ನಿನ್ನೆ (ಏಪ್ರಿಲ್ 7) ಕೆಎಲ್ ರಾಹುಲ್ (KL Rahul) ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ( Delhi Capitals) ಸೋಲನುಭವಿಸಿತ್ತು. ಲಕ್ನೋ 6 ವಿಕೆಟ್ ಹಾಗೂ 2 ಎಸೆತಗಳಲ್ಲಿ ಜಯ ಸಾಧಿಸಿತು. ಸೋಲಿನ ನಂತರ ನಿರಾಸೆ ಸಹಜ, ಡೆಲ್ಲಿ ತಂಡವೂ ಇದರಿಂದ ಹೊರತಾಗಿಲ್ಲ. ದೆಹಲಿ ಕ್ಯಾಪಿಟಲ್ಸ್ ನಷ್ಟದ ದುಃಖದಲ್ಲಿದ್ದರೆ, ಇದರೊಂದಿಗೆ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಮಾಡಿದ ತಪ್ಪಿನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲುಂಟಾಗಿದ್ದು, ಲಕ್ನೋ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಡೆಲ್ಲಿ ಗೆಲುವಿಗೆ 150 ರನ್ ಗುರಿ ನೀಡಿತ್ತು. ಲಕ್ನೋ ನಾಲ್ಕು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಲಕ್ನೋ ಪಂದ್ಯದ ವೇಳೆ ನಾಯಕ ರಾಹುಲ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈನ ಡಿವೈಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಕಳೆದ ಮೂರು ಪಂದ್ಯಗಳಲ್ಲಿ ಡೆಲ್ಲಿಗೆ ಇದು ಎರಡನೇ ಸೋಲು. ಲಕ್ನೋ ಸೂಪರ್ ಜೈಂಟ್ಸ್ ತನ್ನ ನಾಲ್ಕನೇ ಪಂದ್ಯದಲ್ಲಿ ಮೂರನೇ ಗೆಲುವು ಸಾಧಿಸಿದೆ.
ದಂಡ ತೆತ್ತ ಮೂರನೇ ಕ್ಯಾಪ್ಟನ್
ರಿಷಬ್ ಪಂತ್ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಿಗಧಿತ ಸಮಯದಲ್ಲಿ ಓವರ್ ಮುಗಿಸದ ಕಾರಣ ರಿಷಬ್ ಪಂತ್ಗೆ ಐಪಿಎಲ್ ಆಡಳಿತ ಮಳಡಳಿ ದಂಡ ವಿಧಿಸಿದೆ. ಈ ಋತುವಿನಲ್ಲಿ ಸ್ಲೋ ಓವರ್ ರೇಟ್ ವಿರುದ್ಧ ದಂಡ ತೆರುತ್ತಿರುವ ಮೂರನೇ ಕ್ಯಾಪ್ಟನ್ ಪಂತ್.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗೆ ನಿಧಾನಗತಿಯ ಓವರ್ ಕಾರಣಕ್ಕೆ ದಂಡ ವಿಧಿಸಲಾಗಿತ್ತು. ರೋಹಿತ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ದಂಡ ಪಾವತಿಸಿದ್ದರು. ಬರೋಬ್ಬರಿ 12 ಲಕ್ಷ ರೂಪಾಯಿ ಕಳೆದುಕೊಂಡಿರುವ ರಿಷಬ್ ಪಂತ್ ಐಪಿಎಲ್ 2022 ರಲ್ಲಿ ದಂಡ ಕಟ್ಟಿದ ಮೂರನೇ ನಾಯಕರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಏಕೆ ಸೋತಿತು?
ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೃಥ್ವಿ ಶಾ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇಯಲ್ಲಿ ಡೆಲ್ಲಿ ಅಜೇಯ 52 ರನ್ ಗಳಿಸಿತ್ತು. ಪೃಥ್ವಿ 34 ಎಸೆತಗಳಲ್ಲಿ 61 ರನ್ ಗಳಿಸಿದರು. ಆದರೆ ಪೃಥ್ವಿ ಔಟಾದ ನಂತರ, ಏಳು ರನ್‌ಗಳಿಗೆ ತಂಡದ ಎರಡು ವಿಕೆಟ್‌ಗಳು ಉರುಳಿದವು. ಡೇವಿಡ್ ವಾರ್ನರ್ ಮತ್ತು ರೋವ್ಮನ್ ಪೊವೆಲ್ ಪವರ್ ಹಿಟ್ಟರ್ ಆಗಿದ್ದಾರೆ. ಆದರೆ ಇಬ್ಬರಿಗೂ ತಮ್ಮ ಸಾಮಥ್ರ್ಯಕ್ಕೆ ತಕ್ಕ ಆಟ ಆಡಲಾಗಲಿಲ್ಲ. ವಾರ್ನರ್ ನಾಲ್ಕು ಮತ್ತು ಪೊವೆಲ್ ಮೂರು ರನ್ ಗಳಿಸಿ ಔಟಾದರು.
ಸೋಲಿನ ಬಳಿಕ ಪಂತ್ ಮಾತು
ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ನಾಯಕ ರಿಷಭ್ ಪಂತ್ ಏನು ಹೇಳಿದರು ಎಂಬುದನ್ನು ಕೇಳಿ. “ಮೈದಾನದಲ್ಲಿ ಡ್ಯೂ ಇದ್ದ ಕಾರಣ ಸೋಲಿಗೆ ಯಾರನ್ನೂ ದೂರಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ನಲ್ಲಿ 10 ರಿಂದ 15 ರಷ್ಟು ರನ್ಗಳು ಕಡಿಮೆ ಬಂದವು. ಕೊನೆಯಲ್ಲಿ ಆವೇಶ್ ಖಾನ್ ಮತ್ತು ಜೇಸನ್ ಹೋಲ್ಡರ್ ನಾವು ರನ್ ಗಳಿಸದಂತೆ ಉತ್ತಮ ಕಡಿವಾಣ ಹಾಕಿದರು. ಕ್ರೆಡಿಟ್ ಅವರಿಗೆ ಸಲ್ಲಬೇಕು. ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಏನೇ ಆದರೂ ನಾವು ಪಂದ್ಯದ ಕೊನೆಯ ಹಂತದ ವರೆಗೂ ಶೇ. 100 ರಷ್ಟು ಪರಿಶ್ರಮ ಹಾಕಬೇಕು ಎಂದು ಮಾತನಾಡಕೊಂಡೆವು. ಪವರ್ ಪ್ಲೇನಲ್ಲಿ ಆಟ ಸಾಮಾನ್ಯವಾಗಿತ್ತು. ಯಾವುದೇ ವಿಕೆಟ್ ಕೀಳಲಿಲ್ಲ. ನಮ್ಮ ಸ್ಪಿನ್ನರ್ಗಳು ಮಧ್ಯಮ ಓವರ್ನಲ್ಲಿ ಉತ್ತಮ ನಿರ್ವಹಣೆ ತೋರಿದರು. ಅಂತಿಮವಾಗಿ ನಾವು 10-15 ರನ್ ಕಡಿಮೆ ಹೊಡೆದೆವು ಎಂಬುದು,” ಪಂತ್ ಮಾತಾಗಿತ್ತು.
ಇದನ್ನೂ ಓದಿ:Dewald Brevis IPL 2022: ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ ಪ್ರೇಯಸಿ ಯಾರು ಗೊತ್ತಾ? ಫೋಟೋ ನೋಡಿ