Will young: ಉಫ್…ಹೀಗೂ ಕ್ಯಾಚ್ ಹಿಡಿಯಬಹುದಾ?: ಅದ್ಭುತ ಕ್ಯಾಚ್ ವಿಡಿಯೋ ವೈರಲ್
Will young amazing catch video: ಈ ಮೊತ್ತವನ್ನು ಬೆನ್ನೆತ್ತಿರುವ ನ್ಯೂಜಿಲೆಂಡ್‌ಗೆ ಕಗಿಸೊ ರಬಾಡ ಆರಂಭಿಕ ಆಘಾತ ನೀಡಿದ್ದಾರೆ. ಆರಂಭಿಕ ನಾಯಕ ಟಾಮ್ ಲ್ಯಾಥಮ್ (01) ಮತ್ತು ವಿಲ್ ಯಂಗ್ (00) ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿ ಒಂಬತ್ತು ರನ್‌ಗಳಿಗೆ ಎರಡು ವಿಕೆಟ್ ಪಡೆದರು.
ಕ್ರೈಸ್ಟ್ಚರ್ಚ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ (New Zealand vs South Africa 2nd Test) ನಡುವಣ 2ನೇ ಟೆಸ್ಟ್ ಪಂದ್ಯವು ಇದೀಗ ವಿಲ್ ಯಂಗ್ ಅವರ ಅದ್ಭುತ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕೊ ಯಾನ್ಸನ್ ಭರ್ಜರಿ ಹೊಡೆತ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲಿ ಓಡಿ ಬಂದ ನ್ಯೂಜಿಲೆಂಡ್ ಫೀಲ್ಡರ್ ವಿಲ್ ಯಂಗ್ ಒಂದೇ ಕೈಯಿಂದ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದೀಗ ವಿಲ್ ಯಂಗ್ ಅವರ ಈ ಜಬರ್ದಸ್ತ್ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದೆ. ಅಲ್ಲದೆ 2022 ರ ಅತ್ಯಾಧ್ಬುತ ಕ್ಯಾಚ್ ಎಂದು ಈ ಕ್ಯಾಚ್ ಅನ್ನು ವರ್ಣಿಸಲಾಗುತ್ತಿದೆ.
ಕೈಲ್ ವೆರ್ನೆ ಶತಕ: ಕ್ವಿಂಟನ್ ಡಿ ಕಾಕ್ ಅವರ ಹಠಾತ್ ನಿವೃತ್ತಿಯ ನಂತರ ವಿಕೆಟ್ ಕೀಪರ್ ಆಗಿ ಅಧಿಕಾರ ವಹಿಸಿಕೊಂಡ ಕೈಲ್ ವೆರ್ನೆ ಅವರ ಚೊಚ್ಚಲ ಶತಕದೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದು ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ವೆರ್ನೆ ಅವರ ಅಜೇಯ 136 ರನ್‌ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್‌ಗೆ 354 ರನ್‌ಗಳಿಸಿ ಡಿಕ್ಲೇರ್ ಮಾಡಿತು. ಈ ಮೂಲಕ ನ್ಯೂಜಿಲೆಂಡ್‌ಗೆ 425 ರನ್‌ಗಳ ಗುರಿ ನೀಡಿದೆ.
View this post on Instagram
ಈ ಮೊತ್ತವನ್ನು ಬೆನ್ನೆತ್ತಿರುವ ನ್ಯೂಜಿಲೆಂಡ್‌ಗೆ ಕಗಿಸೊ ರಬಾಡ ಆರಂಭಿಕ ಆಘಾತ ನೀಡಿದ್ದಾರೆ. ಆರಂಭಿಕ ನಾಯಕ ಟಾಮ್ ಲ್ಯಾಥಮ್ (01) ಮತ್ತು ವಿಲ್ ಯಂಗ್ (00) ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿ ಒಂಬತ್ತು ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಹೆನ್ರಿ ನಿಕೋಲ್ಸ್ (07) ಮತ್ತು ಡೇರಿಲ್ ಮಿಚೆಲ್ (24) ಅವರನ್ನು ಬೌಲ್ಡ್ ಮಾಡುವ ಮೂಲಕ ನ್ಯೂಜಿಲೆಂಡ್‌ನ ಸಂಕಷ್ಟವನ್ನು ಹೆಚ್ಚಿಸಿದರು. ದಿನದಾಟದ ಅಂತ್ಯದ ವೇಳೆಗೆ ದಕ್ಷಿಣ ಆಫ್ರಿಕಾ ಮೂಲದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ 60 ರನ್ ಗಳಿಸಿ ಆಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಾಮ್ ಬ್ಲಂಡೆಲ್ ಕ್ರೀಸ್ನಲ್ಲಿದ್ದಾರೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(New Zealand vs South Africa 2nd Test: Will young amazing catch video of Marco Jansen)