15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ವೇದಿಕೆ ಸಜ್ಜಾಗಿದೆ. ಇದೇ ಮಾರ್ಚ್ 26, 2022 ರಂದು ಐಪಿಎಲ್ 2022ಕ್ಕೆ (IPL 2022) ಚಾಲನೆ ಸಿಗಲಿದೆ. ಈ ಬಾರಿ ಒಟ್ಟು 10 ತಂಡಗಳು ಒಂದು ಟ್ರೋಫಿಗಾಗಿ ಕಾದಾಟ ನಡೆಸಲಿದೆ. 74 ಪಂದ್ಯಗಳ ಕಾದಾಟದ ರುಚಿ ಸವಿಯಲು ಅಭಿಮಾನಿಗಳಂತು ಕಾದು ಕುಳಿತಿದ್ದಾರೆ. ಶನಿವಾರದ ಮೊದಲ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಮುಖಾಮುಖಿ ಆಗಲಿದೆ. ಇದು ನೂತನ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ (Ravindra Jadeja) ಅವರಿಗೂ ಅಗ್ನಿ ಪರೀಕ್ಷೆಯಾಗಿದೆ. ಐಪಿಎಲ್ 2022 ದಾಖಲೆ ಎಂಬಂತೆ ಬರೋಬ್ಬರಿ 120ಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾರಣಲಿದೆ. ಈ ಬಾರಿ ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಬೇಕು. ವಿಶೇಷವಾಗಿ ಈ ಬಾರಿಯ ಐಪಿಎಲ್ ಅನ್ನು ಉಚಿತವಾಗಿ ನೋಡಬಹುದು. ಅದುಹೇಗೆ? ಇಲ್ಲಿದೆ ನೋಡಿ.
ಏರ್ಟೆಲ್ ರಿಚಾರ್ಜ್ ಮೂಲಕ ಐಪಿಎಲ್ ಫ್ರೀ ಆಗಿ ನೋಡಿ:
ನಿಮಗೆಲ್ಲ ತಿಳಿದಿರುವ ಹಾಗೆ ಐಪಿಎಲ್ 2022 ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಕಾಣಲಿದೆ. ಏರ್ಟೆಲ್ನಲ್ಲಿ ರಿಚಾರ್ಜ್ ಮಾಡುವ ಮೂಲಕ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆಯನ್ನು ನೀವು ಪಡೆದು ಉಚಿತವಾಗಿ ವೀಕ್ಷಿಸಬಹುದು. ಹಾಗಾದ್ರೆ ಏರ್ಟೆಲ್ ಜೊತೆಗೆ ಜಿಯೋ, ವೊಡೊಫೋನ್ ಐಡಿಯಾ ದಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ ಪ್ಲಾನ್ ಪಡೆದುಕೊಳ್ಳುವುದು ಹೇಗೆ, ಎಷ್ಟು ರೂ. ರಿಚಾರ್ಜ್ ಮಾಡಬೇಕು ಎಂಬುದನ್ನು ನೋಡೋಣ.
ಏರ್ಟೆಲ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ಲಾನ್:
ಜಿಯೋ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ಲಾನ್:
ವಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ಲಾನ್:
ಐಪಿಎಲ್ ಅಧಿಕೃತ ಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಸ್ಟಾರ್ ನೆಟ್ವರ್ಕ್ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್ಸ್ಟಾರ್ನಲ್ಲಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಪಡೆದುಕೊಳ್ಳಬಹುದು. ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ. ಯುಕೆ ಮತ್ತು ಐರ್ಲೆಂಡ್ ನಲ್ಲಿ ಸ್ಕೈ ಸ್ಫೋರ್ಟ್ಸ್ ಮೂಲಕ ಐಪಿಎಲ್ 2022 ಲೈವ್ ವೀಕ್ಷಿಸಬಹುದು. ಅಂತೆಯೆ ಯುಎಸ್ ಎ ಮತ್ತು ಕೆನಡಾದವರು ವಿಲ್ಲೋ ಟಿವಿ, ಸೌತ್ ಆಫ್ರಿಕಾ ಮತ್ತು ನಾರ್ಥ್ ಆಫ್ರಿಕಾದವರು ಸೂಪರ್ ಸ್ಫೋರ್ಟ್ಸ್ ನಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನವರು ಫಾಕ್ಸ್ ಸ್ಫೋರ್ಟ್ಸ್ ಮೂಲಕ ನೇರಪ್ರಸಾರ ನೋಡಬಹುದು.
MS Dhoni: ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ