IPL 2023 Closing Ceremony: ವಿಭಿನ್ನವಾಗಿ ನಡೆಯಲ್ಲಿದೆ ಈ ಐಪಿಎಲ್​ನ ಸಮಾರೋಪ ಸಮಾರಂಭ

|

Updated on: May 26, 2023 | 6:47 PM

IPL 2023 Closing Ceremony: ಪಂದ್ಯಕ್ಕೂ ಮುನ್ನ ಕಿಂಗ್​ ಮತ್ತು ನ್ಯೂಕ್ಲಿಯಾ ಅಭಿಮಾನಿಗಳನ್ನು ರಂಜಿಸಿದರೆ, ಪಂದ್ಯದ ಮೊದಲ ಇನ್ನಿಂಗ್ಸ್ ನಂತರ, ಜೋನಿತಾ ಗಾಂಧಿ ಮತ್ತು ಡಿವೈನ್ ತಮ್ಮ ಪ್ರದರ್ಶನ ನೀಡಲಿದ್ದಾರೆ.

IPL 2023 Closing Ceremony: ವಿಭಿನ್ನವಾಗಿ ನಡೆಯಲ್ಲಿದೆ ಈ ಐಪಿಎಲ್​ನ ಸಮಾರೋಪ ಸಮಾರಂಭ
ಐಪಿಎಲ್​ನ ಸಮಾರೋಪ ಸಮಾರಂಭ
Follow us on

ಐಪಿಎಲ್ 2023 (IPL 2023) ರ ಎರಡು ಪ್ರಮುಖ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯುತ್ತಿವೆ. ಇಂದು ಮೇ 26 ರಂದು ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Titans and Mumbai Indians) ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದರೆ, ಈ ಕ್ವಾಲಿಫೈಯರ್‌ 2ರಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಚೆನ್ನೈ ತಂಡವನ್ನು ಇದೇ ಸ್ಥಳದಲ್ಲಿ ಎದುರಿಸಲಿದೆ. ಮೇ 28 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) 16 ನೇ ಸೀಸನ್‌ನ ಫೈನಲ್ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ಈ ಮಿಲಿಯನ್ ಡಾಲರ್ ಟೂರ್ನಿಗೆ ಅದ್ಧೂರಿ ತೆರೆ ಎಳೆಯಲು ಐಪಿಎಲ್ ಮಂಡಳಿ ನಿರ್ಧರಿಸಿದ್ದು, ಸಮಾರೋಪ ಸಮಾರಂಭದಲ್ಲಿ ಖ್ಯಾತ ರ‍್ಯಾಪರ್​​ಗಳು ಪ್ರದರ್ಶನ ನೀಡಲಿದ್ದಾರೆ ಎಂದು ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ.

ಐಪಿಎಲ್ 2023 ರ ಉದ್ಘಾಟನಾ ಸಮಾರಂಭವು ಮಾರ್ಚ್ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ನಡೆದಿತ್ತು. ಈ ಉದ್ಘಾಟನಾ ಸಮಾರಂಭದಲ್ಲಿ ಅರಿಜಿತ್ ಸಿಂಗ್, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದನಾ ಪ್ರದರ್ಶನ ನೀಡುವ ಮೂಲಕ ಟೂರ್ನಿಗೆ ಉತ್ತಮ ಆರಂಭ ನೀಡಿದ್ದರು. ಅಲ್ಲದೆ ಈ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು 1 ಲಕ್ಷಕ್ಕೂ ಹೆಚ್ಚು ಜನರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಹಾಗೆಯೇ OTT ವೇದಿಕೆಗಳಲ್ಲಿ 1 ಕೋಟಿಗೂ ಹೆಚ್ಚು ಜನರು ಮೊದಲ ಪಂದ್ಯ ಮತ್ತು ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಿದ್ದು ದಾಖಲೆಯನ್ನು ಸೃಷ್ಟಿಸಿತ್ತು.

IPL 2023: ಐಪಿಎಲ್ ಪ್ರಯಾಣ ಮುಗಿದಿದ್ದರೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆರ್​ಸಿಬಿ ನಾಯಕ

ರ‍್ಯಾಪರ್​​ಗಳಿಂದ ಪ್ರದರ್ಶನ

ಐಪಿಎಲ್‌ನ ಸಮಾರೋಪ ಸಮಾರಂಭದಲ್ಲಿ ರ‍್ಯಾಪರ್​​ಗಳಾದ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ, ಡಿವೈನ್ ಮತ್ತು ಜೋನಿತಾ ಗಾಂಧಿ ಮಿಡ್ ಟೈಮ್ ಶೋನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಮಂಡಳಿ ಮಾಹಿತಿ ನೀಡಿದೆ. ಪಂದ್ಯಕ್ಕೂ ಮುನ್ನ ಕಿಂಗ್​ ಮತ್ತು ನ್ಯೂಕ್ಲಿಯಾ ಅಭಿಮಾನಿಗಳನ್ನು ರಂಜಿಸಿದರೆ, ಪಂದ್ಯದ ಮೊದಲ ಇನ್ನಿಂಗ್ಸ್ ನಂತರ, ಜೋನಿತಾ ಗಾಂಧಿ ಮತ್ತು ಡಿವೈನ್ ತಮ್ಮ ಪ್ರದರ್ಶನ ನೀಡಲಿದ್ದಾರೆ. ಐಪಿಎಲ್ 2023 ರ ಈ ಎರಡು ಪ್ರಮುಖ ಪಂದ್ಯಗಳಿಗಾಗಿ ನಮೋ ಸ್ಟೇಡಿಯಂನಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಕ್ವಾಲಿಫೈಯರ್ 2 ರಲ್ಲಿ ಕಿಂಜಲ್ ಡೇವ್ ಪ್ರದರ್ಶನ ನೀಡಲಿದ್ದಾರೆ.

ಟಿಕೆಟ್​ಗಾಗಿ ನೂಕು ನುಗ್ಗಲು

ಐಪಿಎಲ್ 2023 ರ ಕ್ವಾಲಿಫೈಯರ್ 2 ಮತ್ತು ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ ಸ್ಥಗಿತಗೊಂಡಿದೆ. ಹೀಗಾಗಿ ನಮೋ ಕ್ರೀಡಾಂಗಣದ ಹೊರಗೆ ಟಿಕೆಟ್‌ಗಾಗಿ ಜನಸಾಗರವೇ ಕ್ಯೂ ನಿಂತಿದೆ. ಇದೆಲ್ಲದರ ನಡುವೆ, ಕ್ರೀಡಾಂಗಣದ ಹೊರಗೆ ಟಿಕೆಟ್​ಗಾಗಿ ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಗಿ ಹಲವರು ಇಂಜುರಿಗೊಂಡಿರುವ ಕೆಲವು ವೀಡಿಯೊಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Fri, 26 May 23