PBKS vs RCB IPL 2022 Match Prediction: ಪಂಜಾಬ್-ಆರ್‌ಸಿಬಿ ಹಣೆಬರಹ ಬದಲಿಸುತ್ತಾರಾ ನೂತನ ನಾಯಕರು?
PBKS vs RCB IPL 2022 Match Prediction: ಈ ಪಂದ್ಯವನ್ನು ಪಂಜಾಬ್ ತಂಡದ ಬ್ಯಾಟಿಂಗ್ ಮತ್ತು ಬೆಂಗಳೂರಿನ ಬೌಲಿಂಗ್ ನಡುವಿನ ಪೈಪೋಟಿ ಎಂದು ಕರೆದರೆ ತಪ್ಪಾಗದು. ಮೆಗಾ ಹರಾಜಿನ ನಂತರ ಸಿದ್ಧಗೊಂಡಿರುವ ತಂಡದಲ್ಲಿ, ಆರ್‌ಸಿಬಿ ಪಂಜಾಬ್‌ಗಿಂತ ಉತ್ತಮ ಮತ್ತು ಸಮತೋಲಿತ ತಂಡವಾಗಿದೆ.
ಕಾಯುವಿಕೆ ಮುಗಿದು ಎರಡು ತಿಂಗಳ ಕ್ರಿಕೆಟ್ ಜಾತ್ರೆ ಆರಂಭವಾಗಿದೆ. ಮಾರ್ಚ್ 26 ರ ಶನಿವಾರದಂದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ನಡುವಿನ ಪಂದ್ಯದೊಂದಿಗೆ ಐಪಿಎಲ್ (IPL 2022) ನ 15 ನೇ ಋತುವಿನ ಚಾಂಪಿಯನ್‌ನ ರೇಸ್ ಪ್ರಾರಂಭವಾಗಿದೆ. ಇನ್ಮುಂದೆ ಪ್ರತಿದಿನ ಪಂದ್ಯಗಳು ನಡೆಯಲ್ಲಿದ್ದು, ಜನವರಿ 27 ಭಾನುವಾರದಂದು ಎರಡು ಪಂದ್ಯಗಳು ಅಂದರೆ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ, ಎರಡನೇ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರಾತ್ರಿ 7.30 ರಿಂದ ನಡೆಯಲಿದ್ದು, ಇದರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಯಾವಾಗಲೂ ಅನೇಕ ಶ್ರೇಷ್ಠ ಆಟಗಾರರಿಂದ ತುಂಬಿವೆ, ಆದರೆ ಪ್ರಶಸ್ತಿಯನ್ನು ಗೆದ್ದಿಲ್ಲ.
10 ತಂಡಗಳ ಈ ಆವೃತ್ತಿಯಲ್ಲಿ ಎರಡು ಗುಂಪುಗಳನ್ನು ವಿಂಗಡಿಸಲಾಗಿದ್ದು, ಎರಡೂ ತಂಡಗಳು ಒಂದೇ ಗುಂಪಿನಲ್ಲಿವೆ. ಅಂದರೆ, ಇಬ್ಬರೂ ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದಾರೆ. ಇಬ್ಬರ ನಡೆಉವಿನ ಮೊದಲ ಸ್ಪರ್ಧೆಯೂ ಹೊಸ ಆವೃತ್ತಿಗೆ ಅವರ ಮೊದಲ ಪಂದ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ಉತ್ತಮ ಫಲಿತಾಂಶಗಳೊಂದಿಗೆ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಪಡೆಯುವ ನಿರೀಕ್ಷೆಯಲ್ಲಿವೆ. ಆದಾಗ್ಯೂ, ಸೀಸನ್ ಆರಂಭಿಕ ಪಂದ್ಯಗಳಲ್ಲಿ ಎರಡೂ ತಂಡಗಳು ತಮ್ಮ ಕೆಲವು ಆಟಗಾರರ ಅಲಭ್ಯತೆಯಿಂದ ತೊಂದರೆಗೊಳಗಾಗಿವೆ.
ಆಟಗಾರರ ಲಭ್ಯತೆಯ ಕಾಳಜಿ ಬೆಂಗಳೂರಿನ ಪ್ರಮುಖ ಆಸ್ಟ್ರೇಲಿಯನ್ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಮೊದಲ ಮೂರು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇವರಿಬ್ಬರ ಹೊರತಾಗಿ ಆಸ್ಟ್ರೇಲಿಯದ ಬೌಲರ್ ಜೇಸನ್ ಬೆಹ್ರೆಂಡಾರ್ಫ್ ಕೂಡ ಪಾಕಿಸ್ತಾನ ಪ್ರವಾಸದಲ್ಲಿದ್ದು, ಅವರು ಕೂಡ ಏಪ್ರಿಲ್ 6ರ ಮೊದಲು ತಂಡವನ್ನು ಸೇರಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಪಂಜಾಬ್‌ಗೂ ಸವಾಲು ಎದುರಾಗಿದೆ. ತಂಡದ ಇಬ್ಬರು ಪ್ರಮುಖ ವಿದೇಶಿ ಆಟಗಾರರಾದ ಕಗಿಸೊ ರಬಾಡ ಮತ್ತು ಜಾನಿ ಬೈರ್‌ಸ್ಟೋ ಮೊದಲ ಪಂದ್ಯಕ್ಕೆ ಗೈರಾಗಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಕಾರಣ ಬೈರ್‌ಸ್ಟೋ ಎರಡನೇ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.
ಹೊಸ ನಾಯಕರಿಂದ ಯಾರಿಗೆ ಲಾಭ? ಈಗ ನಾಯಕರ ಬಗ್ಗೆ ಮಾತನಾಡೋಣ. ಈ ಸೀಸನ್ನೊಂದಿಗೆ ಎರಡೂ ತಂಡಗಳಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಫಾಫ್ ಡು ಪ್ಲೆಸಿಸ್, ಪಂಜಾಬ್‌ನಲ್ಲಿ ಕೆಎಲ್ ರಾಹುಲ್ ನಂತರ ಮಯಾಂಕ್ ಅಗರ್ವಾಲ್ ನಾಯಕರಾಗಿದ್ದಾರೆ. ಇಬ್ಬರೂ ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕರಾಗುತ್ತಿದ್ದಾರೆ. ಆದರೆ ಇಲ್ಲಿ ಎರಡು ತಂಡಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಡು ಪ್ಲೆಸಿಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ ಮತ್ತು ಉತ್ತಮ ನಾಯಕರಾಗಿದ್ದಾರೆ. ಅಲ್ಲದೆ, ಅವರ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರು ಇದ್ದಾರೆ. ಮತ್ತೊಂದೆಡೆ, ಮಯಾಂಕ್ ಮೊದಲ ಬಾರಿಗೆ ಹಿರಿಯ ಮಟ್ಟದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ದೊಡ್ಡ ಮಟ್ಟದಲ್ಲಿ ನಾಯಕತ್ವದ ಅನುಭವವನ್ನು ಹೊಂದಿರುವ ಯಾವುದೇ ಆಟಗಾರ ಈ ತಂಡದಲ್ಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ RCB ಇದರ ಲಾಭ ಪಡೆಯಬಹುದು.
ಬೆಂಗಳೂರು ಬೌಲಿಂಗ್ ಈಗ ಆಟಗಾರರ ಬಗ್ಗೆ ಮಾತನಾಡೋಣ. ಈ ಪಂದ್ಯವನ್ನು ಪಂಜಾಬ್ ತಂಡದ ಬ್ಯಾಟಿಂಗ್ ಮತ್ತು ಬೆಂಗಳೂರಿನ ಬೌಲಿಂಗ್ ನಡುವಿನ ಪೈಪೋಟಿ ಎಂದು ಕರೆದರೆ ತಪ್ಪಾಗದು. ಮೆಗಾ ಹರಾಜಿನ ನಂತರ ಸಿದ್ಧಗೊಂಡಿರುವ ತಂಡದಲ್ಲಿ, ಆರ್‌ಸಿಬಿ ಪಂಜಾಬ್‌ಗಿಂತ ಉತ್ತಮ ಮತ್ತು ಸಮತೋಲಿತ ತಂಡವಾಗಿದೆ. ತಂಡದ ಬಲವು ಅದರ ಬೌಲಿಂಗ್‌ನಲ್ಲಿದೆ, ಅದು ಮುಂಬೈನಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಪ್ರಾಯಶಃ ಡೇವಿಡ್ ವಿಲ್ಲಿ ಅವರ ವೇಗದ ದಾಳಿಯನ್ನು ವನಿಂದು ಹಸರಂಗ ಮತ್ತು ಶಹಬಾಜ್ ಅಹ್ಮದ್ ಅವರ ಸ್ಪಿನ್ ಬೆಂಬಲಿಸುತ್ತದೆ. ಪಂಜಾಬ್‌ಗೆ ಹೋಲಿಸಿದರೆ ತಂಡದ ಬ್ಯಾಟಿಂಗ್ ಸ್ವಲ್ಪ ನೀರಸವಾಗಿದೆ. ತಂಡದ ಪ್ರಮುಖ ಜವಾಬ್ದಾರಿ ನಾಯಕ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೇಲಿದೆ. ಮ್ಯಾಕ್ಸ್‌ವೆಲ್ ಇಲ್ಲದಿರುವುದರಿಂದ ತಂಡ ಒತ್ತಡಕ್ಕೆ ಸಿಲುಕಲಿದೆ. ಮ್ಯಾಕ್ಸ್‌ವೆಲ್ ಸ್ಥಾನವನ್ನು ತುಂಬಲು ಶೆರ್ಫೇನ್ ರುದರ್‌ಫೋರ್ಡ್ ಅವಕಾಶ ಪಡೆಯುವ ನಿರೀಕ್ಷೆಯಿದೆ.
ಪಂಜಾಬ್ ಬ್ಯಾಟಿಂಗ್ ಅದೇ ಸಮಯದಲ್ಲಿ, ಪಂಜಾಬ್‌ನ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಶಕ್ತಿ ಇದೆ. ಓಪನಿಂಗ್‌ನಲ್ಲಿ ಬಲಿಷ್ಠ ನಾಯಕ ಮಯಾಂಕ್ ಮತ್ತು ಶಿಖರ್ ಧವನ್ ಜೋಡಿಯಿದ್ದು, ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟನ್, ಶಾರುಖ್ ಖಾನ್ ಮತ್ತು ಓಡಿನ್ ಸ್ಮಿತ್ ಅವರ ಬಲವಿದೆ. ಮಧ್ಯದಲ್ಲಿ 19 ವರ್ಷದೊಳಗಿನವರ ತಂಡದ ಸ್ಟಾರ್ ಆಲ್ ರೌಂಡರ್ ರಾಜ್ ಬಾವಾ ಅವರಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಆದರೆ, ರಬಾಡ ಅನುಪಸ್ಥಿತಿಯು ಬೌಲಿಂಗ್ ಮೇಲೆ ಪರಿಣಾಮ ಬೀರಿದೆ. ಅರ್ಷದೀಪ್ ಸಿಂಗ್ ಅವರನ್ನು ಬೆಂಬಲಿಸಲು ಸಂದೀಪ್ ಶರ್ಮಾ, ರಿಷಿ ಧವನ್ ಮತ್ತು ಇಶಾನ್ ಪೊರೆಲ್ ಅವರಂತಹ ಯುವ ಬೌಲರ್‌ಗಳನ್ನು ಅವಲಂಬಿಸಬೇಕಾಗಿದೆ. ಆದರೆ, ಸ್ಪಿನ್‌ನಲ್ಲಿ ರಾಹುಲ್ ಚಹಾರ್ ಜೊತೆ ಹರ್‌ಪ್ರೀತ್ ಬ್ರಾರ್ ಇದ್ದಾರೆ. ಆದರೂ ಬೌಲಿಂಗ್ ತಂಡ ದುರ್ಬಲವಾಗಿ ಕಾಣುತ್ತಿದೆ.
ಎರಡೂ ತಂಡಗಳು ಹೀಗಿವೆ ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಅನುಜ್ ರಾವತ್, ಮಹಿಪಾಲ್, ಡೇವಿಡ್ ವಿಲ್ಲಿ, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್ , ಸಿದ್ಧಾರ್ಥ್ ಕೌಲ್, ಫಿನ್ ಅಲೆನ್, ಲವನೀತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಚಾಮಾ ಮಿಲಿಂದ್.
ಪಿಬಿಕೆಎಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟನ್, ಜಾನಿ ಬೈರ್‌ಸ್ಟೋವ್, ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ಇಶಾನ್ ಪೊರೆಲ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ವೈಭವ್ ಅರೋರಾ, ಸಂದೀಪ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಬೆನ್ನಿ ಹೌವೆಲ್, ಅಥರ್ವ ಟೈಡೆ, ಅಂಶ್ ಪಟೇಲ್, ಓಡಿಯನ್ ಸ್ಮಿತ್, ಪ್ರೇರಕ್ ಮಂಕಡ್, ರಾಜ್ ಬಾವಾ, ರಿಷಿ ಧವನ್, ಶಾರುಖ್ ಖಾನ್, ಹೃತಿಕ್ ಚಟರ್ಜಿ, ಪ್ರಭುಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾ.
ಇದನ್ನೂ ಓದಿ:IPL 2022: ಅಬ್ಬರಿಸಿದ ಪಡಿಕ್ಕಲ್, ಚಹಲ್ ಮ್ಯಾಜಿಕ್! ರಾಜಸ್ಥಾನ್ ಪರ ಮಿಂಚಿದ ಮಾಜಿ ಆರ್‌ಸಿಬಿ ಆಟಗಾರರು