ಈ ಬಾರಿಯ ಐಪಿಎಲ್ (IPL 2022) ಮೆಗಾ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಇಬ್ಬರು ಯುವ ಆಟಗಾರರನ್ನು 8 ಕೋಟಿ ರೂ. ಮೊತ್ತ ರಿಟೈನ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಹೀಗೆ ಎಸ್ಆರ್ಹೆಚ್ ತಂಡ ಉಳಿಸಿಕೊಂಡ ಆಟಗಾರರು ಜಮ್ಮು-ಕಾಶ್ಮೀರ ಕ್ರಿಕೆಟಿಗರು ಎಂಬುದೇ ವಿಶೇಷ. ಅದರಲ್ಲೂ ಯುವ ಆಟಗಾರ ಅಬ್ದುಲ್ ಸಮದ್ ಎಸ್ಆರ್ಹೆಚ್ ಪರ ಕೆಲ ಪಂದ್ಯಗಳಲ್ಲಿ ಆಡಿರುವ ಕಾರಣ ರಿಟೈನ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಅಚ್ಚರಿ ಎಂದರೆ ಯುವ ವೇಗಿ ಉಮ್ರಾನ್ ಮಲಿಕ್ಗೂ (Umran Malik) ಎಸ್ಆರ್ಹೆಚ್ 4 ಕೋಟಿ ರೂ. ವ್ಯಯಿಸಿತ್ತು. ತಂಡದ ಈ ನಡೆಯ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ಮೂಡಿಸಿದ್ದರು. ಅನ್ಕ್ಯಾಪ್ಡ್ ಆಟಗಾರನಿಗೆ 4 ಕೋಟಿ ರೂ. ನೀಡಿದ್ದು ತಪ್ಪು ನಿರ್ಧಾರ ಎಂಬಿತ್ಯಾದಿ ಅಭಿಪ್ರಾಯಗಳನ್ನು ಮಂಡಿಸಿದ್ದರು.
ಆದರೆ ಇದೀಗ ಎಸ್ಆರ್ಹೆಚ್ ತಂಡವು ಉಮ್ರಾನ್ ಮಲಿಕ್ ಅವರನ್ನು ಯಾಕಾಗಿ ಉಳಿಸಿಕೊಂಡಿತ್ತು ಎಂಬುದಕ್ಕೆ ಸ್ಪಷ್ಟ ಉತ್ತರವೊಂದು ಸಿಕ್ಕಿದೆ. ಅಭ್ಯಾಸ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಮಾಡುತ್ತಿದ್ದ ಬೌಲಿಂಗ್ ಝಲಕ್ನ ವಿಡಿಯೋವೊಂದು ವೈರಲ್ ಆಗಿದೆ. ಸ್ಪೋಟಕ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ಗೆ ಬೌಲಿಂಗ್ ಮಾಡಿದ್ದ ಉಮ್ರಾನ್ ಬ್ಯಾಕ್ ಟು ಬ್ಯಾಕ್ ಬೌನ್ಸರ್ಗಳನ್ನು ಎಸೆದಿದ್ದರು. ಪೂರನ್ ಚೆಂಡನ್ನು ಗುರುತಿಸುವ ಮುನ್ನವೇ ಬಾಲ್ ಕೀಪರ್ ಕೈ ಸೇರುತ್ತಿತ್ತು.
ಅಷ್ಟೇ ಅಲ್ಲದೆ ಉಮ್ರಾನ್ ಎಸೆತಕ್ಕೆ ಪುಲ್ ಶಾಟ್ ಹೊಡೆಯಲು ಹೋಗಿ ಪೂರನ್ ಮಿಡ್-ವಿಕೆಟ್‌ನಲ್ಲೇ ಸುಲಭ ಕ್ಯಾಚ್ ಆದರು. ಅಂದರೆ ಅನುಭವಿ ರಾಷ್ಟ್ರೀಯ ಆಟಗಾರ ನಿಕೋಲಸ್ ಪೂರನ್ ಅವರನ್ನು ಉಮ್ರಾನ್ ಮಲಿಕ್ ಅಭ್ಯಾಸದ ವೇಳೆ ಎಲ್ಲಾ ರೀತಿಯಲ್ಲೂ ಇಕ್ಕಟಿಗೆ ಸಿಲುಕಿಸಿದ್ದರು. ವೇಗ ಹಾಗೂ ಬೌನ್ಸರ್ ಮೂಲಕ ಸಂಚಲನ ಸೃಷ್ಟಿಸಿರುವ ಕಾಶ್ಮೀರಿ ವೇಗಿ ಈ ಬಾರಿಯ ಐಪಿಎಲ್ನಲ್ಲಿ ಟ್ರಂಪ್ ಕಾರ್ಡ್ ಆಗುವ ವಿಶ್ವಾಸ ಮೂಡಿಸಿದ್ದಾರೆ.
Umran Malik to Nicholas Pooran:
Ball 1: A SCARY bouncer
Ball 2: Another bouncer and OUT?: @SunRisers #IPL #IPL2022 #SunrisersHyderabad pic.twitter.com/yoVrItcA42
— Kashmir Sports Watch (@Ksportswatch) March 23, 2022
ಅದರಲ್ಲೂ ಗನ್ ವೇಗಿ ಖ್ಯಾತಿಯ ಡೇಲ್ ಸ್ಟೇನ್ ಕೋಚಿಂಗ್ನಲ್ಲಿ ಉಮ್ರಾನ್ ಮಲಿಕ್ ಈ ಬಾರಿ ಮತ್ತಷ್ಟು ಪಳಗಿದ್ದಾರೆ. ಹೀಗಾಗಿ ಉಮ್ರಾನ್ ಮಲಿಕ್ ಈ ಬಾರಿ ಐಪಿಎಲ್ನಲ್ಲಿ ಎಲ್ಲರ ಕೇಂದ್ರ ಬಿಂದುವಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈಗಾಗಲೇ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಉಮ್ರಾನ್ ಬೌಲಿಂಗ್ ವೇಗವನ್ನು ನೋಡಿ, ಕಠಿಣ ಅಭ್ಯಾಸವನ್ನು ನಡೆಸು ರಾಷ್ಟ್ರೀಯ ತಂಡದಲ್ಲಿ ಚಾನ್ಸ್ ಸಿಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್ ಅಭ್ಯಾಸ ಪಂದ್ಯಗಳಲ್ಲಿ ಬೆಂಕಿ ಬೌನ್ಸರ್ ಮೂಲಕ ಉಮ್ರಾನ್ ಮಲಿಕ್ ಗಮನ ಸೆಳೆದಿದ್ದಾರೆ.
ವಿಶೇಷ ಎಂದರೆ 22ರ ಹರೆಯ ಉಮ್ರಾನ್ IPL 2021 ರಲ್ಲಿ 151.03 ವೇಗದಲ್ಲಿ ಬೌಲ್ ಮಾಡಿದ್ದರು. ಇದು ಕಳೆದ ಸೀಸನ್ ಐಪಿಎಲ್ನಲ್ಲಿದ್ದ ಭಾರತೀಯ ಬೌಲರ್‌ನ ವೇಗದ ಎಸೆತವಾಗಿದೆ. ಹೀಗಾಗಿ ಈ ಬಾರಿ ಉಮ್ರಾನ್ ಕಡೆಯಿಂದ ಮತ್ತಷ್ಟು ವೇಗದ ಬೌಲಿಂಗ್ ಅನ್ನು ನಿರೀಕ್ಷಿಸಬಹುದು.
ಸನ್ ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ:
ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಜೆ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಸೌರಭ್ ದುಬೆ, ಸೀನ್ ಅಬಾಟ್, ಆರ್ ಸಮರ್ಥ್, ಜೆ ಸುಚಿತ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
ಇದನ್ನೂ ಓದಿ: IPL 2022: ಐಪಿಎಲ್ನ ಆರಂಭಿಕ ಪಂದ್ಯಗಳಿಗೆ 23 ಸ್ಟಾರ್ ಆಟಗಾರರು ಅಲಭ್ಯ