IPL 2022: ಐಪಿಎಲ್ 54ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಹೆಚ್ (RCB vs SRH) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದ RCB ಮೊದಲು ಬ್ಯಾಟ್ ಮಾಡಿ 3 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕುವ ಮೂಲಕ ಸನ್ರೈಸರ್ಸ್ಗೆ ಬೃಹತ್ ಟಾರ್ಗೆಟ್ ನೀಡಿತು. 193 ರನ್ಗಳ ಬೃಹತ್ ಗುರಿ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡವು 125 ರನ್ಗೆ ಆಲೌಟ್ ಆಗುವ ಮೂಲಕ 67 ರನ್ಗಳ ಅಂತರದಿಂದ ಹೀನಾಯ ಸೋಲನುಭವಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಮೂರನೇ ಬಾರಿ ಗೆದ್ದಂತಾಗಿದೆ.
ಏಕೆಂದರೆ 2011 ರಿಂದ ಆರ್ಸಿಬಿ ಇದುವರೆಗೆ 11 ಪಂದ್ಯಗಳನ್ನು ಗ್ರೀನ್ ಜೆರ್ಸಿಯಲ್ಲಿ ಆಡಿದೆ. ಆದರೆ ಈ ವೇಳೆ ಆರ್ಸಿಬಿ ತಂಡವು ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅಂದರೆ 2011 ರಲ್ಲಿ ಮತ್ತು 2016 ರಲ್ಲಿ ಮಾತ್ರ ಗೆದ್ದಿತ್ತು. ಇದೀಗ ಎಸ್ಆರ್ಹೆಚ್ ವಿರುದ್ದ ಗೆಲ್ಲುವ ಮೂಲಕ ಮೂರನೇ ಬಾರಿ ಗ್ರೀನ್ ಜೆರ್ಸಿಯಲ್ಲಿ ಜಯ ಸಾಧಿಸಿದೆ.
ವಿಶೇಷ ಎಂದರೆ ಆರ್ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಗೆದ್ದ ಸೀಸನ್ನಲ್ಲಿ ಐಪಿಎಲ್ ಫೈನಲ್ ಆಡಿದೆ. ಅಂದರೆ 2011 ರಲ್ಲಿ ಆರ್ಸಿಬಿ ತಂಡವು ಸಿಎಸ್ಕೆ ವಿರುದ್ದ ಫೈನಲ್ ಪಂದ್ಯವನ್ನಾಡಿತ್ತು. ಹಾಗೆಯೇ 2016 ರಲ್ಲಿ ಎಸ್ಆರ್ಹೆಚ್ ವಿರುದ್ದ ಫೈನಲ್ ಆಡಿತ್ತು. ಈ ಎರಡೂ ಸೀಸನ್ನಲ್ಲೂ ಆರ್ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಆಡಿದ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು ಎಂಬುದು ವಿಶೇಷ.
ಇದೀಗ ಎಸ್ಆರ್ಹೆಚ್ ವಿರುದ್ದ ಗ್ರೀನ್ ಜೆರ್ಸಿಯಲ್ಲಿ ಆಡಿದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲುತ್ತಿದ್ದಂತೆ ಹೊಸ ಲೆಕ್ಕಾಚಾರಗಳು ಶುರುವಾಗಿದೆ. ಏಕೆಂದರೆ ಗ್ರೀನ್ ಜೆರ್ಸಿಯಲ್ಲಿ ಆಡಿದಾಗ ಆರ್ಸಿಬಿ ತಂಡದ ಅದೃಷ್ಟ ಖುಲಾಯಿಸಿದೆ. ಹೀಗಾಗಿ ಈ ಬಾರಿ ಕೂಡ ಆರ್ಸಿಬಿ ತಂಡವು ಫೈನಲ್ ಪಂದ್ಯವಾಡಲಿದೆ ವಿಶ್ವಾಸದಲ್ಲಿದ್ದಾರೆ ಆರ್ಸಿಬಿ ಅಭಿಮಾನಿಗಳು.
ಸದ್ಯ 14 ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಆರ್ಸಿಬಿಗೆ ಇನ್ನೆರಡು ಪಂದ್ಯಗಳು ಉಳಿದಿದ್ದು, ಈ ಎರಡು ಮ್ಯಾಚ್ನಲ್ಲಿ ಗೆದ್ದರೆ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಈ ಮೂಲಕ ಆರ್ಸಿಬಿ ಈ ಬಾರಿ ಸಹ ಫೈನಲ್ ಆಡಲಿದೆಯಾ ಕಾದು ನೋಡಬೇಕಿದೆ.
ಆರ್ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:27 pm, Mon, 9 May 22