T20 World Cup 2022: ಮಾಜಿ RCB ಆಟಗಾರನ ಜೊತೆ ಕಿಂಗ್ ಕೊಹ್ಲಿ ಫುಲ್ ಪಾರ್ಟಿ
T20 World Cup 2022: ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯಲ್ಲಿ ಸ್ಟೋಯಿನಿಸ್ ಕಾಣಿಸಿಕೊಂಡಿರಲಿಲ್ಲ. ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಆಸೀಸ್ ಆಲ್ರೌಂಡರ್ ಇದೀಗ ಟಿ20 ವಿಶ್ವಕಪ್ ಮೂಲಕ ಮತ್ತೊಮ್ಮೆ ಆರ್ಭಟಿಸಲು ಸಜ್ಜಾಗುತ್ತಿದ್ದಾರೆ.
T20 World Cup 2022: ಟೀಮ್ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಹಾಗೆಯೇ ಇತರೆ ತಂಡದ ಆಟಗಾರರೊಂದಿಗೆ ಉತ್ತಮ ಬಾಂಧವ್ಯವನ್ನು ಸಹ ಹೊಂದಿದ್ದಾರೆ. ಇದೀಗ ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾದಲ್ಲಿರುವ ಕಿಂಗ್ ಕೊಹ್ಲಿ ತಮ್ಮ ಹಳೆಯ ಗೆಳೆಯನನ್ನು ಭೇಟಿಯಾಗಿದ್ದಾರೆ. ಹೌದು, ಐಪಿಎಲ್ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಕಿಂಗ್ ಕೊಹ್ಲಿ ಭೇಟಿಯಾಗಿದ್ದಾರೆ. ಈ ವೇಳೆ ತೆಗೆದಿರುವ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಿ20 ವಿಶ್ವಕಪ್ಗಾಗಿ ಸಿದ್ಧತೆಯಲ್ಲಿರುವ ಟೀಮ್ ಇಂಡಿಯಾಗೆ ಬುಧವಾರ ವಿಶ್ರಾಂತಿ ನೀಡಲಾಗಿತ್ತು. ಇದೇ ವೇಳೆ ಕೊಹ್ಲಿ ಆಸ್ಟ್ರೇಲಿಯಾ ಆಟಗಾರ ಮಾರ್ಕಸ್ ಸ್ಟೋಯಿನಿಸ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಗೆಳೆಯರ ಜೊತೆ ಪಬ್ ಅ್ಯಂಡ್ ರೆಸ್ಟೋರೆಂಟ್ವೊಂದರಲ್ಲಿ ವಿರಾಟ್ ಕೊಹ್ಲಿ ಹಾಗೂ ಮಾರ್ಕಸ್ ಸ್ಟೋಯಿನಿಸ್ ತೆರಳಿದ್ದು, ಈ ವೇಳೆ ತೆಗೆದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವಿಶೇಷ ಎಂದರೆ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ 2 ಅಭ್ಯಾಸ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ಇದೀಗ ಅಕ್ಟೋಬರ್ 17 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದೇ ಪಂದ್ಯದಲ್ಲಿ ಮಾರ್ಕಸ್ ಸ್ಟೋಯಿನಿಸ್ ಕೂಡ ಆಡಲಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯಲ್ಲಿ ಸ್ಟೋಯಿನಿಸ್ ಕಾಣಿಸಿಕೊಂಡಿರಲಿಲ್ಲ. ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಆಸೀಸ್ ಆಲ್ರೌಂಡರ್ ಇದೀಗ ಟಿ20 ವಿಶ್ವಕಪ್ ಮೂಲಕ ಮತ್ತೊಮ್ಮೆ ಆರ್ಭಟಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ ಆಸ್ಟ್ರೇಲಿಯಾಗೆ ಬಂದ ಆರ್ಸಿಬಿ ಗೆಳೆಯ ವಿರಾಟ್ ಕೊಹ್ಲಿಯೊಂದಿಗೆ ಜಾಲಿ ಮೂಡ್ನಲ್ಲಿ ಮಾರ್ಕಸ್ ಸ್ಟೋಯಿನಿಸ್ ಕಾಣಿಸಿಕೊಂಡಿದ್ದರು.