IPL 2022: ಒಂದು ತಂಡದಲ್ಲಿ ಕನಿಷ್ಠ 12 ಆಟಗಾರರು: ಏನಿದು ಐಪಿಎಲ್​ನ ಹೊಸ ನಿಯಮ?

| Updated By: ಝಾಹಿರ್ ಯೂಸುಫ್

Updated on: Mar 15, 2022 | 8:32 PM

IPL 2022: ಪಾಯಿಂಟ್​ ಟೇಬಲ್​ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ 10 ತಂಡಗಳಿಗೂ ಒಂದೇ ಪಾಯಿಂಟ್ ಟೇಬಲ್​ ಇರಲಿದೆ. ಇಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇ ಆಫ್​ಗೆ ಪ್ರವೇಶಿಸಲಿದೆ.

IPL 2022: ಒಂದು ತಂಡದಲ್ಲಿ ಕನಿಷ್ಠ 12 ಆಟಗಾರರು: ಏನಿದು ಐಪಿಎಲ್​ನ ಹೊಸ ನಿಯಮ?
Ipl 2022
Follow us on

ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದರೂ ಇನ್ನೂ ಕೂಡ ಬಿಸಿಸಿಐಗೆ ಕೊರೋನಾ ಆತಂಕ ದೂರವಾಗಿಲ್ಲ. ಏಕೆಂದರೆ ಕಳೆದ ಬಾರಿ ಕೊರೋನಾ ಕಾರಣದಿಂದಲೇ ಐಪಿಎಲ್​ ಅನ್ನು ಎರಡು ಬಾರಿ ಆಯೋಜಿಸಬೇಕಾದ ಅನಿವಾರ್ಯತೆ ಬಂದಿತ್ತು. ಇದನ್ನೆಲ್ಲಾ ಪರಿಗಣಿಸಿ ಈ ಬಾರಿ ಬಿಸಿಸಿಐ ಐಪಿಎಲ್ ಆಯೋಜನೆಗೆ ವಿಶೇಷ ನಿಯಮಗಳನ್ನು ರೂಪಿಸಿದೆ. ಈ ನಿಯಮದಲ್ಲಿ ಎಲ್ಲರ ಗಮನ ಸೆಳೆದಿರುವ ಒಂದು ನಿಯಮವೆಂದರೆ ಕನಿಷ್ಠ 12 ಆಟಗಾರರು ಅತ್ಯಗತ್ಯ. ಅಂದರೆ ಈ ಬಾರಿ ಒಂದು ತಂಡವು ಐಪಿಎಲ್ ಆಡಬೇಕಿದ್ದರೆ ಆ ತಂಡದಲ್ಲಿ 12 ಆಟಗಾರರು ಇರಲೇಬೇಕು. ಪ್ರಸ್ತುತ 10 ತಂಡಗಳಲ್ಲಿ 20 ಕ್ಕಿಂತ ಹೆಚ್ಚಿನ ಆಟಗಾರರಿದ್ದಾರೆ. ಆದರೆ ಆಟಗಾರರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡರೆ ಎಂಬ ಭೀತಿಯಲ್ಲಿ ಬಿಸಿಸಿಐ ಈ ನಿಯಮವನ್ನು ಫ್ರಾಂಚೈಸಿಗಳ ಮುಂದಿಟ್ಟಿದೆ.

ಈ ಬಾರಿ ಕೊರೋನಾತಂಕದ ಕಾರಣ ಐಪಿಎಲ್​ ಅನ್ನು ನಾಲ್ಕು ಸ್ಟೇಡಿಯಂಗಳಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿನ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ. ಈ ವೇಳೆ ಯಾವುದೇ ತಂಡದಲ್ಲಿ ಕೋವಿಡ್​ ಪಾಸಿಟಿವ್​ ಪ್ರಕರಣಗಳು ಕಂಡು ಬಂದು, ಹೆಚ್ಚಿನ ಆಟಗಾರರು ಹೊರಗುಳಿದರೆ ಏನು ಮಾಡೋದು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಬಿಸಿಸಿಐ ಕನಿಷ್ಠ 12 ಆಟಗಾರರ ನಿಯಮವನ್ನು ರೂಪಿಸಿದೆ.

ಏನಿದು 12 ಆಟಗಾರರ ನಿಯಮ?
ಪ್ಲೇಯಿಂಗ್​ನಲ್ಲಿ 11 ಆಟಗಾರರು (ಅದರಲ್ಲಿ ಏಳು ಮಂದಿ ಭಾರತೀಯ ಆಟಗಾರರು ಇರಬೇಕು) ಮತ್ತು ಒಬ್ಬ ಬದಲಿ ಆಟಗಾರ ಸೇರಿದಂತೆ ಒಟ್ಟು ಒಂದು ತಂಡದಲ್ಲಿ 12 ಆಟಗಾರರು ಇರಬೇಕು. ಒಂದು ವೇಳೆ ಕೊರೋನಾ ಸೋಂಕಿಗೆ ಒಳಗಾಗಿ ಬಹುತೇಕ ಆಟಗಾರರು ಕ್ವಾರಂಟೈನ್​ ಒಳಗಾದರೆ, ಆ ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಅಂದಿನ ಪಂದ್ಯವನ್ನು ಕೈಬಿಡಲಾಗುತ್ತದೆ. ಅಷ್ಟೇ ಅಲ್ಲದೆ ಆ ತಂಡದ ಪಂದ್ಯವನ್ನು ಮುಂದೂಡಿ ಬೇರೊಂದು ದಿನ ಆಡಿಸಲು ಬಿಸಿಸಿಐ ನಿಯಮ ರೂಪಿಸಿದೆ. ಅದರಂತೆ ಕೋವಿಡ್ ಸೋಂಕು ಕಾಣಿಸಿಕೊಂಡು ಸಮಸ್ಯೆ ಎದುರಾದರೆ, ಒಂದು ತಂಡದಲ್ಲಿ ಬದಲಿ ಆಟಗಾರ ಸೇರಿ ಒಟ್ಟು 12 ಆಟಗಾರರು ಇದ್ದರೆ ಮಾತ್ರ ಪಂದ್ಯವನ್ನು ಆಡಿಸಲಾಗುತ್ತದೆ. ಈ ಪಂದ್ಯದ ಮರುವೇಳಾಪಟ್ಟಿಯನ್ನು ಐಪಿಎಲ್ ಟೆಕ್ನಿಕಲ್ ಸಮಿತಿ ನಿರ್ಧರಿಸಲಿದೆ. ಹೀಗಾಗಿ ಕೊರೋನಾತಂಕ ಎದುರಾದರೂ ತಂಡದಲ್ಲಿ 12 ಆಟಗಾರರಿದ್ದರೆ ಪಂದ್ಯ ನಡೆಯುವುದು ಖಚಿತ.

ಹೇಗಿರಲಿದೆ ಐಪಿಎಲ್ 2022:
ಈ ಬಾರಿ ಐಪಿಎಲ್​ನ (IPL 2022 format explained) ಫಾರ್ಮಾಟ್ ಬದಲಿಸಲಾಗಿದ್ದು, ಅದರಂತೆ ಈ ಬಾರಿ​ ಒಟ್ಟು 10 ತಂಡಗಳು ಎರಡು ಗುಂಪುಗಳಾಗಿ ಕಣಕ್ಕಿಳಿಯಲಿದೆ. ಈ ಹಿಂದಿನ ಫಾರ್ಮಾಟ್​ನಲ್ಲಿ ಪಂದ್ಯ ನಡೆಸಿದರೆ ಒಟ್ಟು 94 ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಬಿಸಿಸಿಐ (BCCI) ರೌಂಡ್ ರಾಬಿನ್ ಫಾರ್ಮಾಟ್​ನಲ್ಲಿ ಟೂರ್ನಿ ನಡೆಸಲಿದೆ. ಅಂದರೆ ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆ ಬಳಿಕ ತಲಾ 14 ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಗ್ರೂಪ್ A-ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಆ ಬಳಿಕ ಗ್ರೂಪ್ ಬಿ-ನಲ್ಲಿರುವ ತಂಡದ ವಿರುದ್ದ ಒಂದೊಂದು ಪಂದ್ಯವಾಡಲಿದೆ. ಇದೇ ಮಾದರಿಯಲ್ಲಿ ಗ್ರೂಪ್ ಬಿ ತಂಡಗಳು ಕೂಡ ಆಡಲಿದೆ.

ಉದಾಹರಣೆಗೆ: ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಗ್ರೂಪ್ B-ನಲ್ಲಿದ್ದು, ತನ್ನದೇ ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಇಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 8 ಆಗುತ್ತೆ. ಹಾಗೆಯೇ ಗ್ರೂಪ್ A-ನಲ್ಲಿರುವ 5 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಪ್ರತಿ ತಂಡಗಳ ಪಂದ್ಯಗಳ ಸಂಖ್ಯೆ 13 ಆಗಲಿದೆ. ಇದರ ಜೊತೆಗೆ ಗ್ರೂಪ್ A ನಲ್ಲಿರುವ ಒಂದು ತಂಡದ ವಿರುದ್ದ ಎರಡು ಪಂದ್ಯ ಆಡಲಿದೆ. ಈ ಮೂಲಕ 14 ಪಂದ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ಈ ಬಾರಿ ಆರ್​ಸಿಬಿ ಗ್ರೂಪ್ ಎ ನಲ್ಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಅಂದರೆ ಪ್ರತಿ ತಂಡಗಳು 5 ತಂಡಗಳ ವಿರುದ್ದ ತಲಾ ಎರೆಡೆರಡು ಪಂದ್ಯಗಳನ್ನು ಹಾಗೂ ನಾಲ್ಕು ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಿದೆ. ಈ ಮೂಲಕ ಒಟ್ಟು 70 ಲೀಗ್ ಪಂದ್ಯಗಳನ್ನು ಆಡಲಿದೆ.

ಇದಾಗ್ಯೂ ಪಾಯಿಂಟ್​ ಟೇಬಲ್​ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ 10 ತಂಡಗಳಿಗೂ ಒಂದೇ ಪಾಯಿಂಟ್ ಟೇಬಲ್​ ಇರಲಿದೆ. ಇಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇ ಆಫ್​ಗೆ ಪ್ರವೇಶಿಸಲಿದೆ. ಇನ್ನು ಪ್ಲೇಆಫ್​ ಈ ಹಿಂದಿನಂತೆ ಇರಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯ, ಬಳಿಕ ಎಲಿಮಿನೇಟರ್ ಪಂದ್ಯ…ಆ ನಂತರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಅದರಂತೆ ಫೈನಲ್ ಸೇರಿದಂತೆ ಪ್ಲೇಆಫ್​ನಲ್ಲಿ 4 ಪಂದ್ಯಗಳನ್ನು ಆಡಲಾಗುತ್ತದೆ.

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್