IPL 2022: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೇ 8 ರಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಆಕರ್ಷಕ ಹಸಿರು ಜೆರ್ಸಿಯಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಆರ್‌ಸಿಬಿ ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಕಳೆದ ಸೀಸನ್ ಹೊರತುಪಡಿಸಿ ಆರ್‌ಸಿಬಿ 2011 ರಿಂದ ಗ್ರೀನ್ ಜೆರ್ಸಿಯಲ್ಲಿ ಒಂದು ಪಂದ್ಯವಾಡುತ್ತಿದೆ. ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಆರ್‌ಸಿಬಿ ಗ್ರೀನ್ ಜೆರ್ಸಿಯ ಮೂಲಕ ವಿಶೇಷ ಅಭಿಯಾನವನ್ನು ನಡೆಸುತ್ತಿದೆ. RCB ತಂಡವು ಪರಿಸರವನ್ನು ಉಳಿಸಲು ಮತ್ತು ಜಾಗತಿಕ ತಾಪಮಾನವನ್ನು ತಪ್ಪಿಸಲು ಗ್ರೋ ಗ್ರೀನ್ ಅಭಿಯಾನವನ್ನು ಉತ್ತೇಜಿಸುತ್ತಿದೆ.
ಗ್ರೀನ್ ಜೆರ್ಸಿಯನ್ನು ಹೇಗೆ ತಯಾರಿಸಲಾಗುತ್ತದೆ?
ಐಪಿಎಲ್‌ನಲ್ಲಿ ವರ್ಷಕ್ಕೊಮ್ಮೆ RCB ತಂಡ ಧರಿಸುವ ಹಸಿರು ಜೆರ್ಸಿಯನ್ನು ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾಗುತ್ತದೆ. ಕಳೆದ ವರ್ಷ RCB ಪಂದ್ಯದ ವೇಳೆ ಸಂಗ್ರಹಿಸಿದ ಪ್ಲಾಸ್ಟಿಕ್ ಅಥವಾ ಟಾಕರ್ ಮೂಲಕ ಈ ಜೆರ್ಸಿಯನ್ನು ತಯಾರಿಸಲಾಗುತ್ತದೆ. ಸುಮಾರು 11000 ಸಾವಿರ ಬಾಟಲಿಗಳನ್ನು ಸಂಗ್ರಹಿಸಿ ಪರಿಸರ ಸ್ನೇಹಿ ಬಟ್ಟೆಯನ್ನು ತಯಾರಿಸಲಾಗುತ್ತದೆ. ಆ ಬಳಿಕ ಇದರಿಂದ ಆರ್‌ಸಿಬಿ ತಂಡದ ಹಸಿರು ಜೆರ್ಸಿಯನ್ನು ರೂಪಿಸಲಾಗುತ್ತದೆ.
ಕಳೆದ ವರ್ಷ ನೀಲಿ ಜೆರ್ಸಿ:
ಕಳೆದ ವರ್ಷ 2021 ರಲ್ಲಿ, ಯುಎಇಯಲ್ಲಿ ಐಪಿಎಲ್‌ನ ಎರಡನೇ ಹಂತ ಪ್ರಾರಂಭವಾದಾಗ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನೀಲಿ ಜೆರ್ಸಿಯನ್ನು ಧರಿಸಿತ್ತು. ಕೋವಿಡ್-19 ಸಮಯದಲ್ಲಿ ಮುಂಚೂಣಿಯಲ್ಲಿದ್ದ ಕೊರೋನಾ ವಾರಿಯರ್ಸ್ಗೆ ಗೌರವಾರ್ಥವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಪಿಪಿಇ ಕಿಟ್ ಬಣ್ಣದ ನೀಲಿ ಜರ್ಸಿಯನ್ನು ಧರಿಸಿದ್ದರು.
ಇದೀಗ ಮತ್ತೆ ಹಸಿರು ಜೆರ್ಸಿಯೊಂದಿಗೆ ಆರ್‌ಸಿಬಿ ತಂಡವು ಗೋ ಗ್ರೀನ್ ಅಭಿಯಾನವನ್ನು ಮುಂದುವರೆಸುತ್ತಿದೆ. ಅದರಂತೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.
RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.