ಸೋಂಕಿನ ಪ್ರಕರಣವು ಹೆಚ್ಚಾದರೆ, ಆಗ ಅವರು ಸುಮಾರು 2 ವಾರಗಳ ಕಾಲ ಇಂಗ್ಲೆಂಡಿನಲ್ಲಿ ಕ್ವಾರಂಟೈನ್​ನಲ್ಲಿ ಇರಬೇಕಾಗಿತ್ತು. ಇದರಿಂದ ಪ್ರಮುಖ ಆಟಗಾರರು ಐಪಿಎಲ್​ನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿರಲಿಲ್ಲ. ಆದಾಗ್ಯೂ, ಭಾರತೀಯ ಆಟಗಾರರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಇಂಗ್ಲಿಷ್ ಬೋರ್ಡ್ ಕೂಡ ಅವರಿಗೆ ಸುರಕ್ಷತೆಯ ಸಂಪೂರ್ಣ ಭರವಸೆ ನೀಡಿತ್ತು. ಅದೇನೇ ಇದ್ದರೂ, ಭಾರತೀಯ ಆಟಗಾರರು ಒಗ್ಗಟ್ಟಿನಿಂದ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿದರು. ನಂತರ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು.

Published On - 8:45 pm, Sat, 11 September 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?