ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಹರಾಜು ಪ್ರಕ್ರಿಯೆಯ ದಿನಾಂಕವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಂಗಳವಾರ ಪ್ರಕಟ ಮಾಡಿದೆ. ಅಂದಕೊಂಡಂತೆ ಐಪಿಎಲ್ 2022 ಮೆಗಾ ಆಕ್ಷನ್ (IPL 2022 Mega Auction) ಎರಡು ದಿನಗಳ ಕಾಲ ಫೆಬ್ರವರಿ 12 ಮತ್ತು 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಮೆಗಾ ಹರಾಜಿಗಾಗಿ ಒಟ್ಟು 1,214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಇದನ್ನ ಐಪಿಎಲ್ ಆಡಳಿತ ಮಂಡಳಿ ಶಾರ್ಟ್ ಲಿಸ್ಟ್ ಮಾಡಿದ್ದು 590 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 228 ಮಂದಿ ರಾಷ್ಟ್ರೀಯ ತಂಡದ ಪರ ಆಡಿದವರು ಮತ್ತು 355 ಮಂದಿ ಅನ್ಕ್ಯಾಪ್ ಆಟಗಾರರಾಗಿದ್ದಾರೆ. ವಿಶೇಷ ಎಂದರೆ ಹರಾಜು ಪ್ರಕ್ರಿಯೆಯಲ್ಲಿ ನಮೀಬಿಯಾ ದೇಶದ 3 ಆಟಗಾರರು, ನೇಪಾಳದ ಒಬ್ಬ ಆಟಗಾರ, ಸ್ಕಾಟ್ಲೆಂಡ್ನ ಇಬ್ಬರು ಮತ್ತು ಯುಎಸ್ಎಯ ಓರ್ವ ಆಟಗಾರ ಹರಾಜಿಗೆ ಲಭ್ಯರಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಭಾರತೀಯ ಸ್ಟಾರ್ ಕ್ರಿಕೆಟಿಗರ ದಂಡೇ ಇದೆ. ಶ್ರೇಯಸ್ ಅಯ್ಯರ್, ಶಿಖರ್ ಧವನ್, ಆರ್. ಅಶ್ವಿನ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುಜ್ವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್, ದೀಪಕ್ ಚಹಾರ್, ಉಮೇಶ್ ಯಾದವ್ ಹೀಗೆ ಅನೇಕ ಪ್ರಮುಖ ಭಾರತೀಯ ಆಟಗಾರರಿದ್ದಾರೆ.
? NEWS ?: IPL 2022 Player Auction list announced
The Player Auction list is out with a total of 590 cricketers set to go under the hammer during the two-day mega auction which will take place in Bengaluru on February 12 and 13, 2022.
More Details ?https://t.co/z09GQJoJhW pic.twitter.com/02Miv7fdDJ
— IndianPremierLeague (@IPL) February 1, 2022
2 ಕೋಟಿ ಮೂಲಬೆಲೆ ಹೊಂದಿರುವ ಸ್ಟಾರ್ ಆಟಗಾರರು:
ಆರ್. ಅಶ್ವಿನ್, ಯುಜ್ವೇಂದ್ರ ಚಹಾಲ್, ದೀಪಕ್ ಚಹಾರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ದೇವದತ್ ಪಡಿಕ್ಕಲ್, ಕ್ರುನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಸುರೇಶ್ ರೈನಾ, ಅಂಬಟಿ ರಾಯುಡು, ಶಾರ್ದೂಲ್ ಥಾಕೂರ್, ರಾಬಿನ್ ಉತ್ತಪ್ಪ, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಮುಜೀಬ್ ಝರ್ದನ್, ಆಸ್ಟನ್ ಅಗರ್, ನಥನ್ ಕಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜ್ಲೆವುಡ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಶಕಿಬ್ ಅಲ್ ಹಸನ್, ಮುಸ್ತಫಿಜುರ್ ರೆಹ್ಮಾನ್, ಸ್ಯಾಮ್ ಬಿಲ್ಲಿಂಗ್ಸ್, ಸಖೀಬ್ ಮೊಹಮ್ಮದ್, ಕ್ರಿಸ್ ಜೋರ್ಡನ್, ಗ್ರೈಗ್ ಓವರ್ಟನ್, ಆದಿಲ್ ರಶೀದ್, ಜೇಸನ್ ರಾಯ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ಲೂಕಿ ಫರ್ಗುಸನ್, ಕ್ವಿಂಟನ್ ಡಿಕಾಕ್, ಮರ್ಚೆಂಟ್ ಲ್ಯಾಂಗ್, ಫಾಫ್ ಡುಪ್ಲೆಸಿಸ್, ಕಗಿಸೊ ರಬಾಡ, ಇಮ್ರಾನ್ ತಾಹೀರ್, ಫಾಬಿನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಓಡೆನ್ ಸ್ಮಿತ್.
1.5 ಕೋಟಿ ಮೂಲಬೆಲೆ ಹೊಂದಿರುವ ಸ್ಟಾರ್ ಆಟಗಾರರು:
ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಆ್ಯರೋನ್ ಫಿಂಚ್, ಕ್ರಿಸ್ ಲಿನ್, ನೇಥನ್ ಲ್ಯಾನ್, ಕೇನ್ ರಿಚರ್ಡಸನ್, ಜಾನಿ ಬೈರ್ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್, ಡೇವಿಡ್ ಮಲನ್, ಆ್ಯಡಂ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥೀ, ಕಾಲಿನ್ ಇನ್ಗ್ರಾಮ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.
1 ಕೋಟಿ ಮೂಲಬೆಲೆ ಹೊಂದಿರುವ ಸ್ಟಾರ್ ಆಟಗಾರರು:
ಮನೀಶ್ ಪಾಂಡೆ, ಪಿಯೂಶ್ ಚಾವ್ಲಾ, ಪ್ರಸಿದ್ಧ್ ಕೃಷ್ಣ, ಟಿ. ನಟರಾಜನ್, ಅಜಿಂಕ್ಯಾ ರಹಾನೆ, ನಿತೀಶ್ ರಾಣ, ವೃದ್ದಿಮಾನ್ ಸಾಹ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ನಬಿ, ಜೇಮ್ಸ್ ಫಾಲ್ಕನರ್, ಮೋಸಿಸ್ ಹೆನ್ರಿಕ್ಯೂಸ್, ಮಾರ್ನಸ್ ಲಾಬುಶೇನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಲ್ಯಾಮ್ ಲಿವಿಂಗ್ಸ್ಟೋನ್, ಟೈಮಲ್ ಮಿಲ್ಸ್, ಆ್ಯಡಂ ಮರ್ಕಮ್, ರಿಲಿ ರೊಸ್ಸೋ, ತಬ್ರೈಸ್ ಶಂಸಿ, ರಾಸ್ಸಿ ವಾನ್ ಡೇರ್ ಡ್ಸೆನ್, ವಾನಿಂದು ಹಸರಂಗ, ರೋಸ್ಟನ್ ಚೇಸ್, ಶೆರ್ಫಾನ್ ರುಥರ್ಫಾರ್ಡ್, ಡಾರ್ಸಿ ಶಾರ್ಟ್, ಆ್ಯಂಡ್ರೊ ಟೈ, ಡೇನ್ ಲಾರೆನ್ಸ್, ಓಲಿ ಪೋಪ್, ಡೆವೋನ್ ಕಾನ್ವೇ, ಕಾಲಿನ್ ಗ್ರ್ಯಾಂಡ್ಹೋಮ್, ಮಿಚೆಲ್ ಸ್ಯಾಂಟನರ್.
ಯಾರ ಬಳಿ ಎಷ್ಟು ಹಣವಿದೆ?:
ಪಂಜಾಬ್ ಕಿಂಗ್ಸ್– 72 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು : ಮಯಾಂಕ್ ಅಗರ್ವಾಲ್ – 12 ಕೋಟಿ ರೂ., ಅರ್ಷದೀಪ್ ಸಿಂಗ್ – 4 ಕೋಟಿ ರೂ.
ಸನ್ ರೈಸರ್ಸ್ ಹೈದರಾಬಾದ್- 68 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು : ಕೇನ್ ವಿಲಿಯಮ್ಸನ್ – 14 ಕೋಟಿ, ಅಬ್ದುಲ್ ಸಮದ್ – 4 ಕೋಟಿ, ಉಮ್ರಾನ್ ಮಲಿಕ್ – 4 ಕೋಟಿ.
ರಾಜಸ್ಥಾನ್ ರಾಯಲ್ಸ್– 62 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು : ಸಂಜು ಸ್ಯಾಮ್ಸನ್ – 14 ಕೋಟಿ, ಜೋಸ್ ಬಟ್ಲರ್ – 10 ಕೋಟಿ, ಯಶಸ್ವಿ ಜೈಸ್ವಾಲ್ – 4 ಕೋಟಿ.
ಲಕ್ನೋ ಸೂಪರ್ ಜೈಂಟ್ಸ್– 58 ಕೋಟಿ ರೂ ಡ್ರಾಫ್ಟ್ ಆಟಗಾರರು : ಕೆಎಲ್ ರಾಹುಲ್ – 17 ಕೋಟಿ, ಮಾರ್ಕಸ್ ಸ್ಟೋನಿಸ್ – 9.2 ಕೋಟಿ, ರವಿ ಬಿಷ್ಣೋಯ್ – 4 ಕೋಟಿ.
ಆರ್ಸಿಬಿ– 57 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು : ವಿರಾಟ್ ಕೊಹ್ಲಿ – 15 ಕೋಟಿ, ಗ್ಲೆನ್ ಮ್ಯಾಕ್ಸ್‌ವೆಲ್ – 11 ಕೋಟಿ, ಮೊಹಮ್ಮದ್ ಸಿರಾಜ್ – 7 ಕೋಟಿ.
ಅಹ್ಮದಾಬಾದ್– 52 ಕೋಟಿ ರೂ ಡ್ರಾಫ್ಟ್ ಆಟಗಾರರು : ಹಾರ್ದಿಕ್ ಪಾಂಡ್ಯ – 15 ಕೋಟಿ, ರಶೀದ್ ಖಾನ್ – 15 ಕೋಟಿ, ಶುಭ್ಮನ್ ಗಿಲ್ – 8 ಕೋಟಿ.
ಡೆಲ್ಲಿ ಕ್ಯಾಪಿಟಲ್- 47.5 ಕೋಟಿ ರೂ ಉಳಿಸಿಕೊಂಡಿರುವ ಆಟಗಾರರು : ರಿಷಬ್ ಪಂತ್ – 16 ಕೋಟಿ, ಅಕ್ಸರ್ ಪಟೇಲ್ – 9 ಕೋಟಿ, ಪೃಥ್ವಿ ಶಾ – 7.5 ಕೋಟಿ, ಎನ್ರಿಚ್ ನಾರ್ಟ್ಜೆ – 6.5 ಕೋಟಿ.
MS Dhoni: ಐಪಿಎಲ್ ಮೆಗಾ ಹರಾಜು ವೇಳೆ ಚೆನ್ನೈ ಜೊತೆ ಟೇಬಲ್ನಲ್ಲಿ ಇರಲಿದ್ದಾರೆ ಎಂಎಸ್ ಧೋನಿ
India vs West Indies: ಭಾರತ-ವೆಸ್ಟ್ ಇಂಡೀಸ್ ಸರಣಿ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಸಿಕ್ತು ಬಂಪರ್ ಸುದ್ದಿ: ಏನದು?
Published On - 2:52 pm, Tue, 1 February 22