KL Rahul: ದಾಖಲೆಯ ಮೊತ್ತಕ್ಕೆ ಕೆಎಲ್ ರಾಹುಲ್​ರನ್ನು ಖರೀದಿಸಿದ ಲಖನೌ: ಹಾರ್ದಿಕ್ ಕೂಡ ಸೇಲ್

| Updated By: Vinay Bhat

Updated on: Jan 22, 2022 | 8:30 AM

Hardik Pandya: ಐಪಿಎಲ್ 2022ರ ಹೊಸ ಫ್ರಾಂಚೈಸಿಗಳಾದ ಲಖನೌ ಮತ್ತು ಅಹಮದಾಬಾದ್ ದೊಡ್ಡ ಅಪ್ಡೇಟ್ ಒಂದನ್ನು ನೀಡಿದೆ. ಕೆಎಲ್ ರಾಹುಲ್ ಲಖನೌಗೆ ಮತ್ತು ಹಾರ್ದಿಕ್ ಪಾಂಡ್ಯ ಅಹಮದಾಬಾದ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರಂತೆ.

KL Rahul: ದಾಖಲೆಯ ಮೊತ್ತಕ್ಕೆ ಕೆಎಲ್ ರಾಹುಲ್​ರನ್ನು ಖರೀದಿಸಿದ ಲಖನೌ: ಹಾರ್ದಿಕ್ ಕೂಡ ಸೇಲ್
KL Rahul and Hardik Pandya IPL 2022
Follow us on

2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಕ್ರಿಕೆಟ್ ಟೂರ್ನಿ ಯಾವಾಗ?, ಎಲ್ಲಿ ನಡೆಯಲಿದೆ?, ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲೇ ನಡೆಯುತ್ತಾ? ಹೀಗೆ ನಾನ ಪ್ರಶ್ನೆಗಳು ಹುಟ್ಟುಕೊಂಡಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಐಪಿಎಲ್ ಫ್ರಾಂಚೈಸ್‌ ಮಾಲೀಕರು ಇಂದು ಐಪಿಎಲ್ 2022 ವಿಧ್ಯಾಮಾನಗಳ ಕುರಿತು ಚರ್ಚಿಸಲು ಸಭೆ ಸೇರಲಿದ್ದಾರೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದ್ದು ಅದರ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ನಡುವೆ ಹೊಸ ಫ್ರಾಂಚೈಸಿಗಳಾದ ಲಖನೌ ಮತ್ತು ಅಹಮದಾಬಾದ್ ದೊಡ್ಡ ಅಪ್ಡೇಟ್ ಒಂದನ್ನು ನೀಡಿದೆ. ತಂಡದ ನಾಯಕನನ್ನು ಮತ್ತು ಹೊಸ ಆಟಗಾರರನ್ನು ಆಯ್ಕೆ ಮಾಡಿದ ಬಗ್ಗೆ ಮಾಹಿತಿ ನೀಡಿದೆ. ಕ್ರಿಕ್ ಇನ್ಫೊ ವೆಬ್‌ಸೈಟ್ ಮಾಡಿರುವ ವರದಿಯ ಪ್ರಕಾರ, ಕೆಎಲ್ ರಾಹುಲ್ (KL Rahul) ಲಖನೌಗೆ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅಹಮದಾಬಾದ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರಂತೆ.

ಕೆಎಲ್‌ ರಾಹುಲ್ ಅವರನ್ನು ಬರೋಬ್ಬರಿ 17 ಕೋಟಿ ರೂ. ಮೊತ್ತಕ್ಕೆ ಲಖನೌ ಫ್ರಾಂಚೈಸ್ ಖರೀದಿಸಿದೆ. ಈ ಮೂಲಕ ಲೀಗ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ. ಇನ್ನಿಬ್ಬರು ಆಟಗಾರರನ್ನು ಲಖನೌ ಖರೀದಿ ಮಾಡಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಮಾರ್ಕಸ್ ಸ್ಟೋಯಿನಿಸ್ ಅವರನ್ನು 9.2 ಕೋಟಿ ಮೊತ್ತಕ್ಕೆ ಮತ್ತು ಈ ಹಿಂದೆ ಪಂಜಾಬ್ ಕಿಂಗ್ಸ್​ನಲ್ಲಿದ್ದ ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಅವರನ್ನು 4 ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ಬಗ್ಗೆ ಲಖನೌ ಫ್ರಾಂಚೈಸ್‌ ಮಾಲೀಕ ಆರ್‌.ಪಿ.ಸಂಜೀವ್‌ ಗೋಯೆಂಕಾ ಖಚಿತ ಪಡಿಸಿದ್ದಾರೆ.

ಐಪಿಎಲ್‌ 2020 ಮತ್ತು ಐಪಿಎಲ್‌ 2021 ಟೂರ್ನಿಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದ ಕೆಎಲ್‌ ರಾಹುಲ್‌, ಬಳಿಕ ತಂಡದಿಂದ ಹೊರಬರುವ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕೆ ಪಂಜಾಬ್‌ ತಂಡ ತಾನು ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ರಾಹುಲ್‌ ಅವರನ್ನು ಹೆಸರಿಸದೇ ಹರಾಜಿಗೆ ಬಿಟ್ಟುಕೊಟ್ಟಿತ್ತು. ರಾಹುಲ್‌ ಐಪಿಎಲ್‌ನಲ್ಲಿ ಈವರೆಗೆ ಒಟ್ಟು 2548 ರನ್‌ಗಳನ್ನು ಗಳಿಸಿದ್ದಾರೆ.

2014ರಲ್ಲಿ ಮೊದಲ ಬಾರಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆಯ್ಕೆಯಾಗಿದ್ದ ಕೆಎಲ್‌ ರಾಹುಲ್‌ ಅವರನ್ನು 2015ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ನಂತರ ಬರೋಬ್ಬರಿ 11 ಕೋಟಿ ರೂ.ಗಳ ಭಾರತ ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ತಂಡ ಅವರನ್ನು ಖರೀದಿ ಮಾಡಿತ್ತು.

ಇನ್ನು ಅಹಮದಾಬಾದ್ ಫ್ರಾಂಚೈಸ್ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂ. ಮೊತ್ತಕ್ಕೆ ಖರೀದಿಸಿ ನಾಯಕನನ್ನಾಗಿ ನೇಮಕ ಮಾಡಿದೆ. ಇವರ ಜೊತೆಗೆ ರಶೀದ್ ಖಾನ್ ಮತ್ತು ಶುಭ್ಮನ್ ಗಿಲ್ ಅವರನ್ನು ಕೂಡ ಈ ಫ್ರಾಂಚೈಸ್ ಖರೀದಿಸಿದೆ. ರಶೀದ್ ಅವರನ್ನು ಕೂಡ 15 ಕೋಟಿ ಮೊತ್ತಕ್ಕೆ ಖರೀದಿ ಮಾಡಲಾಗಿದೆ. ಅಹಮದಾಬಾದ್ ಫ್ರಾಂಚೈಸಿಯು ಆಶಿಷ್ ನೆಹ್ರಾ, ಗ್ಯಾರಿ ಕರ್ಸ್ಟನ್ ಅವರನ್ನು ಕೋಚ್ ಗಳಾಗಿ ಆಯ್ಕೆ ಮಾಡಿದೆ. ಸದ್ಯ ಸರ್ರೆ ತಂಡದ ಮುಖ್ಯ ಕೋಚ್ ವಿಕ್ರಮ್ ಸೋಲಂಕಿ ಅವರನ್ನು ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿದೆ.

South Africa vs India: ಕೊಹ್ಲಿ ನಾಯಕತ್ವ ತೊರೆದ ಬಳಿಕ ಬರೀ ಸೋಲು: ಹರಿಣಗಳ ನಾಡಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ

Published On - 8:30 am, Sat, 22 January 22