IPL 2022: ಐಪಿಎಲ್ ಮೆಗಾ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು..?
IPL 2022 Overseas players List: ಈ ಬಾರಿ ಒಟ್ಟು 18 ದೇಶಗಳ ಆಟಗಾರರು ಹೆಸರು ನೋಂದಾಯಿಸಿಕೊಂಡಿರುವುದು ವಿಶೇಷ. ಅದರಲ್ಲಿ ನೇಪಾಳ, ಭೂತಾನ್, ಯುಎಇ, ನಮೀಬಿಯಾ ದೇಶಗಳ ಆಟಗಾರರು ಕೂಡ ಇರುವುದು ಮತ್ತೊಂದು ವಿಶೇಷ.
ಐಪಿಎಲ್ ಸೀಸನ್ 15 (IPL 2022 Mega Auction Players List) ಮೆಗಾ ಹರಾಜಿಗಾಗಿ ಒಟ್ಟು 1,214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಇದ್ದಾರೆ. ಹಾಗೆಯೇ 318 ವಿದೇಶಿ ಆಟಗಾರರು ಹೆಸರು ನೀಡಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಅಸೋಸಿಯೇಟ್ ದೇಶಗಳ ಆಟಗಾರರಿದ್ದಾರೆ. ಇನ್ನು ಈ ಬಾರಿ ಒಟ್ಟು 18 ದೇಶಗಳ ಆಟಗಾರರು ಹೆಸರು ನೋಂದಾಯಿಸಿಕೊಂಡಿರುವುದು ವಿಶೇಷ. ಅದರಲ್ಲಿ ನೇಪಾಳ, ಭೂತಾನ್, ಯುಎಇ, ನಮೀಬಿಯಾ ದೇಶಗಳ ಆಟಗಾರರು ಕೂಡ ಇರುವುದು ಮತ್ತೊಂದು ವಿಶೇಷ. ಹಾಗಿದ್ರೆ ಯಾವ ದೇಶದಿಂದ ಎಷ್ಟು ಆಟಗಾರರು ಹೆಸರು ನೀಡಿದ್ದಾರೆ ನೋಡೋಣ…
ಅಫ್ಘಾನಿಸ್ತಾನ- 20 ಆಟಗಾರರು
ಆಸ್ಟ್ರೇಲಿಯಾ- 59 ಆಟಗಾರರು
ಬಾಂಗ್ಲಾದೇಶ- 9 ಆಟಗಾರರು
ಇಂಗ್ಲೆಂಡ್- 30 ಆಟಗಾರರು
ಐರ್ಲೆಂಡ್- 3 ಆಟಗಾರರು
ನ್ಯೂಜಿಲ್ಯಾಂಡ್- 29 ಆಟಗಾರರು
ದಕ್ಷಿಣ ಆಫ್ರಿಕಾ- 48 ಆಟಗಾರರು
ಶ್ರೀಲಂಕಾ- 36 ಆಟಗಾರರು
ವೆಸ್ಟ್ ಇಂಡೀಸ್- 41 ಆಟಗಾರರು
ಭೂತಾನ್- 1 ಆಟಗಾರ
ನಮೀಬಿಯಾ- 5 ಆಟಗಾರರು
ನೇಪಾಳ- 15 ಆಟಗಾರರು
ನೆದರ್ಲ್ಯಾಂಡ್ಸ್- 1 ಆಟಗಾರ
ಓಮಾನ್- 3 ಆಟಗಾರರು
ಸ್ಕಾಟ್ಲೆಂಡ್- 1 ಆಟಗಾರರು
ಯುಎಇ- 1 ಆಟಗಾರ
ಯುಎಸ್ಎ- 14 ಆಟಗಾರರು
ಮೆಗಾ ಹರಾಜಿಗೆ ಮೂಲಬೆಲೆ ಘೋಷಿಸಿರುವ ಸ್ಟಾರ್ ಆಟಗಾರರ ಪಟ್ಟಿ ಹೀಗಿದೆ:
2 ಕೋಟಿ ರೂ. ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿ:- ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ದೀಪಕ್ ಚಹಾರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಸುರೇಶ್ ರೈನಾ, ಅಂಬಟಿ ರಾಯುಡು, ಶಾರ್ದೂಲ್ ಥಾಕೂರ್, ರಾಬಿನ್ ಉತ್ತಪ್ಪ, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಮುಜೀಬ್ ಝರ್ದಾನ್, ಆಸ್ಟನ್ ಅಗರ್, ನಾಥನ್ ಕಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್ವುಡ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಶಕಿಬ್ ಅಲ್ ಹಸನ್, ಮುಸ್ತಫಿಜುರ್ ರೆಹಮಾನ್, ಸ್ಯಾಮ್ ಬಿಲ್ಲಿಂಗ್ಸ್, ಸಖೀಬ್ ಮೊಹಮ್ಮದ್, ಕ್ರಿಸ್ ಜೋರ್ಡನ್, ಗ್ರೈಗ್ ಓವರ್ಟನ್, ಆದಿಲ್ ರಶೀದ್, ಜೇಸನ್ ರಾಯ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ಲೂಕಿ ಫರ್ಗುಸನ್, ಕ್ವಿಂಟನ್ ಡಿಕಾಕ್, ಮರ್ಚೆಂಟ್ ಲ್ಯಾಂಗ್, ಫಾಫ್ ಡುಪ್ಲೆಸಿಸ್, ಕಗಿಸೊ ರಬಾಡ, ಇಮ್ರಾನ್ ತಾಹೀರ್, ಫಾಬಿನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಓಡೆನ್ ಸ್ಮಿತ್.
1.5 ಕೋಟಿ ರೂ ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿ: ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಆರೋನ್ ಫಿಂಚ್, ಕ್ರಿಸ್ ಲಿನ್, ನೇಥನ್ ಲ್ಯಾನ್, ಕೇನ್ ರಿಚರ್ಡಸನ್, ಜಾನಿ ಬೈರ್ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮೊರ್ಗನ್, ಡೇವಿಡ್ ಮಲಾನ್, ಆ್ಯಡಂ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಕಾಲಿನ್ ಇನ್ಗ್ರಾಮ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.
1 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿ: ಮನೀಶ್ ಪಾಂಡೆ, ಪಿಯೂಶ್ ಚಾವ್ಲಾ, ಪ್ರಸಿದ್ಧ್ ಕೃಷ್ಣ, ಟಿ. ನಟರಾಜನ್, ಅಜಿಂಕ್ಯಾ ರಹಾನೆ, ನಿತೀಶ್ ರಾಣ, ವೃದ್ದಿಮಾನ್ ಸಾಹ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ನಬಿ, ಜೇಮ್ಸ್ ಫಾಲ್ಕನರ್, ಮೋಸಿಸ್ ಹೆನ್ರಿಕ್ಯೂಸ್, ಮಾರ್ನಸ್ ಲಾಬುಶೇನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಲ್ಯಾಮ್ ಲಿವಿಂಗ್ಸ್ಟೋನ್, ಟೈಮಲ್ ಮಿಲ್ಸ್, ಏಡೆನ್ ಮಾರ್ಕ್ರಾಮ್, ರಿಲಿ ರೊಸ್ಸೋ, ತಬ್ರೈಸ್ ಶಂಸಿ, ರಾಸ್ಸಿ ವಾನ್ ಡೇರ್ ಡುಸ್ಸೆನ್, ವಾನಿಂದು ಹಸರಂಗ, ರೋಸ್ಟನ್ ಚೇಸ್, ಶೆರ್ಫಾನ್ ರುಥರ್ಫೋರ್ಡ್, ಡಾರ್ಸಿ ಶಾರ್ಟ್, ಆ್ಯಂಡ್ರೊ ಟೈ, ಡೇನ್ ಲಾರೆನ್ಸ್, ಓಲಿ ಪೋಪ್, ಡೆವೋನ್ ಕಾನ್ವೆ, ಕಾಲಿನ್ ಗ್ರ್ಯಾಂಡ್ಹೋಮ್, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
Published On - 3:17 pm, Sat, 22 January 22