IPL 2022: RCB ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ

| Updated By: ಝಾಹಿರ್ ಯೂಸುಫ್

Updated on: Apr 25, 2022 | 5:14 PM

IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್

IPL 2022: RCB ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ
IPL 2022 RCB
Follow us on

IPL 2022: ಐಪಿಎಲ್​ ಸೀಸನ್​ 15 ನಲ್ಲಿ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್​ಸಿಬಿ (RCB) 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿತ್ತು. ಆದರೆ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಕೇವಲ 68 ರನ್​ಗಳಿಗೆ ಆಲೌಟ್ ಆಗುವ ಮೂಲಕ ಅಚ್ಚರಿ ಮೂಡಿಸಿತು. ಎಸ್​ಆರ್​ಹೆಚ್ ವಿರುದ್ದದ ಹೀನಾಯ ಸೋಲಿಗೆ ಪ್ರಮುಖ ಕಾರಣ ಬ್ಯಾಟ್ಸ್​ಮನ್​ಗಳು. ಅದರಲ್ಲೂ ಆರಂಭಿಕರು ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಮುಂದಿನ ಪಂದ್ಯದಿಂದ ಅನೂಜ್ ರಾವತ್​ ರನ್ನು ಕೈ ಬಿಡುವ ಸಾಧ್ಯತೆಯಿದೆ. ಏಕೆಂದರೆ ಅನೂಜ್ ರಾವತ್ ಕಳೆದ 8 ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್ ಮಾತ್ರ. ಇನ್ನು ಈ 129 ರನ್​ ಬಾರಿಸಲು ತೆಗೆದುಕೊಂಡಿದ್ದು 118 ಎಸೆತಗಳನ್ನು. ಅಂದರೆ ಪವರ್​ಪ್ಲೇನಲ್ಲಿ ಅನೂಜ್ ರಾವತ್ ಸಂಪೂರ್ಣ ವಿಫಲರಾಗಿರುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಅದರಲ್ಲೂ 2 ಬಾರಿ ಝೀರೋಗೆ ಔಟಾಗಿದ್ದಾರೆ.

ಹೀಗಾಗಿ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಿದ್ರೆ ಮೊದಲಿಗೆ ಆರಂಭಿಕನನ್ನು ಬದಲಿಸಬೇಕು. ಅದರಂತೆ ಆರ್​ಸಿಬಿ ಅನೂಜ್ ರಾತವ್ ರನ್ನು ಕೈ ಬಿಡಲಿದೆ. ಇನ್ನು ಬದಲಿ ಆರಂಭಿಕ ಆಟಗಾರರಾಗಿ ಆರ್​ಸಿಬಿ ತಂಡದಲ್ಲಿ ಅನೇಕ ಆಯ್ಕೆಗಳಿವೆ. ಮುಖ್ಯವಾಗಿ ಫಿನ್ ಅಲೆನ್ ತಂಡದಲ್ಲಿದ್ದಾರೆ. ಜೊತೆಗೆ ಮಹಿಪಾಲ್ ಲೋಮ್ರರ್ ಕೂಡ ಆರಂಭಿಕನಾಗಿ ಆಡಬಲ್ಲ ಬ್ಯಾಟ್ಸ್​ಮನ್. ಇವರಲ್ಲದೆ ಶಹಬಾಜ್ ಅಹ್ಮದ್ ಕೂಡ ಈ ಹಿಂದೆ ರಣಜಿಯಲ್ಲಿ ಆರಂಭಿಕನಾಗಿ ಆಡಿದ ಅನುಭವ ಹೊಂದಿದ್ದಾರೆ. ಅಂದರೆ ಆರ್​ಸಿಬಿ ಮುಂದೆ 3 ಆಯ್ಕೆಗಳಿವೆ. ಹೀಗಾಗಿ ಅನೂಜ್ ರಾವತ್ ಸ್ಥಾನವನ್ನು ಬೇರೆ ಆಟಗಾರರು ತುಂಬುದು ಬಹುತೇಕ ಖಚಿತ.

ಅನೂಜ್ ರಾವತ್ ಬದಲಾವಣೆ ಅನಿವಾರ್ಯ:
ಆರ್​ಸಿಬಿ ತಂಡವು ಅನೂಜ್ ರಾವತ್​ಗೆ 8 ಪಂದ್ಯಗಳಲ್ಲಿ ಅವಕಾಶ ನೀಡಿದರೂ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಕೂಡ ಸತತವಾಗಿ ವಿಫಲರಾಗಿದ್ದಾರೆ. ಆಡಿದ 8 ಪಂದ್ಯಗಳಲ್ಲಿ 2 ಬಾರಿ ರನೌಟ್ ಆಗಿದ್ದರೆ, 2 ಬಾರಿ ಗೋಲ್ಡನ್ ಡಕ್​ಗೆ ಔಟಾಗಿದ್ದಾರೆ. ಒಂದೆಡೆ ಅನೂಜ್ ರಾವತ್ ಔಟ್ ಆದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪಿಸುತ್ತಿದ್ದಾರೆ. ಅಂದರೆ ಆರ್​ಸಿಬಿ ತಂಡದ ಎರಡು ವಿಕೆಟ್​ಗಳು ಬ್ಯಾಕ್ ಟು ಬ್ಯಾಕ್ ಬೀಳುತ್ತಿರುವ ಕಾರಣ ಎದುರಾಳಿಗಳು ಮೇಲುಗೈ ಸಾಧಿಸುತ್ತಿದ್ದಾರೆ.

ಹೀಗಾಗಿ ಆರ್​ಸಿಬಿ ತಂಡವು ಆರಂಭಿಕ ಆಟಗಾರನನ್ನು ಬದಲಿಸುವ ಮೂಲಕ, ಪವರ್​ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳಬೇಕಾಗಿದೆ. ಏಕೆಂದರೆ ಆರ್​ಸಿಬಿ ತಂಡವು ಪವರ್​ಪ್ಲೇನಲ್ಲಿ ಉತ್ತಮವಾಗಿ ಆಡಿದ್ರೆ ಆ ಬಳಿಕ ಬರುವ ಗ್ಲೆನ್ ಮ್ಯಾಕ್ಸ್​ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ ತಂಡದ ಸ್ಕೋರ್​ ಅನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಆರ್​ಸಿಬಿ ತಂಡವು ಆರಂಭಿಕ ಸಮಸ್ಯೆಯನ್ನು ಸರಿದೂಗಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ