IPL 2022: ಧೋನಿ, ರೋಹಿತ್, ಕೊಹ್ಲಿ ಅಲ್ಲ! ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಮೊದಲು ಹರಾಜಾದ ಆಟಗಾರ ಯಾರು ಗೊತ್ತ?

| Updated By: ಪೃಥ್ವಿಶಂಕರ

Updated on: Feb 10, 2022 | 3:51 PM

IPL 2022 Auction: 2008 ರಲ್ಲಿ, ಪಂದ್ಯಾವಳಿಯು ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು, ಆದರೆ ಆಟಗಾರರನ್ನು ಫೆಬ್ರವರಿಯಲ್ಲಿ ಹರಾಜು ಮಾಡಲಾಯಿತು. ಆ ಹರಾಜಿನಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಆಟಗಾರರು ಮಾತ್ರ ಹರಾಜಿನಲ್ಲಿ ಪಾಲ್ಗೋಳ್ಳುತ್ತಿದ್ದರು.

IPL 2022: ಧೋನಿ, ರೋಹಿತ್, ಕೊಹ್ಲಿ ಅಲ್ಲ! ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಮೊದಲು ಹರಾಜಾದ ಆಟಗಾರ ಯಾರು ಗೊತ್ತ?
2008 ರ ರಾಜಸ್ಥಾನ ತಂಡ
Follow us on

ಐಪಿಎಲ್ 2022 ಹರಾಜಿಗೆ (IPL 2022 Auction) ಇನ್ನು ಕೆಲವೇ ಗಂಟೆಗಳು ಉಳಿದಿವೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಭಾರತ ಸೇರಿದಂತೆ ವಿಶ್ವದ 590 ಆಟಗಾರರು ಹರಾಜಾಗಲಿದ್ದಾರೆ. ಈ ಬಾರಿ ಬಿಡ್ಡಿಂಗ್ ತಂಡಗಳ ಸಂಖ್ಯೆ 8 ರ ಬದಲು 10ಕ್ಕೆ ಏರಿಕೆಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ಈ ಋತುವಿನೊಂದಿಗೆ ಲೀಗ್‌ಗೆ ಪ್ರವೇಶಿಸುತ್ತಿವೆ. ಹೀಗಿರುವಾಗ ಹರಾಜಿನ ಸಂಭ್ರಮ ಮೊದಲಿಗಿಂತ ಇನ್ನಷ್ಟು ಹೆಚ್ಚಾಗಲಿದೆ. ಪ್ರತಿ ವರ್ಷದಂತೆ, ಪಂದ್ಯಾವಳಿಯ ಮೊದಲು ನಡೆಯಲಿರುವ ಹರಾಜಿನ ಬಗ್ಗೆ ಅಭಿಮಾನಿಗಳು ಹೆಚ್ಚು ಕುತೂಹಲದಿಂದ ಕೂಡಿರುತ್ತಾರೆ.ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸುವಂತಹ ವಿಶೇಷ ಸುದ್ದಿಯೊಂದನ್ನು ನಾವೀಗ ನಿಮಗೆ ಹೇಳಲಿದ್ದೇವೆ. ಆ ವಿಶೇಷ ಸಂಗತಿಯೆನೆಂದರೆ 2008 ರಲ್ಲಿ ಮೊದಲ ಭಾರಿಗೆ ಐಪಿಎಲ್ ಪಂದ್ಯಾವಳಿ ಪ್ರಾರಂಭವಾದಾಗ ಮೊದಲ ಹರಾಜಿನ ವೇಳೆ ಮೊದಲು ಯಾವ ಆಟಗಾರರನನ್ನು ಹರಾಜು ಹಾಕಲಾಯಿತು ಎಂಬುದರ ಬಗ್ಗೆ ಆಗಿದೆ.

2008 ರಲ್ಲಿ, ಪಂದ್ಯಾವಳಿಯು ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು, ಆದರೆ ಆಟಗಾರರನ್ನು ಫೆಬ್ರವರಿಯಲ್ಲಿ ಹರಾಜು ಮಾಡಲಾಯಿತು. ಆ ಹರಾಜಿನಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಆಟಗಾರರು ಮಾತ್ರ ಹರಾಜಿನಲ್ಲಿ ಪಾಲ್ಗೋಳ್ಳುತ್ತಿದ್ದರು. ಆಟಗಾರರ ಹರಾಜಿನ ಮೊದಲು, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರನ್ನು ‘ಐಕಾನ್ ಆಟಗಾರರು’ ಎಂದು ತಮ್ಮ ರಾಜ್ಯಗಳ ಫ್ರಾಂಚೈಸಿಗಳ ಭಾಗವಾಗಿ ಮಾಡಲಾಯಿತು. ಅದರ ನಂತರ ಫೆಬ್ರವರಿ 20 ರಂದು ಮೊದಲ ಬಾರಿಗೆ ಹರಾಜು ನಡೆಯಿತು. ಈ ವೇಳೆ ಮೊದಲ ಹರಾಜಿನಲ್ಲಿ ಮೊದಲ ಹೆಸರು ಶೇನ್ ವಾರ್ನ್ ಆಗಿತ್ತು.

ಶೇನ್ ವಾರ್ನ್ ಮೇಲೆ ರಾಜಸ್ಥಾನ ಅತಿ ಹೆಚ್ಚು ಬಿಡ್ ಮಾಡಿದೆ

ಆ ಹೊತ್ತಿಗೆ ಶೇನ್ ವಾರ್ನ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಆದರೆ ಲೆಗ್ ಸ್ಪಿನ್‌ನ ಈ ಜಾದೂಗಾರನನ್ನು ಖರೀದಿಸಲು ತಂಡಗಳಲ್ಲಿ ಕಾತುರವಿತ್ತು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ವಾರ್ನ್​ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ್ ರಾಯಲ್ಸ್ ಶೇನ್ ವಾರ್ನ್ ಅವರನ್ನು 4 ಲಕ್ಷ 50 ಸಾವಿರ ಯುಎಸ್ ಡಾಲರ್‌ಗಳ ಬಿಡ್‌ನೊಂದಿಗೆ ಖರೀದಿಸಿತು. ಜೊತೆಗೆ ವಾರ್ನ್ ಅವರನ್ನು ತಂಡದ ನಾಯಕನನ್ನಾಗಿ ಮಾಡಿತು. ಇದಲ್ಲದೇ ದಕ್ಷಿಣ ಆಫ್ರಿಕಾದ ದಿಗ್ಗಜ ನಾಯಕ ಗ್ರೇಮ್ ಸ್ಮಿತ್, ಭಾರತದ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್, ಆಲ್ ರೌಂಡರ್ ಯೂಸುಫ್ ಪಠಾಣ್ ಮತ್ತು ಶೇನ್ ವ್ಯಾಟ್ಸನ್ ಅವರಂತಹ ಆಟಗಾರರನ್ನು ಸಹ ರಾಜಸ್ಥಾನ ಖರೀದಿಸಿತ್ತು.

ದಂಡ ವಿಧಿಸಿದ ಬಿಸಿಸಿಐ

ಈ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಕಡಿಮೆ ಖರ್ಚು ಮಾಡಿದ್ದರಿಂದ ಬಿಸಿಸಿಐ ಈ ಫ್ರಾಂಚೈಸಿಗೆ ಶಿಕ್ಷೆ ವಿಧಿಸಿತ್ತು. ಹರಾಜಿನ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಯು ಕನಿಷ್ಠ $3.3 ಮಿಲಿಯನ್ ಖರ್ಚು ಮಾಡಬೇಕಾಗಿತ್ತು. ಆದರೆ ರಾಜಸ್ಥಾನವು ಕೇವಲ $2.9 ಮಿಲಿಯನ್ ಖರ್ಚು ಮಾಡಿತ್ತು. ಅಂತಹ ಪರಿಸ್ಥಿತಿಯಲ್ಲಿ, ಫ್ರಾಂಚೈಸಿ ಬಳಿ ಉಳಿದ ಸುಮಾರು $ 4 ಲಕ್ಷ ಹಣವನ್ನು ಬಿಸಿಸಿಐ ದಂಡವಾಗಿ ವಸೂಲಿ ಮಾಡಿತು.

ರಾಜಸ್ಥಾನ ಚೊಚ್ಚಲ ಚಾಂಪಿಯನ್‌

ಮೊದಲ ಸೀಸನ್ ಪ್ರಾರಂಭವಾದಾಗ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಾಗದದ ಮೇಲೆ ದುರ್ಬಲ ತಂಡ ಎಂದು ನಿರ್ಣಯಿಸಲಾಯಿತು. ವಾರ್ನ್, ಸ್ಮಿತ್ ಮತ್ತು ವ್ಯಾಟ್ಸನ್ ಅವರಂತಹ ಹೆಸರುಗಳನ್ನು ಬಿಟ್ಟರೆ ತಂಡದಲ್ಲಿ ದೊಡ್ಡ ಸೂಪರ್‌ಸ್ಟಾರ್ ಯಾರೂ ಇರಲಿಲ್ಲ. ಆದರೆ ಎಲ್ಲರಿಗೂ ಆಶ್ಚರ್ಯವಾಗುವಂತೆ, ಶೇನ್ ವಾರ್ನ್ ಅವರ ಸಮರ್ಥ ನಾಯಕತ್ವದಲ್ಲಿ ತಂಡವು ಫೈನಲ್‌ಗೆ ಪ್ರಯಾಣ ಬೆಳೆಸಿತು. ನಂತರ ಪಂದ್ಯಾವಳಿಯಲ್ಲಿ, ಪ್ರಶಸ್ತಿಗಾಗಿ ದೊಡ್ಡ ಸ್ಪರ್ಧಿಯಾದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಮೊದಲ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ:IPL 2022: ಮೆಗಾ ಹರಾಜಿಗೆ ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿರುವ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ