ಐಪಿಎಲ್ (IPL 2022) ಸೀಸನ್ 15 ಗಾಗಿ ಆರ್ಸಿಬಿ (RCB Captain) ತಂಡದ ನಾಯಕನನ್ನು ಘೋಷಿಸಲಾಗಿದೆ. ಅದರಂತೆ ಮುಂಬರುವ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ (Faf Du plessis) ಮುನ್ನಡೆಸಲಿದ್ದಾರೆ. ಇದರ ಬೆನ್ನಲ್ಲೇ ಆರ್ಸಿಬಿ ತಂಡವು ನೂತನ ಜೆರ್ಸಿಯನ್ನೂ (Ipl 2022 Rcb Jersey) ಕೂಡ ಅನಾವರಣಗೊಳಿಸಿದೆ. ಕಪ್ಪು-ಕೆಂಪು ಮಿಶ್ರಿತ ಬಣ್ಣದಲ್ಲಿರುವ ಹೊಸ ವಿನ್ಯಾಸದ ಜೆರ್ಸಿಯಲ್ಲಿ ಆರ್ಸಿಬಿ ಈ ಬಾರಿ ಕಣಕ್ಕಿಳಿಯಲಿದೆ. ಹೊಸ ಜೆರ್ಸಿಯು ಕಳೆದ ಬಾರಿಯ ಜೆರ್ಸಿಗಿಂತ ತುಸು ಭಿನ್ನವಾಗಿದೆ. ಸಾಮಾನ್ಯವಾಗಿ ಆರ್ಸಿಬಿ ಜೆರ್ಸಿಯಲ್ಲಿ ಕೆಂಪು ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಿದ್ರೆ, ಈ ಬಾರಿ ಕಪ್ಪು ಬಣ್ಣದಲ್ಲಿ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಜೆರ್ಸಿಯ ಕೆಳ ಭಾಗದಲ್ಲಿ ಕೆಂಪು ಬಣ್ಣ ನೀಡಲಾಗಿದೆ.
New season. New threads. ?
Time to #PlayBold while looking #Bold. ??#RCBUnbox #UnboxTheBold #ForOur12thMan #IPL2022 pic.twitter.com/2GkFiMkKro
— Royal Challengers Bangalore (@RCBTweets) March 12, 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
Published On - 7:16 pm, Sat, 12 March 22