IPL 2022: ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿಕೊಟ್ಟ ಆರೋನ್ ಫಿಂಚ್

| Updated By: ಝಾಹಿರ್ ಯೂಸುಫ್

Updated on: Mar 12, 2022 | 2:28 PM

IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ) ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ.

IPL 2022: ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿಕೊಟ್ಟ ಆರೋನ್ ಫಿಂಚ್
Aaron Finch
Follow us on

ಐಪಿಎಲ್‌ (IPL 2022) ಸೀಸನ್​ 15 ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಹೊರನಡೆದಿದ್ದಾರೆ. ಈ ಮೊದಲು ಗುಜರಾತ್ ಟೈಟನ್ಸ್​ ತಂಡದಲ್ಲಿದ್ದ ಜೇಸನ್ ರಾಯ್ (Jason Roy) ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಸ್ಥಾನ ಪಡೆದಿದ್ದ ಇಂಗ್ಲೆಂಡ್​ನ ಸ್ಪೋಟಕ ಬ್ಯಾಟರ್ ಅಲೆಕ್ಸ್ ಹೇಲ್ಸ್ (Alex Hales)​ ಕೂಡ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಬಯೋಬಬಲ್​ನಲ್ಲಿ ದೀರ್ಘಾವಧಿಯವರೆಗೆ ಆಡುವುದು ಕಷ್ಟ ಎಂದು ಹೇಲ್ಸ್​ ಟೂರ್ನಿಯಿಂದ ಹೊರನಡೆದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರನಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ನಾಯಕ ಆರೋನ್ ಫಿಂಚ್ (Aaron Finch) ಅವರನ್ನು ಆಯ್ಕೆ ಮಾಡಿಕೊಂಡಿದೆ. 2020 ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ್ದ ಆರೋನ್ ಫಿಂಚ್ ಆ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಮೆಗಾ ಹರಾಜಿನಲ್ಲಿ ಹೆಸರು ನೀಡಿದರೂ ಯಾವುದೇ ತಂಡ ಖರೀದಿಸಿರಲಿಲ್ಲ. ಇದೀಗ ಅಲೆಕ್ಸ್ ಹೇಲ್ಸ್ ಹೊರನಡೆಯುತ್ತಿದ್ದಂತೆ ಕೆಕೆಆರ್​ ತಂಡದಲ್ಲಿ ಫಿಂಚ್​​ಗೆ ಸ್ಥಾನ ಸಿಕ್ಕಿದೆ.

ಇನ್ನು ಕೆಕೆಆರ್​ ಆಯ್ಕೆ ಮಾಡಿಕೊಂಡಿರುವ ಆರೋನ್ ಫಿಂಚ್ ಏಪ್ರಿಲ್ 6 ರ ತನಕ ಐಪಿಎಲ್​ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸದಲ್ಲಿರುವ ಕಾರಣ ಫಿಂಚ್ ಕೂಡ ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಪಾಕಿಸ್ತಾನ್-ಆಸ್ಟ್ರೇಲಿಯಾ ಸರಣಿ ಏಪ್ರಿಲ್ 5 ಕ್ಕೆ ಮುಗಿಯಲಿದ್ದು, ಆ ಬಳಿಕವಷ್ಟೇ ಐಪಿಎಲ್​ನಲ್ಲಿ ಭಾಗವಹಿಸಲಿದ್ದಾರೆ.

ಕೆಕೆಆರ್​ ತಂಡವು ಆರೋನ್ ಫಿಂಚ್ ಅವರ ಖರೀದಿಗೆ ಮುಂದಾಗಲು ಮುಖ್ಯ ಕಾರಣ, ಅವರ ಬ್ಯಾಟಿಂಗ್ ಅಂಕಿ ಅಂಶ. ಏಕೆಂದರೆ ಟಿ20 ಅಂತರಾಷ್ಟ್ರೀಯ ಸ್ವರೂಪದಲ್ಲಿ ಫಿಂಚ್ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಫಿಂಚ್ ಇಲ್ಲಿಯವರೆಗೆ 88 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 2 ಶತಕ ಮತ್ತು 15 ಅರ್ಧ ಶತಕಗಳ ನೆರವಿನಿಂದ ಒಟ್ಟು 2686 ರನ್ ಗಳಿಸಿದ್ದಾರೆ. ಇದೇ ಕಾರಣದಿಂದಾಗಿ ಆರೋನ್ ಫಿಂಚ್​ಗೆ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿದೆ. ಇನ್ನು ಎರಡು ಬಾರಿಯ ಚಾಂಪಿಯನ್ ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದ್ದು, ಇದರೊಂದಿಗೆ ಕೆಕೆಆರ್ ತಂಡದ ನೂತನ ನಾಯಕನಾಗಿ ಶ್ರೇಯಸ್ ಅಯ್ಯರ್ ಪದಾರ್ಪಣೆ ಮಾಡಲಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ) ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಚಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ಅಭಿಜೀತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್, ಆರೋನ್ ಫಿಂಚ್

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IPL 2022: Aaron Finch joins KKR as replacement for Alex Hales)