
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) ದ್ವಿತೀಯಾರ್ಧದ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ದ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. SRH ನೀಡಿದ 135 ರನ್ಗಳ ಸಾಧಾರಣ ಸವಾಲನ್ನು ಕೇವಲ 17.5 ಓವರ್ನಲ್ಲಿ ಬೆನ್ನತ್ತುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆದಿರಲಿಲ್ಲ.
ಮೊದಲ ಓವರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ ನೀಡುವಲ್ಲಿ ಅನ್ರಿಕ್ ನೋಕಿಯಾ ಯಶಸ್ವಿಯಾದರು. ಮೊದಲ ಓವರ್ನ 3ನೇ ಎಸೆತದಲ್ಲಿ ಡೇವಿಡ್ ವಾರ್ನರ್ (0) ವಿಕೆಟ್ ಪಡೆದು ಪ್ರಥಮ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಒಂದಷ್ಟು ಹೊತ್ತು ವೃದ್ದಿಮಾನ್ ಸಾಹ (18) ಮಿಂಚಿದರೂ ಪವರ್ಪ್ಲೇನಲ್ಲೇ ರಬಾಡಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಕೇನ್ ವಿಲಿಯಮ್ಸನ್ (18), ಮನೀಷ್ ಪಾಂಡೆ (17) ಬೇಗನೆ ನಿರ್ಗಮಿಸಿದರು.
ಈ ವೇಳೆ ಸಂಪೂರ್ಣ ಹಿಡಿತ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬೌಲರುಗಳು ಸನ್ರೈಸರ್ಸ್ ಹೈದರಾಬಾದ್ ತಂಡದ ರನ್ಗತಿಯನ್ನು ಸಂಪೂರ್ಣ ನಿಯಂತ್ರಿಸಿದರು. ಅಂತಿಮ ಹಂತದಲ್ಲಿ ಅಬ್ದುಲ್ ಸಮದ್ 21 ಎಸೆತಗಳಲ್ಲಿ 28 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇನ್ನೊಂದೆಡೆ ರಶೀದ್ ಖಾನ್ 22 ರನ್ಗಳ ಕಾಣಿಕೆ ನೀಡುವುದರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಮೊತ್ತ 9 ವಿಕೆಟ್ ನಷ್ಟಕ್ಕೆ 134ಕ್ಕೆ ಬಂದು ನಿಂತಿತು. ಡೆಲ್ಲಿ ಪರ 4 ಓವರ್ನಲ್ಲಿ 37 ರನ್ ನೀಡಿ ಕಗಿಸೋ ರಬಾಡ 3 ಪ್ರಮುಖ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
135 ರನ್ಗಳ ಸಾಧಾರಣ ಸವಾಲು ಪಡೆದ ಡೆಲ್ಲಿ ಕ್ಯಾಪಿಟಲ್ಸ್ಗೆ ಶಿಖರ್ ಧವನ್ (42) ಹಾಗೂ ಪೃಥ್ವಿ ಶಾ (11) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 3ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ 17.5 ಓವರ್ನಲ್ಲಿ 139 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ಜಯ ತಂದುಕೊಟ್ಟರು. ಶ್ರೇಯಸ್ ಅಯ್ಯರ್ ಅಜೇಯ 47 ರನ್ ಬಾರಿಸಿದರೆ, ರಿಷಭ್ ಪಂತ್ 35 ರನ್ ಬಾರಿಸಿ ಅಜೇಯರಾಗುಳಿದರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಈ ಸೋಲಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಆಡಿದ 8 ಪಂದ್ಯಗಳಲ್ಲಿ 7 ರಲ್ಲಿ ಪರಾಜಯಗೊಂಡು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ SRH ತಂಡವು 11 ಗೆಲುವು ದಾಖಲಿಸಿ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 9 ರಲ್ಲಿ ಜಯಗಳಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (w/c), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್
ಡೆಲ್ಲಿ ಕ್ಯಾಪಿಟಲ್ಸ್ಗೆ 8 ವಿಕೆಟ್ಗಳ ಭರ್ಜರಿ
ಭರ್ಜರಿ ಸಿಕ್ಸರ್ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಗುರಿ ಮುಟ್ಟಿಸಿದ ಶ್ರೇಯಸ್ ಅಯ್ಯರ್
ಜೇಸನ್ ಹೋಲ್ಡರ್ ಎಸೆತದಲ್ಲಿ ಆನ್ ಸೈಡ್ನಲ್ಲಿ ಭರ್ಜರಿ ಬೌಂಡರಿ ಬಾರಿಸಿದ ರಿಷಭ್ ಪಂತ್
ಖಲೀಲ್ ಅಹ್ಮದ್ ಅಂತಿಮ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಿಷಭ್ ಪಂತ್
DC 126/2 (17)
ರಿಷಭ್ ಪಂತ್ಗೆ ಸ್ಲೋ ಬಾಲ್ ಎಸೆದ ಖಲೀಲ್…ಬೌಂಡರಿ ಉತ್ತರ ನೀಡಿದ ಡೆ್ಲ್ಲಿ ನಾಯಕ
ಡೆಲ್ಲಿ ಕ್ಯಾಪಿಟಲ್ಸ್ ಗೆ 24 ಎಸೆತಗಳಲ್ಲಿ 25 ರನ್ ಗಳ ಅವಶ್ಯಕತೆ
ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿ. ಇದುವರೆಗೆ ಕೆಎಲ್ ರಾಹುಲ್ 18 ಸಿಕ್ಸ್ ಸಿಡಿಸಿದ್ದಾರೆ.
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಶಾರ್ಟ್ ಮಿಡ್ ವಿಕೆಟ್ನತ್ತ ರಿಷಭ್ ಪಂತ್ ಭರ್ಜರಿ ಹೊಡೆತ…ಸಿಕ್ಸರ್
ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್-ರಿಷಭ್ ಪಂತ್ ಬ್ಯಾಟಿಂಗ್
4 ಓವರ್ನಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದ ರಶೀದ್ ಖಾನ್
ಡೆಲ್ಲಿ ಕ್ಯಾಪಿಟಲ್ಸ್ ಗೆ 36 ಎಸೆತಗಳಲ್ಲಿ 39 ರನ್ಗಳ ಅವಶ್ಯಕತೆ
ಜೇಸನ್ ಹೋಲ್ಡರ್ ಎಸೆದ 12ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ರಿಷಭ್ ಪಂತ್. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ.
ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತ….ಬೌಂಡರಿ ಲೈನ್ನಲ್ಲಿ ಅಬ್ದುಲ್ ಸಮದ್ ಉತ್ತಮ ಕ್ಯಾಚ್.
37 ಎಸೆತಗಳಲ್ಲಿ 42 ರನ್ ಬಾರಿಸಿದ ಶಿಖರ್ ಧವನ್ ಔಟ್. ಸನ್ರೈಸರ್ಸ್ಗೆ 2ನೇ ಯಶಸ್ಸು
DC 72/2 (10.5)
ಮೊದಲ ಹತ್ತು ಓವರ್ಗಳಲ್ಲಿ DC 69 ರನ್ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್.
ಕ್ರೀಸ್ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
DC 69/1 (10)
ಸಂದೀಪ್ ಶರ್ಮಾ ಎಸೆತದಲ್ಲಿ ವೈಡ್ ಲಾಂಗ್ ಆಫ್ನತ್ತ ಬೌಂಡರಿ ಬಾರಿಸಿದ ಶಿಖರ್ ಧವನ್
ಸಂದೀಪ್ ಎಸೆತವನ್ನು ಸ್ವೀಪ್ ಮಾಡಿದ ಲೆಗ್ ಸೈಡ್ನಲ್ಲಿ ಬೌಂಡರಿ ಬಾರಿಸಿದ ಶಿಖರ್ ಧವನ್
ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 66 ಎಸೆತಗಳಲ್ಲಿ 75 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್-ಶಿಖರ್ ಧವನ್ ಬ್ಯಾಟಿಂಗ್.
DC 60/1 (9)
ವಾಟ್ ಎ ಶಾಟ್….ರಶೀದ್ ಖಾನ್ ಎಸೆತದಲ್ಲಿ ಆನ್ ಸೈಡ್ನತ್ತ ಶ್ರೇಯಸ್ ಅಯ್ಯರ್ ಸೂಪರ್ ಸಿಕ್ಸರ್
DC 60/1 (8.5)
ಬೌಲಿಂಗ್ನಲ್ಲಿ ಬದಲಾವಣೆ ಮಾಡಿದ ಕೇನ್ ವಿಲಿಯಮ್ಸನ್
ರಶೀದ್ ಖಾನ್ ಸ್ಥಾನದಲ್ಲಿ ಸಂದೀಪ್ ಶರ್ಮಾ ಕೈಗೆ ಚೆಂಡಿತ್ತ ಎಸ್ಆರ್ಹೆಚ್ ನಾಯಕ.
ಜೇಸನ್ ಹೋಲ್ಡರ್ ಎಸೆತದಲ್ಲಿ ಲೆಗ್ ಸೈಡ್ನಲ್ಲಿ ಬ್ಯೂಟಿಫುಲ್ ಫೋರ್…ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್
ಮೊದಲ 6 ಓವರ್ನಲ್ಲಿ 39 ರನ್ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್.
ಒಂದು ವಿಕೆಟ್ ಪಡೆದು ಮೊದಲ ಯಶಸ್ಸು ಸಾಧಿಸಿದ ಸನ್ರೈಸರ್ಸ್
ಕ್ರೀಸ್ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
DC 39/1 (6)
ರಶೀದ್ ಖಾನ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡಿದ ಶಿಖರ್ ಧವನ್…ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸರ್
ಕ್ರೀಸ್ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಇದು ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮ್ಯಾಚ್ ಎಂಬುದು ವಿಶೇಷ.
ಮೊದಲಾರ್ಧದಲ್ಲಿ ಗಾಯದ ಕಾರಣ ಕಣಕ್ಕಿಳಿಯದ ಅಯ್ಯರ್.
ಖಲೀಲ್ ಅಹ್ಮದ್ ಸ್ಲೋ ಬಾಲ್…ಭರ್ಜರಿ ಹೊಡೆತಕ್ಕೆ ಮುಂದಾದ ಪೃಥ್ವಿ ಶಾ…ಬ್ಯಾಕ್ ರನ್ನಿಂಗ್ ಮೂಲಕ ಅದ್ಭುತವಾಗಿ ಕ್ಯಾಚ್ ಹಿಡಿದ ಕೇನ್ ವಿಲಿಯಮ್ಸನ್..ಪೃಥ್ವಿ ಶಾ (11) ಔಟ್.
ಬ್ಯಾಟ್ ಎಡ್ಜ್… ವಿಕೆಟ್ ಕೀಪರ್ ಮೇಲಿಂದ ಚೆಂಡು ಬೌಂಡರಿಗೆ…ಮತ್ತೊಂದು ಫೋರ್
3ನೇ ಓವರ್ನ ಮೊದಲ ಎಸೆತದಲ್ಲೇ ಖಲೀಲ್ ಅಹ್ಮದ್ಗೆ ಬೌಂಡರಿ ಉತ್ತರ ನೀಡಿದ ಪೃಥ್ವಿ ಶಾ. ಓವರ್ ಮಿಡ್ ವಿಕೆಟ್ ಮೂಲಕ ಫೋರ್
ಭುವನೇಶ್ವರ್ ಕುಮಾರ್ 2ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಶಿಖರ್ ಧವನ್.
ಸಂಕ್ಷಿಪ್ತ ಸ್ಕೋರ್ ವಿವರ:
ಸನ್ರೈಸರ್ಸ್ ಹೈದರಾಬಾದ್- 134/9
ಅಬ್ದುಲ್ ಸಮದ್-28
ರಶೀದ್ ಖಾನ್-22
ಡೆಲ್ಲಿ ಕ್ಯಾಪಿಟಲ್ಸ್:-
ಕಗಿಸೊ ರಬಾಡ- 37/3
ಅನ್ರಿಕ್ ನೋಕಿಯ- 12/2
ಅಕ್ಷರ್ ಪಟೇಲ್- 21/2
ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ. ಸಂದೀಪ್ ಶರ್ಮಾ ರನೌಟ್.
ನಿಗದಿತ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಕಲೆಹಾಕಿದ ಸನ್ರೈಸರ್ಸ್ ಹೈದರಾಬಾದ್.
SRH 134/9 (20)
ಸ್ಟ್ರೈಟ್ ಬಾರಿಸಿ 2 ರನ್ ಕದಿಯುವ ಪ್ರಯತ್ನ ರಶೀದ್ ಖಾನ್ (22) ರನೌಟ್
SRH 133/8 (19.4)
ಅವೇಶ್ ಖಾನ್ 2ನೇ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಬೌಂಡರಿ ಬಾರಿಸಿದ ಭುವನೇಶ್ವರ್ ಕುಮಾರ್
ಸ್ಟ್ರೈಕ್ನಲ್ಲಿ ಭುವನೇಶ್ವರ್ ಕುಮಾರ್
ಮೊದಲ ಎಸೆತ ವೈಡ್.
2ನೇ ಎಸೆತ ವೈಡ್.
ರಬಾಡ ಎಸೆತದಲ್ಲಿ ಬ್ಯಾಟ್ ಬದಿ ತಗುಲಿ ಚೆಂಡು ಬೌಂಡರಿಗೆ…ರಶೀದ್ ಖಾನ್ ಖಾತೆಗೆ ಮತ್ತೊಂದು ಫೋರ್.
ರಬಾಡ ಎಸೆತದಲ್ಲಿ ಭರ್ಜರಿ ಸಿಕ್ಸ್.
ಥರ್ಡ್ ಮ್ಯಾನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಶೀದ್ ಖಾನ್
ರಬಾಡ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದ ಸಮದ್…ಬ್ಯಾಟ್ ತುದಿಗೆ ತಗುಲಿದೆ ಚೆಂಡು ನೇರವಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಕೈಗೆ…ಪೆವಿಲಿಯನ್ನತ್ತ ಸಮದ್ (28)
ರಬಾಡಾ ಎಸೆತಕ್ಕೆ ನೇರವಾಗಿ ಬೌಂಡರಿ ಬಾರಿಸಿದ ಅಬ್ದುಲ್ ಸಮದ್
ಸ್ಪರ್ಧಾತ್ಮಕ ಮೊತ್ತ ಪೇರಿಸಲು ರಶೀದ್ ಖಾನ್-ಅಬ್ದುಲ್ ಸಮದ್ ಪ್ರಯತ್ನ
ಅವೇಶ್ ಖಾನ್ ಎಸೆದ 17ನೇ ಓವರ್ನ ಕೊನೆಯ ಎಸೆತದಲ್ಲಿ ಲೈನ್ ನೋಬಾಲ್.
ಫ್ರೀ ಹಿಟ್ನಲ್ಲಿ ಸೂಪರ್ ಶಾಟ್…ಸ್ಟ್ರೈಟ್ನತ್ತ ಭರ್ಜರಿ ಸಿಕ್ಸರ್ ಸಿಡಿಸಿದ ಅಬ್ದುಲ್ ಸಮದ್.
17ನೇ ಓವರ್ನಲ್ಲಿ 100 ರನ್ ಪೂರೈಸಿದ ಸನ್ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಅಬ್ದುಲ್ ಸಮದ್.
ಅಕ್ಷರ್ ಪಟೇಲ್ ಎಸೆತದಲ್ಲಿ ರಶೀದ್ ಖಾನ್ ಬ್ಯಾಟ್ ಬದಿ ಚೆಂಡು ಬೌಂಡರಿಗೆ…ಥರ್ಡ್ ಮ್ಯಾನ್ ಮೂಲಕ ಫೋರ್
ಸನ್ರೈಸರ್ಸ್ ಹೈದರಾಬಾದ್ 6 ವಿಕೆಟ್ ಪತನ
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಅಬ್ದುಲ್ ಸಮದ್.
ಜೇಸನ್ ಹೋಲ್ಡರ್ ಔಟ್.
ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹೋಲ್ಡರ್.
ಚೆಂಡು ನೇರವಾಗಿ ಪೃಥ್ವಿ ಶಾ ಕೈಗೆ…ಜೇಸನ್ ಹೋಲ್ಡರ್ (9) ಇನಿಂಗ್ಸ್ ಅಂತ್ಯ.
SRH 90/6 (15.1)
SRH 90/5 (15)
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್.
14ನೇ ಓವರ್ನ 2ನೇ ಎಸೆತದಲ್ಲಿ ನೋ ಬಾಲ್ ಎಸೆದ ಕಗಿಸೋ ರಬಾಡ.
ಜೇಸನ್ ಹೋಲ್ಡರ್ ಭರ್ಜರಿ ಹೊಡೆತ…ಬ್ಯಾಟ್ ಬದಿ ತಾಗಿ ಥರ್ಡ್ ಮ್ಯಾನ್ನತ್ತ ಸಿಕ್ಸ್.
ರನ್ಗಳಿಸಲು ಪರದಾಡುತ್ತಿರುವ ಎಸ್ಆರ್ಹೆಚ್ ಬ್ಯಾಟ್ಸ್ಮನ್ಗಳು.
ಪ್ರಸ್ತುತ ರನ್ ರೇಟ್ 5.5
SRH 78/5 (14)
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್
ಕೇದರ್ ಜಾಧವ್ ಎಲ್ಬಿಡಬ್ಲ್ಯೂ…ಅನ್ರಿಕ್ ನೋಕಿಯಾ ಬಲವಾದ ಮನವಿ..ಅಂಪೈರ್ ಔಟ್ ಎಂದು ತೀರ್ಪು.
ಡಿಆರ್ಎಸ್ ಮೊರೆ ಹೋದ ಕೇದರ್ ಜಾಧವ್..3ನೇ ಅಂಪೈರ್ ಔಟ್ ಎಂದು ತೀರ್ಪು. 3 ರನ್ಗಳಿಸಿ ಪೆವಿಲಿಯನ್ಗೆ ಮರಳಿದ ಕೇದರ್ ಜಾಧವ್.
3ನೇ ಓವರ್ ಎಸೆಯುತ್ತಿರುವ ಅನ್ರಿಕ್ ನೋಕಿಯಾ.
ಮೊದಲ 2 ಓವರ್ನಲ್ಲಿ ಕೇವಲ 5 ರನ್ ನೀಡಿರುವ ನೋಕಿಯಾ.
ಇತ್ತ ರನ್ಗಾಗಿ ಪರದಾಡುತ್ತಿರುವ ಸನ್ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ಮನ್ಗಳು
SRH 73/4 (12.2)
11 ಓವರ್ ಮುಕ್ತಾಯಕ್ಕೆ ಸನ್ರೈಸರ್ಸ್ ಹೈದರಾಬಾದ್ ಮೊತ್ತ 66/4
ಕಗಿಸೋ ರಬಾಡ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಮನೀಷ್ ಪಾಂಡೆ. ರಬಾಡಾಗೆ ಕ್ಯಾಚ್ ನೀಡಿ ನಿರ್ಗಮನ. 17 ರನ್ಗೆ ಮನೀಷ್ ಪಾಂಡೆ ಇನಿಂಗ್ಸ್ ಅಂತ್ಯ.
SRH 61/3 (10)
ಕ್ರೀಸ್ನಲ್ಲಿ ಮನೀಷ್ ಪಾಂಡೆ ಹಾಗೂ ಕೇದರ್ ಜಾಧವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
3 ಜೀವದಾನ ಸಿಕ್ಕರೂ ಬಳಸಿಕೊಳ್ಳದ ಕೇನ್ ವಿಲಿಯಮ್ಸನ್. 26 ಎಸೆತಗಳಲ್ಲಿ 18 ರನ್ಗಳಿಸಿ ಔಟ್.
ಕೇನ್ ವಿಲಿಯಮ್ಸನ್ ಔಟ್. ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತ. ಬೌಂಡರಿ ಲೈನ್ನಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದ ಶಿಮ್ರಾನ್ ಹೆಟ್ಮೆಯರ್.
8ನೇ ಓವರ್ನ 3ನೇ ಎಸೆತದಲ್ಲಿ ನೋ ಬಾಲ್ ಹಾಕಿದ ಅಶ್ವಿನ್
ಫೀ ಹಿಟ್ ಎಸೆತದಲ್ಲಿ ಸ್ಟ್ರೈಟ್ ಬೌಂಡರಿ ಬಾರಿಸಿದ ಮನೀಷ್ ಪಾಂಡೆ.
ಮಾರ್ಕಸ್ ಸ್ಟೋಯಿನಿಸ್ ಬದಲಿಗೆ ಸಬ್ ಫೀಲ್ಡರ್ ಆಗಿ ಕಣಕ್ಕಿಳಿದ ಸ್ಟೀವ್ ಸ್ಮಿತ್.
2ನೇ ಎಸೆತದಲ್ಲಿ ಭರ್ಜರಿ ಬೌಂಡರಿ. ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಕೇನ್ ವಿಲಿಯಮ್ಸನ್
ಕರಂಟ್ ರನ್ ರೇಟ್ ಕೇವಲ- 5.57
7ನೇ ಓವರ್ ಎಸೆದ ಮಾರ್ಕಸ್ ಸ್ಟೋಯಿನಿಸ್- ಕೇವಲ 7 ರನ್ ನೀಡಿದ ಆಸೀಸ್ ಆಲ್ರೌಂಡರ್
ಮೊದಲ 6 ಓವರ್ನಲ್ಲಿ ಎಸ್ಆರ್ಹೆಚ್ 2 ವಿಕೆಟ್ ಪತನ
ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹಾ ಔಟ್
ಕ್ರೀಸ್ನಲ್ಲಿ ವಿಲಿಯಮ್ಸನ್-ಮನೀಷ್ ಪಾಂಡೆ ಬ್ಯಾಟಿಂಗ್
ಪವರ್ ಮುಕ್ತಾಯ: ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ.
6 ಓವರ್ನಲ್ಲಿ ಕೇವಲ 32 ರನ್ ನೀಡಿ 2 ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಲಟ್ಸ್
SRH 32/2 (6)
ರಬಾಡಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ವೃದ್ದಿಮಾನ್ ಸಾಹಾ….ಚೆಂಡು ನೇರವಾಗಿ ಶಿಖರ್ ಧವನ್ ಕೈಗೆ…ಸಾಹಾ (18) ಔಟ್
SRH 29/2 (5)
ರಬಾಡ ಎಸೆತದಲ್ಲಿ ಭರ್ಜರಿ ಸಿಕ್ಸರ್ ತಿರುಗೇಟು- ಚೆಂಡು ಸ್ಟೇಡಿಯಂನಲ್ಲಿ- ತಂಡಕ್ಕೆ 6 ರನ್ ಸೇರ್ಪಡೆ.
4 ಓವರ್ ಮುಕ್ತಾಯದ ವೇಳೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮೊತ್ತ- 23 ರನ್ಗಳು.
ಕ್ರೀಸ್ನಲ್ಲಿ ವೃದ್ದಿಮಾನ್ ಸಾಹಾ ಹಾಗೂ ಕೇನ್ ವಿಲಿಯಮ್ಸನ್.
ಅಕ್ಷರ್ ಪಟೇಲ್ ಮೊದಲ ಎಸೆತದಲ್ಲೇ ಲಾಂಗ್ನತ್ತ ವೃದ್ದಿಮಾನ್ ಸಾಹಾ ಸೂಪರ್ ಶಾಟ್- ಫೋರ್.
1ನೇ ಎಸೆತ- 1 ರನ್ (ವಿಲಿಯಮ್ಸನ್)
2ನೇ ಎಸೆತ- 1 ರನ್
3ನೇ ಎಸೆತ- 0
4ನೇ ಎಸೆತ- 1 ರನ್
5ನೇ ಎಸೆತ- 0
6ನೇ ಎಸೆತ- 0
3ನೇ ಓವರ್ನಲ್ಲಿ ಕೇವಲ 4 ರನ್ ಮಾತ್ರ.
1ನೇ ಎಸೆತ- 0 (ವೃದ್ದಿಮಾನ್ ಸಾಹ)
2ನೇ ಎಸೆತ- 1 ರನ್
3ನೇ ಎಸೆತ- 1 ರನ್ (ವಿಲಿಯಮ್ಸನ್)
4ನೇ ಎಸೆತ- 0
5ನೇ ಎಸೆತ- ವಾಟ್ ಎ ಶಾಟ್ —ಸ್ಕ್ವೇರ್ ಕಟ್ ಮೂಲಕ ಆಕರ್ಷಕ ಫೋರ್ ಬಾರಿಸಿದ ಸಾಹಾ.
6ನೇ ಎಸೆತ- 0
ಮೊದಲ ಓವರ್; ಅನ್ರಿಕ್ ನೋಕಿಯಾ
1ನೇ ಎಸೆತ- 0 (ಡೇವಿಡ್ ವಾರ್ನರ್)
2ನೇ ಎಸೆತ- 0 (ಡೇವಿಡ್ ವಾರ್ನರ್)
3ನೇ ಎಸೆತ- ಶೂನ್ಯಕ್ಕೆ ಡೇವಿಡ್ ವಾರ್ನರ್ ಔಟ್
4ನೇ ಎಸೆತ- 2 ರನ್ ( ತಂಡದ ರನ್ ಖಾತೆ ತೆರೆದ ಕೇನ್ ವಿಲಿಯಮ್ಸನ್)
5ನೇ ಎಸೆತ- ಎಲ್ಬಿಡಬ್ಲ್ಯೂಗೆ ಮನವಿ, ಅಂಪೈರ್ ತೀರ್ಪು ನಾಟೌಟ್- ಡಿಆರ್ಎಸ್ ಮೊರೆ ಹೋದ ಪಂತ್- ಚೆಂಡು ಬ್ಯಾಟ್ಗೆ ತಾಗಿರುವುದು ಸ್ಪಷ್ಟ. 3ನೇ ಅಂಪೈರ್ ತೀರ್ಪು ನಾಟೌಟ್
6ನೇ ಎಸೆತ- ಲೆಗ್ ಸೈಡ್ನತ್ತ ಬಾರಿಸಿದ ವಿಲಿಯಮ್ಸನ್- ಎಸ್ಆರ್ಹೆಚ್ ತಂಡದ ಮೊದಲ ಬೌಂಡರಿ
ಮೊದಲ ಓವರ್ನ 3ನೇ ಎಸೆತದಲ್ಲಿ ಡೇವಿಡ್ ವಾರ್ನರ್ ಔಟ್. ಕರಾರುವಾಕ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ವಾರ್ನರ್, ಬ್ಯಾಟ್ ತುದಿ ತಾಗಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್
ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಓವರ್ ಬೌಲರ್:
-ಅನ್ರಿಕ್ ನೊಕಿಯಾ
SRH- ಆರಂಭಿಕರು:
-ಡೇವಿಡ್ ವಾರ್ನರ್
-ವೃದ್ಧಿಮಾನ್ ಸಾಹ
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (w/c), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್
ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (w/c), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್
ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್): ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
ನೋಕಿಯಾ, ರಬಾಡಾ, ಸ್ಟೊಯಿನಿಸ್ ಮತ್ತು ಹೆಟ್ಮಿಯರ್
ಹೋಲ್ಡರ್, ರಶೀದ್, ವಾರ್ನರ್ ಮತ್ತು ಕೇನ್ ವಿಲಿಯಮ್ಸನ್
ಟಾಸ್ ಗೆದ್ದ ಎಸ್ಆರ್ಹೆಚ್ ನಾಯಕ ಕೇನ್ ವಿಲಿಯಮ್ಸನ್: ಬ್ಯಾಟಿಂಗ್ ಆಯ್ಕೆ
ಕೆವಿನ್ ಪೀಟರ್ಸನ್ ಮಾಹಿತಿ- ಪಿಚ್ ಬೌಲರುಗಳಿಗೆ ಸಹಕಾರಿಯಾಗುವ ಸಾಧ್ಯತೆ. ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಲಿದೆ.
ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ SRH ತಂಡವು 11 ಗೆಲುವು ದಾಖಲಿಸಿ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 8 ರಲ್ಲಿ ಜಯಗಳಿಸಿದೆ.
Published On - 6:22 pm, Wed, 22 September 21