IPL 2022: ಮಾರ್ಚ್​ 12 ರಂದು 4 ದೊಡ್ಡ ಘೋಷಣೆ ಮಾಡಲಿದೆ RCB

| Updated By: ಝಾಹಿರ್ ಯೂಸುಫ್

Updated on: Mar 08, 2022 | 3:10 PM

IPL 2022 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಲಿದೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.

IPL 2022: ಮಾರ್ಚ್​ 12 ರಂದು 4 ದೊಡ್ಡ ಘೋಷಣೆ ಮಾಡಲಿದೆ RCB
RCB
Follow us on

ಐಪಿಎಲ್ ಸೀಸನ್ 15 ಗಾಗಿ (IPL 2022) ಎಲ್ಲಾ ತಂಡಗಳು ಸಕಲ ಸಿದ್ದತೆಯಲ್ಲಿದೆ. ಆದರೆ ಇತ್ತ ಆರ್​ಸಿಬಿ (RCB) ತಂಡವು ಇನ್ನೂ ಕೂಡ ನಾಯಕನನ್ನು ಘೋಷಿಸಿಲ್ಲ. ಹೀಗಾಗಿ ಆರ್​ಸಿಬಿ ತಂಡದ ಹೊಸ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ಕುತೂಹಲವನ್ನು ಇಮ್ಮಡಿಗೊಳಿಸುವಂತೆ ಆರ್​ಸಿಬಿ ಇದೀಗ ಮಾರ್ಚ್​ 12 ರಂದು ಬಿಗ್ ಸರ್​ಪ್ರೈಸ್ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ RCB ಮಂಗಳವಾರ ಟ್ವೀಟ್ ಮಾಡಿದ್ದು, ಮಾರ್ಚ್ 12 ರಂದು ಕೆಲ ವಿಷಯಗಳನ್ನು ಅನ್​ಬಾಕ್ಸ್ ಮಾಡುವುದಾಗಿ ತಿಳಿಸಿದೆ. ಈ ಪಟ್ಟಿಯಲ್ಲಿ ಆರ್​ಸಿಬಿ ನಾಯಕನ ಹೆಸರು ಇರುವುದು ಬಹುತೇಕ ಖಚಿತ.

ಸದ್ಯದ ಮಾಹಿತಿ ಪ್ರಕಾರ ಆರ್​ಸಿಬಿ ನಾಯಕರುಗಳ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿದೆ. ಇವರಿಬ್ಬರಲ್ಲಿ ಒಬ್ಬರು ನಾಯಕರಾಗುವುದು ಬಹುತೇಕ ಖಚಿತ ಎನ್ನಬಹುದು.

ಇನ್ನು ನಾಯಕನ ಘೋಷಣೆಯೊಂದಿಗೆ, ಮಾರ್ಚ್ 12 ರಂದು, RCB ತಂಡದ ಹೊಸ ಹೆಸರು ಮತ್ತು ನೂತನ ಜೆರ್ಸಿಯನ್ನು ಸಹ ಪ್ರಕಟಿಸಬಹುದು. ರಾಯಲ್ ಚಾಲೆಂಜರ್ಸ್ ಬ್ಯಾಂಗ್​ಲೂರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಎಂಬ ವರದಿಗಳಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಲಿದೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಹೀಗಾಗಿ ಮಾರ್ಜ್ 12 ರಂದು ತಂಡದ ಮಾರ್ಗದರ್ಶಕ ಯಾರೆಂಬುದನ್ನು ಕೂಡ ಆರ್​ಸಿಬಿ ಬಹಿರಂಗಪಡಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಮಾರ್ಚ್ 12 ರಂದು ಆರ್​ಸಿಬಿ ಅಭಿಮಾನಿಗಳಿಗೆ ಬಿಗ್ ಪ್ರೈಸ್​ ಅಂತು ಸಿಗಲಿದೆ.

ಐಪಿಎಲ್ ಸೀಸನ್ 15 ನಲ್ಲಿ ಆರ್​ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದೊಂದಿಗೆ ಆರ್​ಸಿಬಿ ಐಪಿಎಲ್ 2022 ರ ಅಭಿಯಾನ ಆರಂಭಿಸಲಿದೆ.

RCB ತಂಡ ಹೀಗಿದೆ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್‌ ಪ್ರಭುದೇಸಾಯ್, ಚಮ ಮಿಲಿಂದ್, ಅನೀಶ್ವರ್‌ ಗೌತಮ್, ಕರಣ್‌ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ಲವ್ನೀತ್ ಸಿಸೋಡಿಯಾ.

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IPL 2022 RCB to make 4 big announcement including new captain)