IND vs WI: ಕೈ ಬಿಟ್ಟ ಆರ್​ಸಿಬಿ! ಮುಂಬೈ ತಂಡ ಸೇರ್ತಾರಾ ಯಜುವೇಂದ್ರ ಚಹಲ್? ಸುಳಿವು ಕೊಟ್ರಾ ರೋಹಿತ್?

IPL 2022 Mega Auction: ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಚಹಲ್ ಅವರನ್ನು ಹೊಗಳಿದ ರೋಹಿತ್, ಚಹಲ್ ತಮ್ಮ ತಂಡದ ಮುಖ್ಯ ಆಟಗಾರ. ಅವರು ಕೂಡ ಅದೇ ಮನಸ್ಥಿತಿಯಿಂದ ಆಡುತ್ತಾರೆ. ನಿಜ, ಅವರ ಪ್ರದರ್ಶನದಲ್ಲೂ ಏಳುಬೀಳುಗಳಿವೆ.

IND vs WI: ಕೈ ಬಿಟ್ಟ ಆರ್​ಸಿಬಿ! ಮುಂಬೈ ತಂಡ ಸೇರ್ತಾರಾ ಯಜುವೇಂದ್ರ ಚಹಲ್? ಸುಳಿವು ಕೊಟ್ರಾ ರೋಹಿತ್?
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Feb 07, 2022 | 3:59 PM

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಯಜುವೇಂದ್ರ ಚಹಲ್ (Yuzvendra Chahal) ಭಾರತದ ಗೆಲುವಿನ ಹೀರೋ ಆದರು. 4 ವಿಕೆಟ್ ಕಬಳಿಸುವ ಮೂಲಕ 6 ವಿಕೆಟ್​ಗಳಿಂದ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಹ ಪರಿಸ್ಥಿತಿಯಲ್ಲಿ, ಭಾರತೀಯ ನಾಯಕ ರೋಹಿತ್ ಶರ್ಮಾ (Rohit Sharma) ಈ ವಿಜಯದ ನಾಯಕನನ್ನು ಹೊಗಳಿದ್ದಲ್ಲದೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ. ಚಹಲ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಭಾಗವಾಗುವ ಮೊದಲು ಮುಂಬೈ ಇಂಡಿಯನ್ಸ್‌ಗಾಗಿ ಆಡಿದ್ದರು. ಈಗ ಮತ್ತೊಮ್ಮೆ ಅವರು ಮನೆಗೆ ಮರಳುವ ಸಾಧ್ಯತೆಗಳಿವೆ. ಮುಂಬೈ ಇಂಡಿಯನ್ಸ್ ತಂಡದ ನಾಯಕರೂ ಆಗಿರುವ ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಚಹಲ್ ಅವರನ್ನು ತಮ್ಮ ಪ್ರಮುಖ ಆಟಗಾರ ಎಂದು ಕರೆದು ಐಪಿಎಲ್ ಹರಾಜಿನ ಬಗ್ಗೆ ನೇರವಾಗಿ ಮಾತನಾಡಿದ್ದರಿಂದ ಈ ಚರ್ಚೆ ಶುರುವಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಯುಜುವೇಂದ್ರ ಚಹಲ್‌ ಅವರನ್ನು ಹೊಗಳಿದ್ದಲ್ಲದೆ ಐಪಿಎಲ್ ಹರಾಜಿನ ಬಗ್ಗೆಯೂ ನೆನಪಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ODI ಪಂದ್ಯದಲ್ಲಿ ಚಹಾಲ್ 9.5 ಓವರ್‌ಗಳನ್ನು ಬೌಲ್ ಮಾಡಿ, ಇದರಲ್ಲಿ 49 ರನ್‌ಗಳಿಗೆ 4 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಇದರಲ್ಲಿ ಕೆರಿಬಿಯನ್ ನಾಯಕ ಪೊಲಾರ್ಡ್ ಅವರ ವಿಕೆಟ್ ಕೂಡ ಸೇರಿತ್ತು. ಈ ಅವಧಿಯಲ್ಲಿ ಚಹಲ್ ಏಕದಿನದಲ್ಲಿ 100ನೇ ವಿಕೆಟ್ ಪಡೆದ ಸಾಧನೆ ಕೂಡ ಮಾಡಿದರು. ನಿಕೋಲಸ್ ಪೂರನ್ ಅವರ 100 ನೇ ಬಲಿಯಾದರು.

ಪಂದ್ಯದ ಯಶಸ್ಸಿಗೆ ಚಹಲ್ ಕಾರಣ ರೋಹಿತ್ ಶರ್ಮಾ ಪಂದ್ಯದ ನಂತರ ಒಂದರಿಂದ ಒಂದು ಸೆಷನ್‌ನಲ್ಲಿ ಚಹಲ್ ಅವರ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದರು. ಮೊದಲು 100ನೇ ವಿಕೆಟಿಗೆ ಅಭಿನಂದನೆ ಸಲ್ಲಿಸಿದ ಅವರು, ನಂತರ ಚಹಲ್ ಬೌಲಿಂಗ್ ಮಾಡುತ್ತಿರುವ ರೀತಿ ನೋಡಿ ಚೆನ್ನಾಗಿದೆ ಎಂದು ಹೇಳಿದರು.

ಈ ಪಂದ್ಯದಲ್ಲಿ ಸಾಧಿಸಿದ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ಚಹಲ್ ರೋಹಿತ್ ಶರ್ಮಾಗೆ ನೀಡಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾನು ಅಷ್ಟೊಂದು ಗೂಗ್ಲಿಂಗ್ ಮಾಡುತ್ತಿಲ್ಲ ಎಂದು ರೋಹಿತ್​ಗೆ ಹೇಳಿದ್ದೆ. ಇದಕ್ಕೆ ಉತ್ತರಿಸಿದ್ದ ರೋಹಿತ್, ನೀವು ಲೆಗ್ ಸ್ಪಿನ್ನರ್‌ನ ಮುಖ್ಯ ಅಸ್ತ್ರ ಗೂಗ್ಲಿ, ಅದನ್ನು ಬಿಡಬೇಡಿ ಎಂದು ಹೇಳಿದ್ದರು. ನೀವು ಹೆಚ್ಚು ಗೂಗ್ಲಿಂಗ್ ಅನ್ನು ಹಾಕಿದರೆ, ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದಿದ್ದರು. ನಾನು ವೆಸ್ಟ್ ಇಂಡೀಸ್ ವಿರುದ್ಧ ಅದರ ಲಾಭ ಪಡೆದಿದ್ದೇನೆ ಎಂದು ಚಹಲ್ ಹೇಳಿಕೊಂಡಿದ್ದಾರೆ.

ಇನ್ನೇನೂ ಐಪಿಎಲ್ ಹರಾಜು ಬರಲಿದೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಚಹಲ್ ಅವರನ್ನು ಹೊಗಳಿದ ರೋಹಿತ್, ಚಹಲ್ ತಮ್ಮ ತಂಡದ ಮುಖ್ಯ ಆಟಗಾರ. ಅವರು ಕೂಡ ಅದೇ ಮನಸ್ಥಿತಿಯಿಂದ ಆಡುತ್ತಾರೆ. ನಿಜ, ಅವರ ಪ್ರದರ್ಶನದಲ್ಲೂ ಏಳುಬೀಳುಗಳಿವೆ. ಹೀಗಾಗಿ ಮೈಂಡ್‌ಸೆಟ್ ಅನ್ನು ಕಾಪಾಡಿಕೊಳ್ಳಬೇಕು. ಇನ್ನೇನೂ ಐಪಿಎಲ್ ಹರಾಜು ಕೂಡ ಬರಲಿದೆ. ಹೀಗಾಗಿ ಚಹಲ್ ನೀಡುವ ಉತ್ತಮ ಪ್ರದರ್ಶನ ಹರಾಜಿನಲ್ಲಿ ಅವರ ಅದೃಷ್ಟವನ್ನು ಬದಲಿಸಬಹುದು ಎಂದಿದ್ದಾರೆ.

ರೋಹಿತ್ ಅವರ ಈ ಮಾತುಗಳಿಂದ ಏನೂ ಸ್ಪಷ್ಟವಾಗಿಲ್ಲ, ಆದರೆ ನಾಯಕನ ಮನಸ್ಸಿನಲ್ಲಿ ಚಹಲ್ ಹೆಸರು ಓಡುತ್ತಿದ್ದರೆ, ಅವರ ಫ್ರಾಂಚೈಸಿ ಅಂದರೆ ಮುಂಬೈ ಇಂಡಿಯನ್ಸ್ ಕೂಡ ಅದರ ಬಗ್ಗೆ ಯೋಚಿಸುತ್ತದೆ ಎಂಬ ಸುಳಿವು ಖಂಡಿತವಾಗಿಯೂ ಇದೆ.

ಇದನ್ನೂ ಓದಿ:IPL 2022: ಕಿಂಗ್ ಕೊಹ್ಲಿಗೆ ಹುಕ್ ಸ್ಟೆಪ್ ಹೇಳಿಕೊಟ್ಟ ಚಹಲ್ ಪತ್ನಿ ಧನಶ್ರೀ ವರ್ಮಾ! ವಿಡಿಯೋ ನೋಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!