IPL 2023: ಮಹಿಳಾ ಐಪಿಎಲ್​ನಲ್ಲಿ 5 ತಂಡಗಳು..!

| Updated By: ಝಾಹಿರ್ ಯೂಸುಫ್

Updated on: Oct 13, 2022 | 8:31 PM

IPL 2023: ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ಫ್ರಾಂಚೈಸಿ ಮಹಿಳಾ ಐಪಿಎಲ್​ ತಂಡಗಳ ಖರೀದಿಗೆ ಆಸಕ್ತಿ ಹೊಂದಿದೆ. ಹೀಗಾಗಿ ಈ ಎರಡು ತಂಡಗಳು ಮಹಿಳಾ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

IPL 2023: ಮಹಿಳಾ ಐಪಿಎಲ್​ನಲ್ಲಿ 5 ತಂಡಗಳು..!
ಸಾಂದರ್ಭಿಕ ಚಿತ್ರ
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಹಿಳಾ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ (BCCI) ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರಂತೆ ಮೊದಲ ಸೀಸನ್ ಮುಂದಿನ ವರ್ಷ ನಡೆಯಲಿದ್ದು, ಈ ವೇಳೆ ಒಟ್ಟು 5 ತಂಡಗಳು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ. ಫೆಬ್ರವರಿ 10 ರಿಂದ 26 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದ್ದು, ಇದಾದ ಬಳಿಕ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಅದರಂತೆ ಮಾರ್ಚ್​ನಲ್ಲಿ ಪುರುಷರ ಐಪಿಎಲ್​ ಆರಂಭಕ್ಕೂ ಮುನ್ನ ಮಹಿಳಾ ಐಪಿಎಲ್ ನಡೆಸಲು ತಾತ್ಕಾಲಿಕ ಪ್ಲ್ಯಾನ್​ಗಳನ್ನು ರೂಪಿಸಲಾಗುತ್ತಿದೆ.

ಇನ್ನು ಪುರುಷರ ಐಪಿಎಲ್​ನಂತೆ ಮಹಿಳಾ ಟೂರ್ನಿಯಲ್ಲೂ ವಿದೇಶಿ ಆಟಗಾರ್ತಿಯರಿಗೆ ಅವಕಾಶ ಇರಲಿದೆ. ಇಲ್ಲಿ ಪ್ರತಿ ತಂಡಗಳಲ್ಲಿ ನಾಲ್ವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಬಹುದು. ಇದಾಗ್ಯೂ ಐಪಿಎಲ್​ ತಂಡಗಳ ಹೆಸರುಗಳನ್ನಾಗಲಿ ಅಥವಾ ನಗರಗಳನ್ನಾಗಲಿ ನಿರ್ಧರಿಸಿಲ್ಲ.

ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ಫ್ರಾಂಚೈಸಿ ಮಹಿಳಾ ಐಪಿಎಲ್​ ತಂಡಗಳ ಖರೀದಿಗೆ ಆಸಕ್ತಿ ಹೊಂದಿದೆ. ಹೀಗಾಗಿ ಪ್ರಸ್ತುತ ಐಪಿಎಲ್ ತಂಡಗಳ ಹೆಸರಿನಲ್ಲೇ ಐದು ಟೀಮ್​ಗಳು ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ. ಹಾಗೆಯೇ ಮಹಿಳಾ ಐಪಿಎಲ್​ ಅನ್ನು ಎರಡು ಸ್ಟೇಡಿಯಂಗಳಲ್ಲಿ ಮಾತ್ರ ಆಯೋಜಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಅಂದರೆ ಮಹಿಳಾ ಐಪಿಎಲ್​ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಇರಲಿದೆ. ಈ ಪಂದ್ಯಗಳನ್ನು ಭಾರತದ ಎರಡು ನಗರಗಳ ಸ್ಟೇಡಿಯಂಗಳಲ್ಲಿ ಟೂರ್ನಿಯನ್ನು ಆಯೋಜಿಸಲು ಚಿಂತಿಸಲಾಗಿದೆ. ಸದ್ಯ ಮಹಿಳಾ ಐಪಿಎಲ್ ಆರಂಭವಾಗುವುದು ಬಹುತೇಕ ಖಚಿತವಾಗಿದ್ದು, ಹೀಗಾಗಿ ಡಿಸೆಂಬರ್​ನಲ್ಲಿ ಐದು ತಂಡಗಳ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.