ಈ ಐಪಿಎಲ್‌ನ (IPL 2023) ಮೊದಲ ಫೈನಲಿಸ್ಟ್ ಯಾರು ಎಂಬುದು ನಾಳೆ ಅಂದರೆ ಮಾ.23 ರಂದು ಗೊತ್ತಾಗಲಿದೆ. ಮನರಂಜನೆಯಿಂದ ತುಂಬಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಗುಂಪು ಹಂತವು ಮುಕ್ತಾಯಗೊಂಡಿದೆ. ಇನ್ನೂ 4 ಪಂದ್ಯಗಳು ಮಾತ್ರ ಉಳಿದಿದ್ದು 16ನೇ ಆವೃತ್ತಿಯ ಚಾಂಪಿಯನ್ ಯಾರು ಎಂಬುದು ಸ್ಪಷ್ಟವಾಗಲಿದೆ. ಈ ಬಾರಿಯ ಆರಂಭಿಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಮಹೇಂದ್ರ ಸಿಂಗ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Gujarat Titans vs Chennai Super Kings) ಅಹಮದಾಬಾದ್‌ನಲ್ಲಿ ಮುಖಾಮುಖಿಯಾಗಿದ್ದವು.. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನ ಮೊದಲ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್ ಜಿಟಿ ಮತ್ತು ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಸಿಎಸ್‌ಕೆ ಮುಖಾಮುಖಿಯಾಗುತ್ತಿವೆ.
ಕಳೆದ ಆವೃತ್ತಿಯಲ್ಲಿ ಚೆನ್ನೈ ಉತ್ತಮ ಪ್ರದರ್ಶನ ನೀಡಲಿಲ್ಲ. ಯೆಲ್ಲೋಬ್ರಿಗೇಡ್ ಲೀಗ್ ಅಂಕಪಟ್ಟಿಯಲ್ಲಿ 9 ನೇ ಸ್ಥಾನವನ್ನು ಗಳಿಸಿತ್ತು. ಮತ್ತೊಂದೆಡೆ, ಐಪಿಎಲ್ಹೆ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಗುಜರಾತ್ ಚಾಂಪಿಯನ್ ಆಯಿತು. ಮಹಿ ಬಳಗ ಈ ಬಾರಿ ವಿಭಿನ್ನ ಮೂಡ್ನಲ್ಲಿ ಸಾಗುತ್ತಿದೆ. ಗುಜರಾತ್ ತನ್ನ ಚಾಂಪಿಯನ್ ಸ್ಥಾನಮಾನವನ್ನು ಉಳಿಸಿಕೊಂಡಿದ್ದು, 20 ಅಂಕಗಳೊಂದಿಗೆ ಗುಂಪು ಹಂತವನ್ನು ಮೊದಲ ಸ್ಥಾನದಲ್ಲಿ ಪೂರ್ಣಗೊಳಿಸಿದೆ. ಇತ್ತ ಚೆನ್ನೈ 17 ಅಂಕಗಳೊಂದಿಗೆ ಪ್ಲೇ ಆಫ್ ತಲುಪಿದೆ.
IPL 2023: ಮೊದಲ ಐಪಿಎಲ್ ಪಂದ್ಯದಲ್ಲೇ 15 ವರ್ಷಗಳ ಹಳೆಯ ದಾಖಲೆ ಮುರಿದ ವಿವ್ರಾಂತ್..!
ಇನ್ನು ಉಭಯ ತಂಡಗಳ ಮುಖಾಮುಖಿ ನೋಡಿದರೆ ಐಪಿಎಲ್ ವೇದಿಕೆಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಕಳೆದ ಆವೃತ್ತಿಯ 2 ಪಂದ್ಯಗಳಲ್ಲಿ ಚೆನ್ನೈ, ಗುಜರಾತ್ ವಿರುದ್ಧ ಸೋತಿತ್ತು. ಈ ಬಾರಿಯೂ ಚಿತ್ರಣ ಬದಲಾಗಿಲ್ಲ. ಈ ಸೀಸನ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ತಂಡ ಚೆನ್ನೈ ತಂಡವನ್ನು ಸೋಲಿಸಿತು. ಆ ಸೋಲಿಗೆ ಈ ಬಾರಿ ಚೆನ್ನೈ ಸೇಡು ತೀರಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯ ಯಾವಾಗ ನಡೆಯಲಿದೆ?
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಮೇ 23) ನಡುವಿನ ಕ್ವಾಲಿಫೈಯರ್ 1 ಪಂದ್ಯ ನಾಳೆ ಮಂಗಳವಾರ ನಡೆಯಲಿದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯ ಎಲ್ಲಿ ನಡೆಯಲಿದೆ?
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯವು ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ಪಂದ್ಯಕ್ಕೂ ಮುನ್ನ 7 ಗಂಟೆಗೆ ಟಾಸ್ ನಡೆಯಲಿದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೋಡಬಹುದು. ಇದಲ್ಲದೆ, ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ