IPL 2022: ತಂಡದ ವಾತಾವರಣವನ್ನು ಬದಲಾಯಿಸುತ್ತೇನೆ! ಕೆಕೆಆರ್ ಅಭಿಮಾನಿಗಳಿಗೆ ಶ್ರೇಯಸ್ ಭರವಸೆ

| Updated By: ಪೃಥ್ವಿಶಂಕರ

Updated on: Feb 28, 2022 | 9:33 PM

Shreyas Iyer: ನಾನು ಆಟಗಾರರ ನಾಯಕ. ಎಲ್ಲಾ ಆಟಗಾರರು ಒಂದೇ ಗುರಿಯ ಬಗ್ಗೆ ಯೋಚಿಸುವಂತಹ ವಾತಾವರಣವನ್ನು ಸೃಷ್ಟಿಸಲು ನಾನು ಬಯಸುತ್ತೇನೆ.

IPL 2022: ತಂಡದ ವಾತಾವರಣವನ್ನು ಬದಲಾಯಿಸುತ್ತೇನೆ! ಕೆಕೆಆರ್ ಅಭಿಮಾನಿಗಳಿಗೆ ಶ್ರೇಯಸ್ ಭರವಸೆ
ಶ್ರೇಯಸ್ ಅಯ್ಯರ್
Follow us on

ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ಬ್ಯಾಟ್‌ನಿಂದ ಸುನಾಮಿ ಸೃಷ್ಟಿಸಿದ ಶ್ರೇಯಸ್ ಅಯ್ಯರ್ (Shreyas Iyer) ಈಗ ಐಪಿಎಲ್ 2022 ರ ಮೇಲೆ ಕಣ್ಣಿಟ್ಟಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗಿನ ವಿಶೇಷ ಸಂವಾದದಲ್ಲಿ ಐಪಿಎಲ್ 2022 (IPL 2022) ಗೆಲ್ಲುವ ಬಗ್ಗೆ ಶ್ರೇಯಸ್ ಅಯ್ಯರ್ ಮಾತನಾಡಿದರು. ಫೆಬ್ರವರಿ 16 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಮಾಡಿದೆ. ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿನಲ್ಲಿ 12.5 ಕೋಟಿ ರೂಪಾಯಿಗೆ ಖರೀದಿಸಿತು. ಈ ಆಟಗಾರ ಬ್ಯಾಟ್‌ನೊಂದಿಗೆ ಅದ್ಭುತ ಫಾರ್ಮ್‌ನಲ್ಲಿರುವುದರಿಂದ ಶ್ರೇಯಸ್ ಅಯ್ಯರ್ ಮೇಲೆ ಕೋಲ್ಕತ್ತಾದ ನಂಬಿಕೆ ಸರಿಯಾಗಿದೆ ಎಂದು ಸಾಬೀತಾಗಿದೆ. ಅವರ ನಾಯಕತ್ವದ ಪ್ರತಿಭೆ ಎಲ್ಲರಿಗೂ ತಿಳಿದಿದ್ದು, ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್‌ನ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ.

ಕೆಕೆಆರ್ ಜೊತೆಗಿನ ಸಂವಾದದಲ್ಲಿ ಶ್ರೇಯಸ್ ಅಯ್ಯರ್, ಈ ಬಾರಿ ಕೆಕೆಆರ್ ಪರ ಆಡಲಿದ್ದೇನೆ. ನಾನು ಈ ತಂಡದ ವಿರುದ್ಧ ಆಡಿದಾಗಲೆಲ್ಲ ಅಭಿಮಾನಿಗಳು ಈ ತಂಡವನ್ನು ತುಂಬಾ ಪ್ರೀತಿಸುತ್ತಾರೆ. ಈ ಬಾರಿ ನಾನೇ ಈ ತಂಡದ ನಾಯಕನಾಗಿದ್ದು, ಕ್ರೀಡಾಂಗಣ ನಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ. ನಾನು ಜವಾಬ್ದಾರಿಗೆ ಸಿದ್ಧನಿದ್ದೇನೆ ಮತ್ತು ಚಾಂಪಿಯನ್‌ಶಿಪ್ ಗೆಲ್ಲಲು ಬಯಸುತ್ತೇನೆ ಎಂದಿದ್ದಾರೆ.

ಶ್ರೇಯಸ್ ಅಯ್ಯರ್ ಕೆಕೆಆರ್ ವಾತಾವರಣವನ್ನೇ ಬದಲಾಯಿಸಲಿದ್ದಾರೆ

ಶ್ರೇಯಸ್ ಅಯ್ಯರ್ ತಮ್ಮ ನಾಯಕತ್ವದ ಬಗ್ಗೆ ವಿಶೇಷವಾದ ವಿಷಯವನ್ನು ಹೇಳಿದ್ದಾರೆ. ಅಯ್ಯರ್, ನಾನು ಆಟಗಾರರ ನಾಯಕ. ಎಲ್ಲಾ ಆಟಗಾರರು ಒಂದೇ ಗುರಿಯ ಬಗ್ಗೆ ಯೋಚಿಸುವಂತಹ ವಾತಾವರಣವನ್ನು ಸೃಷ್ಟಿಸಲು ನಾನು ಬಯಸುತ್ತೇನೆ. ನಾನು ಈಗ ಹೆಚ್ಚು ಅನುಭವವನ್ನು ಹೊಂದಿರುವುದರಿಂದ ಮತ್ತು ಹಿಂದೆಂದಿಗಿಂತಲೂ ಹೆಚ್ಚು ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನು ಹೊಂದಿರುವುದರಿಂದ ವಿಭಿನ್ನ ಮನಸ್ಥಿತಿಯೊಂದಿಗೆ ಕೆಕೆಆರ್‌ಗೆ ಬರುತ್ತಿದ್ದೇನೆ. ಕೆಕೆಆರ್ ನನ್ನನ್ನು ಖರೀದಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅಯ್ಯರ್ ಹೇಳಿದ್ದಾರೆ. ನಾನು ಆ ದಿನ ಹರಾಜು ನೋಡುತ್ತಿದ್ದೆ. ಕೆಕೆಆರ್ ಮೊದಲಿನಿಂದಲೂ ನನ್ನನ್ನು ಖರೀದಿಸಲು ಮುಂದಾಯಿತು. ನನ್ನನ್ನು ಖರೀದಿಸಲು ಇನ್ನೂ ದೊಡ್ಡ ತಂಡಗಳು ಇದ್ದವು. ನಾವೆಲ್ಲ ಆಟಗಾರರು ಒಟ್ಟಿಗೆ ಕುಳಿತು ಹರಾಜು ನೋಡುತ್ತಿದ್ದೆವು. ನನ್ನ ಹೃದಯವು ವೇಗವಾಗಿ ಬಡಿಯುತ್ತಿತ್ತು ಮತ್ತು ನನ್ನ ಭಾವನೆಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ಕೆಕೆಆರ್ ನನ್ನನ್ನು ಖರೀದಿಸಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ.

ಕೆಕೆಆರ್ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು
IPL 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಕಪಕ್ಷೀಯ ರೀತಿಯಲ್ಲಿ KKR ಅನ್ನು ಸೋಲಿಸಿತು. ಕಳೆದ ಋತುವಿನಲ್ಲಿ, KKR ಬ್ಯಾಟಿಂಗ್‌ನಲ್ಲಿ ದಯನೀಯವಾಗಿ ವಿಫಲವಾದ ಇಯಾನ್ ಮಾರ್ಗನ್ ನಾಯಕತ್ವ ವಹಿಸಿದ್ದರು. ಮೋರ್ಗನ್ ಅವರ ವೈಫಲ್ಯವು KKR ಗೆ ತುಂಬಾ ದುಬಾರಿಯಾಗಿತ್ತು. ಫ್ರಾಂಚೈಸಿ ಅವರನ್ನು ಮೊದಲು ಉಳಿಸಿಕೊಳ್ಳದ ಕಾರಣ, ನಂತರ ಅವರನ್ನು ಯಾವುದೇ ತಂಡ ಖರೀದಿಸಲಿಲ್ಲ.

ಇದನ್ನೂ ಓದಿ:IND vs SL: ಒಂದೇ ಒಂದು ಟಿ20 ಪಂದ್ಯದಲ್ಲಿ ಭಾರತ ಸೃಷ್ಟಿಸಿದ ಹಲವು ದಾಖಲೆಗಳಿವು..!