South Africa vs India: ಕೊಹ್ಲಿ ನಾಯಕತ್ವ ತೊರೆದ ಬಳಿಕ ಬರೀ ಸೋಲು: ಹರಿಣಗಳ ನಾಡಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ

India vs South Africa 2nd ODI: ಪಾರ್ಲ್​ನ ಬೋಲೆಂಡ್ ಪಾರ್ಕ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಹೀನಾಯವಾಗಿ ಸೋಲು ಕಾಣುವ ಮೂಲಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನೂ ಕೈಚೆಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ ಎಂಬುದು ಇಲ್ಲಿ ಗಮನಾರ್ಹ.

South Africa vs India: ಕೊಹ್ಲಿ ನಾಯಕತ್ವ ತೊರೆದ ಬಳಿಕ ಬರೀ ಸೋಲು: ಹರಿಣಗಳ ನಾಡಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ
IND vs SA 2nd ODI
Follow us
TV9 Web
| Updated By: Vinay Bhat

Updated on: Jan 22, 2022 | 7:34 AM

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಸೇಡು ಏಕದಿನ ಸರಣಿಯಲ್ಲಿ ತೀರಿಸಿಕೊಳ್ಳುವ ಯೋಜನೆ ಹಾಕಿದ್ದ ಭಾರತಕ್ಕೆ (India vs South Africa) ಭಾರೀ ಮುಖಭಂಗವಾಗಿದೆ. ಶುಕ್ರವಾರ ಪಾರ್ಲ್​ನ ಬೋಲೆಂಡ್ ಪಾರ್ಕ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಹೀನಾಯವಾಗಿ ಸೋಲು ಕಾಣುವ ಮೂಲಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನೂ ಕೈಚೆಲ್ಲಿದೆ. ವಿರಾಟ್ ಕೊಹ್ಲಿ (Virat Kohli) ನಾಯಕತ್ವ ತ್ಯಜಿಸಿದ ಬಳಿಕ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ ಎಂಬುದು ಇಲ್ಲಿ ಗಮನಾರ್ಹ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ಏಕದಿನ ಸರಣಿಯಲ್ಲಿ ಭಾರತವನ್ನ ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ (KL Rahul) ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾಗಿದ್ದಾರೆ. ಭಾರತ 7 ವಿಕೆಟ್‌ಗಳ ಸೋಲನುಭವಿಸಿ ಸರಣಿ ಕಳೆದುಕೊಂಡಿದೆ. ಟೆಸ್ಟ್‌ ಜತೆಗೆ ಏಕದಿನ ಸರಣಿ ಕೂಡ ಆತಿಥೇಯರ ಪಾಲಾಗಿದೆ. ಬ್ಯಾಟಿಂಗಿಗೆ ಉತ್ತಮ ನೆರವು ನೀಡುತ್ತಿದ್ದ ಟ್ರ್ಯಾಕ್ ನಲ್ಲಿ ಭಾರತ 6 ವಿಕೆಟಿಗೆ 287 ರನ್‌ ಗಳಿಸಿದರೆ, ಇದನ್ನು ನಿರಾಯಾಸವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 288 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಶಿಖರ್ ಧವನ್ ಜೊತೆ ನಾಯಕ ಕೆಎಲ್ ರಾಹುಲ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ63 ರನ್ ಸೇರಿಸಲು ಕಾರಣರಾದರು. ಆದರೆ 12ನೇ ಓವರ್‌ನಲ್ಲಿ ಏಡನ್ ಮಾರ್ಕರಂ ಬೌಲಿಂಗ್‌ನಲ್ಲಿ ಧವನ್ ಔಟಾಗುವುದರೊಂದಿಗೆ ಈ ಜೊತೆಯಾಟವೂ ಮುರಿದುಬಿತ್ತು. ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಐದು ಎಸೆತಗಳನ್ನು ಆಡಿ ಸೊನ್ನೆ ಸುತ್ತಿದರು. ಅವರು ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ದಾಖಲಿಸಿದ್ದರು. ಆದರೆ ಇಲ್ಲಿ ಅವರು ಖಾತೆ ತೆರೆಯಲಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಮಿಂಚಿದ್ದ ರಿಷಭ್ ಪಂತ್ ಇಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಿಭೆ ಮೆರೆದರು. ರಾಹುಲ್ ಜೊತೆಗೂಡಿದ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 115 ಸೇರಿಸಿದರು. ಪಂತ್ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಉತ್ತಮ ಮೊತ್ತ ಕಲೆಹಾಕಿದ ಸಾಧನೆ ಮಾಡಿದರು. ಆದರೆ ತಂಡದ ಮೊತ್ತವು 200ರ ಗಡಿ ದಾಟುವ ಮುನ್ನವೇ ಇಬ್ಬರೂ ಔಟಾದರು. ಪಂತ್ 71 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್​ನೊಂದಿಗೆ 85 ರನ್ ಸಿಡಿಸಿದರೆ, ರಾಹುಲ್ 79 ಎಸೆತಗಳಲ್ಲಿ 55 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಿದ ಶಾರ್ದೂಲ್ ಠಾಕೂರ್ (ಔಟಾಗದೆ 40) ಮತ್ತು ಅಶ್ವಿನ್ (ಔಟಾಗದೆ 25) ತಂಡದ ಮೊತ್ತ ಹೆಚ್ಚಿಸಿದರು. ಪರಿಣಾಮ ಭಾರತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್​ ಕಲೆಹಾಕಿತು. ಆದರೆ, ಈ ಮೊತ್ತ ಹರಿಣಗಳಿಗೆ ಸವಾಲಾಗಲೇ ಇಲ್ಲ.

ಗೆಲ್ಲಲು 288 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು. 3ನೇ ಅರ್ಧಶತಕ ಸಿಡಿಸಿದ ಮಲನ್ (91 ರನ್) ಹಾಗೂ 36 ಎಸೆತಗಳಲ್ಲಿ 28ನೇ ಅರ್ಧಶತಕ ಪೂರೈಸಿದ ಡಿಕಾಕ್ (78 ರನ್) ಮೊದಲ ವಿಕೆಟ್‌ಗೆ 132 ರನ್ ಸೇರಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಮರ್ಕ್ರಮ್ (ಔಟಾಗದೆ 37) ಹಾಗೂ ವಾನ್‌ಡರ್ ಡುಸ್ಸೆನ್ (ಔಟಾಗದೆ 37 ರನ್) 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಗಳಿಸಿ ಸೇರಿಸಿ ಗೆಲುವಿಗೆ ಕಾರಣರಾದರು.

ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆದ ಭಾರತ ಮೊದಲೆರಡು ಏಕದಿನ ಪಂದ್ಯದಲ್ಲಿ ಸೋಲನ್ನ ಕಂಡಿತು. ಜೊತೆಗೆ ರಾಹುಲ್ ಕೆಟ್ಟ ದಾಖಲೆಯನ್ನೂ ಬರೆದರು. ಅಜಿತ್ ವಾಡೇಕರ್, ದಿಲೀಪ್ ವೆಂಗಸರ್ಕಾರ್, ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಮೊಹಮ್ಮದ್ ಅಜರುದ್ದೀನ್ ಬಳಿಕ ತಮ್ಮ ಮೊದಲೆರಡು ಪಂದ್ಯ ಸೋತ ಭಾರತದ ನಾಯಕರ ಪಟ್ಟಿಗೆ ಕೆ.ಎಲ್ ರಾಹುಲ್ ಕೂಡ ಸೇರ್ಪಡೆಗೊಂಡರು.

IND vs SA: 2ನೇ ಏಕದಿನ ಪಂದ್ಯ ಗೆದ್ದ ಆಫ್ರಿಕಾ; ಟೆಸ್ಟ್ ಜೊತೆಗೆ ಏಕದಿನ ಸರಣಿಯನ್ನೂ ಕಳೆದುಕೊಂಡ ಭಾರತ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್