Virat Kohli: ಆ ಒಂದು ಐಪಿಎಲ್ ಪಂದ್ಯದ ಸೋಲಿನ ಆಘಾತದಿಂದ ನನಗೆ ಈಗಲೂ ಹೊರಬರಲಾಗುತ್ತಿಲ್ಲ; ಕೊಹ್ಲಿ

TV9kannada Web Team

TV9kannada Web Team | Edited By: pruthvi Shankar

Updated on: Feb 07, 2022 | 4:44 PM

Virat Kohli: ಆ ಪಂದ್ಯದಲ್ಲಿ ಸೋಲು ನಿರಾಶಾದಾಯಕವಾಗಿತ್ತು. ನಮಗೆ ಗೆಲ್ಲುವ ಅವಕಾಶ ಸಿಕ್ಕಿತ್ತು. ಜೊತೆಗೆ ನಾವು ಗುರಿಯ ಹತ್ತಿರ ಇದ್ದೆವು. ಆದರೆ ಗೆಲುವು ನಮ್ಮ ಕೈ ಸೇರಲಿಲ್ಲ.

Virat Kohli: ಆ ಒಂದು ಐಪಿಎಲ್ ಪಂದ್ಯದ ಸೋಲಿನ ಆಘಾತದಿಂದ ನನಗೆ ಈಗಲೂ ಹೊರಬರಲಾಗುತ್ತಿಲ್ಲ; ಕೊಹ್ಲಿ
ಕೊಹ್ಲಿ

ವಿರಾಟ್ ಕೊಹ್ಲಿ (Virat Kohli) ಯ ಐಪಿಎಲ್ ವೃತ್ತಿಜೀವನವು ಇದುವರೆಗೆ 207 ಪಂದ್ಯಗಳಿಂದ ಕೂಡಿದೆ. ಈ ಪಂದ್ಯಾವಳಿಯಲ್ಲಿ ಅವರು ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಜೊತೆಗೆ ಅನೇಕ ಪಂದ್ಯಗಳು ಸಹ ಸ್ಮರಣೀಯವಾಗಿವೆ. ಅಂತಹ ಸ್ಮರಣೀಯ ಪಂದ್ಯದ ಬಗ್ಗೆ ಮಾಜಿ ಆರ್​ಸಿಬಿ ನಾಯಕ ಕೊಹ್ಲಿ ಮಾತನಾಡಿದ್ದಾರೆ. 207 ಐಪಿಎಲ್ ಪಂದ್ಯಗಳಲ್ಲಿ ಕೊಹ್ಲಿಗೆ ಈಗಲೂ ಕಾಡುತ್ತಿರುವ ಪಂದ್ಯದ ಬಗ್ಗೆ ವಿರಾಟ್ ಹೇಳಿಕೊಂಡಿದ್ದಾರೆ. ಆ ಪಂದ್ಯ ನಡೆದು ಹಲವು ವರ್ಷಗಳು ಕಳೆದಿದ್ದರು ಸಹ ಕೊಹ್ಲಿ ಆ ಒಂದು ಪಂದ್ಯದ ಸೋಲನ್ನು ಅರಗಿಸಿಕೊಳ್ಳಲಾಗದೆ ಕೊರಗುತ್ತಿದ್ದಾರೆ. ಆ ಪಂದ್ಯ ಯಾವುದು ಎಂಬುದನ್ನು ವಿರಾಟ್ ಕೊಹ್ಲಿ RCB ಪಾಡ್‌ಕಾಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರಕಾರ, ಆ ಪಂದ್ಯ ಐಪಿಎಲ್ 2016 ರ ಫೈನಲ್ ಆಗಿದೆ. ಈ ಪಂದ್ಯದಿಂದ ವಿರಾಟ್ ಕೊಹ್ಲಿ ನೋವು ಅನುಭವಿಸಲು ಕಾರಣವನ್ನೂ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅಥವಾ ಆರ್‌ಸಿಬಿ ಯಾವುದೇ ಐಪಿಎಲ್ ಕಪ್ ಗೆದ್ದಿಲ್ಲ. 2009 ಮತ್ತು 2011 ರ ನಂತರ 2016 ಸೇರಿದಂತೆ ಆರ್​ಸಿಬಿ ತಂಡ 3ನೇ ಬಾರಿಗೆ ಫೈನಲ್ ಆಡಿದೆ. ಅದರಲ್ಲೂ 2016 ರಂದು ನಡೆದ ಐಪಿಎಲ್ ಫೈನಲ್​ ಕೊಹ್ಲಿಗೆ ವಿಶೇಷವಾಗಿದೆ. ಈ ಪಂದ್ಯವು ರಾಯಲ್ ಚಾಲೆಂಜರ್ಸ್‌ನ ತವರು ಮೈದಾನವಾಗಿದ್ದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಕೆಎಲ್ ರಾಹುಲ್ ಅವರಂತಹ ಬಿಗ್ ಸ್ಟಾರ್‌ಗಳು ಆಡುತ್ತಿದ್ದರು. 209 ರನ್‌ಗಳ ಗುರಿ ಬೆನ್ನತ್ತಿದ ತಂಡ ಕೂಡ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿತು. ಆದರೆ, ಇದರ ಹೊರತಾಗಿಯೂ, ಆರ್​ಸಿಬಿ ಐಪಿಎಲ್ 2016 ರ ಫೈನಲ್‌ನಲ್ಲಿ 8 ರನ್‌ಗಳ ಸಣ್ಣ ಅಂತರದಿಂದ ಸೋತಿತ್ತು.

2016ರ ಐಪಿಎಲ್ ಫೈನಲ್‌ ಸೋಲಿನ ನೋವನ್ನು ಕೊಹ್ಲಿ ಇನ್ನೂ ಮರೆತಿಲ್ಲ ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಕೊಹ್ಲಿ, ನಾವು ಇಡೀ ಋತುವಿನಲ್ಲಿ ಆಡಿದ ರೀತಿ ಅದ್ಭುತವಾಗಿತ್ತು. ಅಲ್ಲದೆ ಫೈನಲ್​ ಕೂಡ ಬೆಂಗಳೂರಿನಲ್ಲಿ ಫಿಕ್ಸ್ ಆಗಿತ್ತು. ಹೀಗಾಗಿ ಈ ಪಂದ್ಯ ನಮ್ಮ ಹೆಸರಿಗೆ ಬರೆದಂತೆ ಎಂದು ಎಲ್ಲರೂ ಹೇಳುತ್ತಿದ್ದರು. ಆ ಪಂದ್ಯದಲ್ಲಿ ನಾವು ಉತ್ತಮ ಆರಂಭ ಮಾಡಿದ್ದೇವು. 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆವು. ಅಷ್ಟರಲ್ಲಾಗಲೇ ವಿಜಯದ ತಯಾರಿಯೂ ನಡೆದಿತ್ತು. ಆದರೆ ನಂತರ ನಾವು ಪಂದ್ಯವನ್ನು ಕಳೆದುಕೊಂಡ ರೀತಿ, ನನಗೆ ಇನ್ನೂ ನೋವುಂಟುಮಾಡುತ್ತಿದೆ ಎದು ಕೊಹ್ಲಿ ಹೇಳಿಕೊಂಡಿದ್ದಾರೆ.

ಆ ಪಂದ್ಯದಲ್ಲಿ ಸೋಲು ನಿರಾಶಾದಾಯಕವಾಗಿತ್ತು. ನಮಗೆ ಗೆಲ್ಲುವ ಅವಕಾಶ ಸಿಕ್ಕಿತ್ತು. ಜೊತೆಗೆ ನಾವು ಗುರಿಯ ಹತ್ತಿರ ಇದ್ದೆವು. ಆದರೆ ಗೆಲುವು ನಮ್ಮ ಕೈ ಸೇರಲಿಲ್ಲ. ಇದನ್ನು ಸನ್‌ರೈಸರ್ಸ್ ಹೈದರಾಬಾದ್‌ನ ಅದೃಷ್ಟ ಎಂದು ಕರೆಯಲು ಸಾಧ್ಯವಿಲ್ಲ, ಏಕೆಂದರೆ ಅವರು ಆ ದಿನವೂ ಉತ್ತಮವಾಗಿ ಆಡಿದ್ದರು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

IPL 2021 ರ ನಂತರ RCB ನಾಯಕತ್ವ ತೊರೆದ ಕೊಹ್ಲಿ ಒಟ್ಟಾರೆ ಆ ಸೀಸನ್ ನಂಬಲಸಾಧ್ಯವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಪರೂಪಕ್ಕೆ ಕಾಣಸಿಗುವ ಸೂಪರ್ ಫಾರ್ಮ್‌ನಲ್ಲಿ ನಮ್ಮ ತಂಡದ ಅಗ್ರ ಫಾರ್ಮ್ ಇತ್ತು ಎಂದಿದ್ದಾರೆ. IPL 2021 ರ ಅಂತ್ಯದ ನಂತರ ಕೊಹ್ಲಿ RCB ನಾಯಕತ್ವವನ್ನು ತೊರೆದಿದ್ದಾರೆ. ಅವರನ್ನು ಐಪಿಎಲ್ 2022 ಕ್ಕೆ ಫ್ರಾಂಚೈಸಿ ಉಳಿಸಿಕೊಂಡಿದೆ. ಮತ್ತು, ಈ ಬಾರಿ ಅವರು ಆಟಗಾರನಾಗಿ ಮಾತ್ರ ಆಡಲಿದ್ದಾರೆ. 8 ವರ್ಷಗಳ ಕಾಲ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ ಆಡಿದ ಏಕೈಕ ಕ್ರಿಕೆಟಿಗರಾಗಿದ್ದಾರೆ.

ಇದನ್ನೂ ಓದಿ:IND vs WI: ಕೈ ಬಿಟ್ಟ ಆರ್​ಸಿಬಿ! ಮುಂಬೈ ತಂಡ ಸೇರ್ತಾರಾ ಯಜುವೇಂದ್ರ ಚಹಲ್? ಸುಳಿವು ಕೊಟ್ರಾ ರೋಹಿತ್?

IND vs WI: ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಮಿಂಚಿಂಗ್; ಕೊಹ್ಲಿ- ಸೆಹ್ವಾಗ್ ದಾಖಲೆಯೂ ಉಡೀಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada