IPL 2022: ಐಪಿಎಲ್ ಸೀಸನ್ 15ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳು 11 ಪಂದ್ಯಗಳನ್ನು ಆಡಿದ್ದು, ಇನ್ನುಳಿದಿರುವುದು ಕೆಲವೇ ಕೆಲವು ಪಂದ್ಯಗಳು ಮಾತ್ರ. ಇದಾಗ್ಯೂ ಯಾವುದೇ ತಂಡ ಇನ್ನೂ ಕೂಡ ಪ್ಲೇಆಫ್ ಅನ್ನು ಖಚಿತಪಡಿಸಿಕೊಂಡಿಲ್ಲ ಎಂಬುದು ವಿಶೇಷ. ಏಕೆಂದರೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ 2ನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡಗಳು 16 ಅಂಕ ಪಡೆದುಕೊಂಡಿದೆ. ಈ ಎರಡು ತಂಡಗಳು ಇನ್ನು ಒಂದು ಮ್ಯಾಚ್ ಗೆದ್ದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಮತ್ತೊಂದೆಡೆ 3ನೇ ಸ್ಥಾನದಲ್ಲಿ 14 ಪಾಯಿಂಟ್ ಪಡೆದಿರುವ ರಾಜಸ್ಥಾನ್ ರಾಯಲ್ಸ್ ಇದ್ದರೆ, 4ನೇ ಸ್ಥಾನದಲ್ಲಿ 14 ಅಂಕಗಳೊಂದಿಗೆ ಆರ್ಸಿಬಿ ತಂಡವಿದೆ.
ಇನ್ನು 10 ಪಾಯಿಂಟ್ಸ್ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿವೆ. ಈ ತಂಡಗಳಿಗೆ ಇನ್ನು ಮೂರು ಪಂದ್ಯಗಳು ಬಾಕಿಯಿದ್ದು, ಈ ಮೂರಲ್ಲಿ ಗೆದ್ದು 16 ಪಾಯಿಂಟ್ಸ್ ಪಡೆಯಬಹುದು. ಆದರೆ ಅತ್ತ ಆರ್ಸಿಬಿ ತಂಡಕ್ಕೆ ಇನ್ನೆರೆಡು ಪಂದ್ಯವಿದ್ದು ಆ ಎರಡೂ ಮ್ಯಾಚ್ನಲ್ಲಿ ಗೆದ್ದರೆ ಪ್ಲೇಆಫ್ ಖಚಿತವಾಗಲಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಮುಂದಿನ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದರೆ ಪ್ಲೇಆಫ್ ಆಡುವುದು ಕನ್ಫರ್ಮ್ ಆಗಲಿದೆ.
ಆದರೆ ಇತ್ತ 11 ಮ್ಯಾಚ್ಗಳಲ್ಲಿ ಕೆಕೆಆರ್ ಹಾಗೂ ಸಿಎಸ್ಕೆ ತಂಡಗಳು 4 ಗೆಲುವು ದಾಖಲಿಸಿ 8 ಪಾಯಿಂಟ್ಸ್ ಪಡೆದುಕೊಂಡಿದೆ. ಈ ಎರಡೂ ತಂಡಗಳು ಮುಂದಿನ 3 ಮ್ಯಾಚ್ನಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸುವುದು ಅನುಮಾನ. ಏಕೆಂದರೆ ಮುಂದಿನ ಮೂರು ಮ್ಯಾಚ್ಗಳನ್ನು ಈ ಎರಡೂ ತಂಡಗಳು ಗೆದ್ದರೂ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಒಂದು ವೇಳೆ ಆರ್ಸಿಬಿ ತಂಡವು ಮುಂದಿನ 2 ಮ್ಯಾಚ್ನಲ್ಲಿ ಗೆದ್ದರೆ 18 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ಕೂಡ ಎರಡು ಪಂದ್ಯ ಗೆಲ್ಲುವ ಮೂಲಕ ಪ್ಲೇಆಫ್ ಅನ್ನು ಖಚಿತಪಡಿಸಿಕೊಳ್ಳಬಹುದು.
ಅಂದರೆ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್ಸಿಬಿ ಮುಂದಿನ ಒಂದು ಪಂದ್ಯ ಗೆದ್ದರೆ ಒಟ್ಟು 16 ಪಾಯಿಂಟ್ಸ್ ಆಗಲಿದೆ. ಇದರೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿನ ಅಗ್ರ ನಾಲ್ಕು ತಂಡಗಳ ಪಾಯಿಂಟ್ಸ್ 16 ಆಗಲಿದೆ. ಇತ್ತ ಮುಂದಿನ ಮೂರು ಮ್ಯಾಚ್ಗಳನ್ನು ಗೆದ್ದರೂ ಕೆಕೆಆರ್ ಹಾಗೂ ಸಿಎಸ್ಕೆ ತಂಡಗಳ ಒಟ್ಟು ಪಾಯಿಂಟ್ಸ್ ಆಗುವುದು ಕೇವಲ 14 ಮಾತ್ರ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್ಸಿಬಿ ತಂಡಗಳು ಮುಂದಿನ ಪಂದ್ಯ ಗೆದ್ದರೆ ಪ್ಲೇಆಫ್ ರೇಸ್ನಿಂದ ಸಿಎಸ್ಕೆ ಹಾಗೂ ಕೆಕೆಆರ್ ತಂಡಗಳು ಅಧಿಕೃತವಾಗಿ ಹೊರಬೀಳಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:29 pm, Mon, 9 May 22