IPL 2022: ಭಾರತೀಯ ಯುವ ವೇಗಿಯ ಬೆಂಕಿ ಬೌನ್ಸರ್​ಗೆ ಬೆಚ್ಚಿಬಿದ್ದ ಪೂರನ್

IPL 2022: ಸನ್ ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಜೆ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್

IPL 2022: ಭಾರತೀಯ ಯುವ ವೇಗಿಯ ಬೆಂಕಿ ಬೌನ್ಸರ್​ಗೆ ಬೆಚ್ಚಿಬಿದ್ದ ಪೂರನ್
IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 26, 2022 | 5:03 PM

ಈ ಬಾರಿಯ ಐಪಿಎಲ್ (IPL 2022) ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಇಬ್ಬರು ಯುವ ಆಟಗಾರರನ್ನು 8 ಕೋಟಿ ರೂ. ಮೊತ್ತ ರಿಟೈನ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಹೀಗೆ ಎಸ್​ಆರ್​ಹೆಚ್ ತಂಡ ಉಳಿಸಿಕೊಂಡ ಆಟಗಾರರು ಜಮ್ಮು-ಕಾಶ್ಮೀರ ಕ್ರಿಕೆಟಿಗರು ಎಂಬುದೇ ವಿಶೇಷ. ಅದರಲ್ಲೂ ಯುವ ಆಟಗಾರ ಅಬ್ದುಲ್ ಸಮದ್ ಎಸ್​ಆರ್​ಹೆಚ್ ಪರ ಕೆಲ ಪಂದ್ಯಗಳಲ್ಲಿ ಆಡಿರುವ ಕಾರಣ ರಿಟೈನ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಅಚ್ಚರಿ ಎಂದರೆ ಯುವ ವೇಗಿ ಉಮ್ರಾನ್ ಮಲಿಕ್​ಗೂ (Umran Malik) ಎಸ್​ಆರ್​​ಹೆಚ್ 4 ಕೋಟಿ ರೂ. ವ್ಯಯಿಸಿತ್ತು. ತಂಡದ ಈ ನಡೆಯ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ಮೂಡಿಸಿದ್ದರು. ಅನ್​ಕ್ಯಾಪ್ಡ್ ಆಟಗಾರನಿಗೆ 4 ಕೋಟಿ ರೂ. ನೀಡಿದ್ದು ತಪ್ಪು ನಿರ್ಧಾರ ಎಂಬಿತ್ಯಾದಿ ಅಭಿಪ್ರಾಯಗಳನ್ನು ಮಂಡಿಸಿದ್ದರು.

ಆದರೆ ಇದೀಗ ಎಸ್​ಆರ್​​ಹೆಚ್ ತಂಡವು ಉಮ್ರಾನ್ ಮಲಿಕ್ ಅವರನ್ನು ಯಾಕಾಗಿ ಉಳಿಸಿಕೊಂಡಿತ್ತು ಎಂಬುದಕ್ಕೆ ಸ್ಪಷ್ಟ ಉತ್ತರವೊಂದು ಸಿಕ್ಕಿದೆ. ಅಭ್ಯಾಸ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಮಾಡುತ್ತಿದ್ದ ಬೌಲಿಂಗ್ ಝಲಕ್​ನ ವಿಡಿಯೋವೊಂದು ವೈರಲ್ ಆಗಿದೆ. ಸ್ಪೋಟಕ ಬ್ಯಾಟ್ಸ್​ಮನ್ ನಿಕೋಲಸ್ ಪೂರನ್​ಗೆ ಬೌಲಿಂಗ್​ ಮಾಡಿದ್ದ ಉಮ್ರಾನ್ ಬ್ಯಾಕ್ ಟು ಬ್ಯಾಕ್ ಬೌನ್ಸರ್​ಗಳನ್ನು ಎಸೆದಿದ್ದರು. ಪೂರನ್ ಚೆಂಡನ್ನು ಗುರುತಿಸುವ ಮುನ್ನವೇ ಬಾಲ್ ಕೀಪರ್ ಕೈ ಸೇರುತ್ತಿತ್ತು.

ಅಷ್ಟೇ ಅಲ್ಲದೆ ಉಮ್ರಾನ್ ಎಸೆತಕ್ಕೆ ಪುಲ್ ಶಾಟ್ ಹೊಡೆಯಲು ಹೋಗಿ ಪೂರನ್ ಮಿಡ್-ವಿಕೆಟ್‌ನಲ್ಲೇ ಸುಲಭ ಕ್ಯಾಚ್ ಆದರು. ಅಂದರೆ ಅನುಭವಿ ರಾಷ್ಟ್ರೀಯ ಆಟಗಾರ ನಿಕೋಲಸ್ ಪೂರನ್ ಅವರನ್ನು ಉಮ್ರಾನ್ ಮಲಿಕ್ ಅಭ್ಯಾಸದ ವೇಳೆ ಎಲ್ಲಾ ರೀತಿಯಲ್ಲೂ ಇಕ್ಕಟಿಗೆ ಸಿಲುಕಿಸಿದ್ದರು. ವೇಗ ಹಾಗೂ ಬೌನ್ಸರ್ ಮೂಲಕ ಸಂಚಲನ ಸೃಷ್ಟಿಸಿರುವ ಕಾಶ್ಮೀರಿ ವೇಗಿ ಈ ಬಾರಿಯ ಐಪಿಎಲ್​ನಲ್ಲಿ ಟ್ರಂಪ್ ಕಾರ್ಡ್ ಆಗುವ ವಿಶ್ವಾಸ ಮೂಡಿಸಿದ್ದಾರೆ.

ಅದರಲ್ಲೂ ಗನ್ ವೇಗಿ ಖ್ಯಾತಿಯ ಡೇಲ್ ಸ್ಟೇನ್ ಕೋಚಿಂಗ್​ನಲ್ಲಿ ಉಮ್ರಾನ್ ಮಲಿಕ್ ಈ ಬಾರಿ ಮತ್ತಷ್ಟು ಪಳಗಿದ್ದಾರೆ. ಹೀಗಾಗಿ ಉಮ್ರಾನ್ ಮಲಿಕ್ ಈ ಬಾರಿ ಐಪಿಎಲ್​ನಲ್ಲಿ ಎಲ್ಲರ ಕೇಂದ್ರ ಬಿಂದುವಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈಗಾಗಲೇ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಉಮ್ರಾನ್ ಬೌಲಿಂಗ್ ವೇಗವನ್ನು ನೋಡಿ, ಕಠಿಣ ಅಭ್ಯಾಸವನ್ನು ನಡೆಸು ರಾಷ್ಟ್ರೀಯ ತಂಡದಲ್ಲಿ ಚಾನ್ಸ್ ಸಿಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್ ಅಭ್ಯಾಸ ಪಂದ್ಯಗಳಲ್ಲಿ ಬೆಂಕಿ ಬೌನ್ಸರ್ ಮೂಲಕ ಉಮ್ರಾನ್ ಮಲಿಕ್ ಗಮನ ಸೆಳೆದಿದ್ದಾರೆ.

ವಿಶೇಷ ಎಂದರೆ 22ರ ಹರೆಯ ಉಮ್ರಾನ್ IPL 2021 ರಲ್ಲಿ 151.03 ವೇಗದಲ್ಲಿ ಬೌಲ್ ಮಾಡಿದ್ದರು. ಇದು ಕಳೆದ ಸೀಸನ್ ಐಪಿಎಲ್​ನಲ್ಲಿದ್ದ ಭಾರತೀಯ ಬೌಲರ್‌ನ ವೇಗದ ಎಸೆತವಾಗಿದೆ. ಹೀಗಾಗಿ ಈ ಬಾರಿ ಉಮ್ರಾನ್ ಕಡೆಯಿಂದ ಮತ್ತಷ್ಟು ವೇಗದ ಬೌಲಿಂಗ್ ಅನ್ನು ನಿರೀಕ್ಷಿಸಬಹುದು.

ಸನ್ ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಜೆ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಸೌರಭ್ ದುಬೆ, ಸೀನ್ ಅಬಾಟ್, ಆರ್ ಸಮರ್ಥ್, ಜೆ ಸುಚಿತ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

ಇದನ್ನೂ ಓದಿ: IPL 2022: ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ 23 ಸ್ಟಾರ್ ಆಟಗಾರರು ಅಲಭ್ಯ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ