Virat Kohli: ರಿಷಭ್ ಪಂತ್ ಭರ್ಜರಿ ಇನ್ನಿಂಗ್ಸ್ ಕಂಡು ಡಗೌಟ್​ನಲ್ಲಿ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

Rishabh Pant, South Africa vs India: ನಾಯಕ ಕೆಎಲ್ ರಾಹುಲ್ ಜೊತೆಗೂಡಿ ರಿಷಭ್ ಪಂತ್ ಅವರು ಅಮೋಘ ಆಟ ಪ್ರದರ್ಶಿಸಿದರು. ಇವರ ಭರ್ಜರಿ ಆಟ ಕಂಡು ಡಗೌಟ್​ನಲ್ಲಿ ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.

Virat Kohli: ರಿಷಭ್ ಪಂತ್ ಭರ್ಜರಿ ಇನ್ನಿಂಗ್ಸ್ ಕಂಡು ಡಗೌಟ್​ನಲ್ಲಿ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Virat Kohli and Rishabh Pant
Follow us
TV9 Web
| Updated By: Vinay Bhat

Updated on: Jan 22, 2022 | 12:22 PM

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೆ ಸೇಡಿ ತೀರಿಸಕೊಳ್ಳುವ ಯೋಜನೆಯಲ್ಲಿದ್ದ ಟೀಮ್ ಇಂಡಿಯಾಕ್ಕೆ (India vs South Africa) ಆತಿಥೇಯರೇ ಆಘಾತ ನೀಡಿದ್ದಾರೆ. ಮೊದಲ ಎರಡೂ ಪಂದ್ಯವನ್ನು ಗೆದ್ದಿರುವ ಹರಿಣಗಳು ಏಕದಿನ ಸರಣಿ 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಮೂಲಕ ಟೆಸ್ಟ್ ಸರಣಿ ಸೋಲಿಗೆ ಪ್ರತಿಕಾರವಾಗಿ ಏಕದಿನ ಸರಣಿ ಗೆಲುವಿನ ಹಂಬಲದಲ್ಲಿದ್ದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡಕ್ಕೆ 2022ರ ಮೊದಲ ತಿಂಗಳಲ್ಲೇ ಸತತ 2 ಸರಣಿ ಸೋಲಿನ ನಿರಾಸೆ ಎದುರಾಯಿತು. ಬ್ಯಾಟಿಂಗಿಗೆ ಉತ್ತಮ ನೆರವು ನೀಡುತ್ತಿದ್ದ ಟ್ರ್ಯಾಕ್ ನಲ್ಲಿ ಭಾರತ 6 ವಿಕೆಟಿಗೆ 287 ರನ್‌ ಗಳಿಸಿತು. ಈ ಬಾರಿ ತಂಡಕ್ಕೆ ಆಸರೆಯಾಗಿದ್ದು ರಿಷಭ್ ಪಂತ್ (Rishabh Pant). ನಾಯಕ ಕೆಎಲ್ ರಾಹುಲ್ ಜೊತೆಗೂಡಿ ಅಮೋಘ ಆಟ ಪ್ರದರ್ಶಿಸಿದರು. ಇವರ ಭರ್ಜರಿ ಆಟ ಕಂಡು ಡಗೌಟ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಏನು ಮಾಡಿದರು ನೋಡಿ.

ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಶಿಖರ್ ಧವನ್ ಜೊತೆ ನಾಯಕ ಕೆಎಲ್ ರಾಹುಲ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ63 ರನ್ ಸೇರಿಸಲು ಕಾರಣರಾದರು. ಆದರೆ 12ನೇ ಓವರ್‌ನಲ್ಲಿ ಏಡನ್ ಮಾರ್ಕರಂ ಬೌಲಿಂಗ್‌ನಲ್ಲಿ ಧವನ್ ಔಟಾಗುವುದರೊಂದಿಗೆ ಈ ಜೊತೆಯಾಟವೂ ಮುರಿದುಬಿತ್ತು. ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಐದು ಎಸೆತಗಳನ್ನು ಆಡಿ ಸೊನ್ನೆ ಸುತ್ತಿದರು. ಹೀಗೆ ಸಂಕಷ್ಟದಲ್ಲಿದ್ದ ಸಂದರ್ಭ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದಿದ್ದು ರಿಷಭ್ ಪಂತ್.

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಮಿಂಚಿದ್ದ ರಿಷಭ್ ಪಂತ್ ಇಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಿಭೆ ಮೆರೆದರು. ರಾಹುಲ್ ಜೊತೆಗೂಡಿದ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 115 ಸೇರಿಸಿದರು. ಪಂತ್ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಉತ್ತಮ ಮೊತ್ತ ಕಲೆಹಾಕಿದ ಸಾಧನೆ ಮಾಡಿದರು. 71 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್​ನೊಂದಿಗೆ 85 ರನ್ ಸಿಡಿಸಿದರು. ಪಂತ್ ಆಟದ ವೈಖರಿ ಕಂಡು ಡಗೌಟ್​ನಲ್ಲಿ ಕೊಹ್ಲಿ ಸಖತ್ ಸ್ಟೆಪ್ ಕೂಡ ಹಾಕಿದರು. ತಂಡದ ಇತರೆ ಆಟಗಾರರಾದ ಶಿಖರ್ ಧವನ್, ಬುಮ್ರಾ ಹಾಗೂ ಚಹಲ್ ಜೊತೆ ಡಗ್ ಔಟ್‌ನಲ್ಲಿ ಕುಳಿತಿದ್ದ ಕೊಹ್ಲಿ ಡ್ಯಾನ್ಸ್ ಮಾಡಿದ್ದಾರೆ. ಕೊಹ್ಲಿ ಡಾನ್ಸ್ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾಮೆಂಟರಿಗಾರರು ಕೂಡ ಇವರ ಡಾನ್ಸ್‌ನಿಂದ ಮನರಂಜನೆ ಪಡೆದರು.

ಗೆಲ್ಲಲು 288 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು. 3ನೇ ಅರ್ಧಶತಕ ಸಿಡಿಸಿದ ಮಲನ್ (91 ರನ್) ಹಾಗೂ 36 ಎಸೆತಗಳಲ್ಲಿ 28ನೇ ಅರ್ಧಶತಕ ಪೂರೈಸಿದ ಡಿಕಾಕ್ (78 ರನ್) ಮೊದಲ ವಿಕೆಟ್‌ಗೆ 132 ರನ್ ಸೇರಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಮರ್ಕ್ರಮ್ (ಔಟಾಗದೆ 37) ಹಾಗೂ ವಾನ್‌ಡರ್ ಡುಸ್ಸೆನ್ (ಔಟಾಗದೆ 37 ರನ್) 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಗಳಿಸಿ ಸೇರಿಸಿ ಗೆಲುವಿಗೆ ಕಾರಣರಾದರು.

IPL 2022 ಮೆಗಾ ಹರಾಜಿಗೆ ಆಟಗಾರರ ಹೆಸರು ಬಿಡುಗಡೆ: ಯಾರಿಗೆ ಎಷ್ಟು ಮೊತ್ತ?, ಇಲ್ಲಿದೆ ಸಂಪೂರ್ಣ ಮಾಹಿತಿ

KL Rahul: ಪಂದ್ಯ ಮುಗಿದ ಬಳಿಕ ಬೇಸರದಲ್ಲಿ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?