ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಕ್ವಾಲಿಫೈಯರ್ ಮತ್ತು ಎಲಿಮಿನೇಟರ್‌ಗಳಂತಹ ಪದಗಳನ್ನು ಹೆಚ್ಚು ಒತ್ತಡವನ್ನು ಸೃಷ್ಟಿಸಲು ರಚಿಸಲಾಗಿದೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ತಮ್ಮ ತಂಡವು ಐಪಿಎಲ್ 2021 ಫೈನಲ್ ತಲುಪಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಲೀಗ್ ಹಂತದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಂತರ ಮೂರನೇ ಸ್ಥಾನದಲ್ಲಿದೆ. ಅವರು ಸೋಮವಾರ ಎಲಿಮಿನೇಟರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದ್ದಾರೆ. ನಮ್ಮ ತಂಡದ ಮೇಲೆ ನಮಗೆ ತುಂಬಾ ನಂಬಿಕೆಯಿದೆ, ನಾವು ಅಗ್ರ ಎರಡರಲ್ಲಿ ಸ್ಥಾನ ಪಡೆಯದಿದ್ದರೆ, ಫೈನಲ್ ತಲುಪಲು ನಾವು ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ ಎಂದು ಸ್ಟಾರ್ ಸ್ಪೋರ್ಟ್ಸ್‌ನ ಇನ್ಸೈಡ್ ಆರ್‌ಸಿಬಿ ಕಾರ್ಯಕ್ರಮದಲ್ಲಿ ಕೊಹ್ಲಿ ಹೇಳಿದರು. ಇದಕ್ಕಾಗಿ ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂತಲೂ ಹೇಳಿದರು.
ನಾವು ಎಲ್ಲಾ ರೀತಿಯ ಸಾಧ್ಯತೆಗಳಿಗೆ ಸಿದ್ಧರಾಗಿದ್ದೇವೆ. ನಾನು ನೋಡುವ ರೀತಿ, ಕ್ವಾಲಿಫೈಯರ್ ಮತ್ತು ಎಲಿಮಿನೇಟರ್‌ಗಳಂತಹ ಹಂತಗಳನ್ನು ಈ ಪಂದ್ಯಗಳಲ್ಲಿ ಹೆಚ್ಚಿನ ಒತ್ತಡವನ್ನು ಸೃಷ್ಟಿಸಲು ತಂದಿರುವ ಕೇವಲ ಪದಗಳಾಗಿವೆ ಎಂದು ಕೊಹ್ಲಿ ಹೇಳಿದರು. ನೀವು ಕ್ರಿಕೆಟ್ ಆಡುವಾಗ, ನೀವು ಗೆಲ್ಲುತ್ತೀರಿ ಅಥವಾ ಸೋಲುತ್ತೀರಿ. ಆದ್ದರಿಂದ ನೀವು ಎರಡು ಆಯ್ಕೆಗಳನ್ನು ಹೊಂದಿರುವಾಗ (ಗೆಲುವು ಮತ್ತು ಸೋಲು) ನಂತರ ಮನಸ್ಥಿತಿ ನೆಗೆಟಿವ್ ಬದಿಯಲ್ಲಿ ಹೋಗಬಹುದು. ನಮ್ಮ ಗಮನವು ಮೈದಾನಕ್ಕೆ ಬಂದು ನಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವುದು ಮತ್ತು ಪಂದ್ಯವನ್ನು ಗೆಲ್ಲುವುದು. ನಿಮ್ಮ ಏಕೈಕ ಆಯ್ಕೆಯು ಕೇವಲ ಗೆಲುವು ಅಷ್ಟೆ. ಸೋಲು ನಮ್ಮ ಆಯ್ಕೆಯಲ್ಲ ಎಂದಿದ್ದಾರೆ. ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ನಮ್ಮ ತಂಡವು ಸರಿಯಾದ ಕೆಲಸವನ್ನು ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ.
ನಮ್ಮ ಆಟ ಬದಲಾಗುವುದಿಲ್ಲ- ಡಿವಿಲಿಯರ್ಸ್
ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಗೆದ್ದವರು ಐಪಿಎಲ್ 2021 ರ ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಆಡಬೇಕಾಗುತ್ತದೆ. ಈ ಪಂದ್ಯದಲ್ಲಿ ಯಾರು ಗೆದ್ದರೂ ಫೈನಲ್‌ನಲ್ಲಿ ಸಿಎಸ್‌ಕೆ ಎದುರು ಆಡುತ್ತಾರೆ. ಅದೇ ಸಮಯದಲ್ಲಿ, ನಾಕೌಟ್ ಹಂತದ ಪಂದ್ಯಗಳಿಗೆ ಸಂಬಂಧಿಸಿದಂತೆ ತಂಡದ ಆಟದ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಭಾವಿಸಿದ್ದಾರೆ. ಪಂದ್ಯಾವಳಿಯ ಆರಂಭದಿಂದ ಇಲ್ಲಿಯವರೆಗೆ, ನಾವು ಹೆಚ್ಚಿನ ಒತ್ತು ನೀಡಿದ್ದೇವೆ, ಆದ್ದರಿಂದ ಈಗ ಉತ್ಸಾಹ ಹೆಚ್ಚಾಗುವುದು ಸಹಜ. ಈ ಸಮಯದಲ್ಲಿ ಕೌಶಲ್ಯವು ಒಂದೇ ಆಗಿರುತ್ತದೆ. ನನ್ನ ಆಟದ ಯೋಜನೆ ಕೂಡ ಹೆಚ್ಚು ಬದಲಾಗುವುದಿಲ್ಲ ಮತ್ತು ನಾವು ಆಡುವ ರೀತಿಯ ಕ್ರಿಕೆಟ್ ಕೂಡ ಬದಲಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.