- Kannada News Photo gallery Cricket photos india vs west indies Virat Kohli becomes the fastest player to complete 5000 ODI runs at home breaks Sachin Tendulkar record
IND vs WI: ಮೊದಲ ಏಕದಿನ ಪಂದ್ಯದಲ್ಲಿ ಫ್ಲಾಪ್ ಆದರೂ ರನ್ ವಿಚಾರದಲ್ಲಿ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ!
Virat Kohli: ವಿರಾಟ್ ಕೊಹ್ಲಿ ಕೇವಲ 96 ಇನ್ನಿಂಗ್ಸ್‌ಗಳಲ್ಲಿ ತವರು ನೆಲದಲ್ಲಿ 5000 ODI ರನ್‌ಗಳನ್ನು ಪೂರೈಸಿದರು. 121 ಇನ್ನಿಂಗ್ಸ್‌ಗಳಲ್ಲಿ 5000 ರನ್ ಪೂರೈಸಿದ್ದ ಸಚಿನ್ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.
Updated on: Feb 07, 2022 | 3:21 PM

ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಾಗಲೆಲ್ಲಾ ಕೆಲವು ದಾಖಲೆಗಳು ಖಂಡಿತವಾಗಿಯೂ ಮುರಿಯುತ್ತವೆ. ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಬೌಂಡರಿ ಹೊಡೆದ ತಕ್ಷಣ, ಅವರು ತವರು ನೆಲದಲ್ಲಿ ವೇಗವಾಗಿ 5000 ರನ್ ಗಳಿಸಿದ ಆಟಗಾರರಾದರು.

ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ 97 ಟಿ20 ಪಂದ್ಯಗಳಿಂದ 3296 ರನ್ ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ತವರು ನೆಲದಲ್ಲಿ 5000 ODI ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್. ಸಚಿನ್ ತೆಂಡೂಲ್ಕರ್ ತವರಿನಲ್ಲಿ ಅತಿ ಹೆಚ್ಚು 6976 ರನ್ ಗಳಿಸಿದ್ದಾರೆ. ಪಾಂಟಿಂಗ್ ಅವರು ತವರಿನಲ್ಲಿ 5406, ಕಾಲಿಸ್ 5178 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ತವರಿನಲ್ಲಿ 60.25 ಸರಾಸರಿಯಲ್ಲಿ 5000 ರನ್ ಗಳಿಸಿದ್ದಾರೆ. 50ರ ಸರಾಸರಿಯಲ್ಲಿ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳು ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಸಚಿನ್ ತವರಿನಲ್ಲಿ 48.11 ಸರಾಸರಿಯಲ್ಲಿ 6976 ರನ್ ಗಳಿಸಿದ್ದಾರೆ.

ಆದಾಗ್ಯೂ, ಅಹಮದಾಬಾದ್‌ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರೂ, ವಿರಾಟ್ ಕೊಹ್ಲಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 8 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಅಲ್ಜಾರಿ ಜೋಸೆಫ್ ಅವರ ಬೌನ್ಸರ್ ಅವರನ್ನು ಪೆವಿಲಿಯನ್‌ಗೆ ಮರಳುವಂತೆ ಮಾಡಿತು.



















