Updated on:May 22, 2023 | 10:54 PM
ಈ ಬಾರಿಯ ಆರ್ಸಿಬಿ 25 ಆಟಗಾರರನ್ನು ಬಳಗವನ್ನು ಹೊಂದಿದ್ದು, ಇವರಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದೇ ಈಗ ಕುತೂಹಲ. ಏಕೆಂದರೆ ಐಪಿಎಲ್ ಸೀಸನ್ 16 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ಪಂದ್ಯಗಳಲ್ಲಿ ಒಟ್ಟು 21 ಆಟಗಾರರನ್ನು ಕಣಕ್ಕಿಳಿಸಿತ್ತು. ಆದರೆ 6 ಆಟಗಾರರು ಮಾತ್ರ ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದರು. ಅಂದರೆ ಈ ಆರು ಆಟಗಾರರು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಹಾಗಿದ್ರೆ ಕಳೆದ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಒಂದೇ ಒಂದು ಪಂದ್ಯವಾಡದ 6 ಆಟಗಾರರು ಯಾರೆಲ್ಲಾ ನೋಡೋಣ...
ಆದರೆ ಮತ್ತೊಂದೆಡೆ 6 ಆಟಗಾರರು ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದಾರೆ. ಅಂದರೆ ಈ ಆರು ಆಟಗಾರರು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಗೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದ (ಮಾ.22) ಶುರುವಾಗಲಿರುವ ಐಪಿಎಲ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದರೊಂದಿಗೆ 17ನೇ ಆವೃತ್ತಿಯ ಐಪಿಎಲ್ಗೆ ಚಾಲನೆ ದೊರೆಯಲಿದೆ.
1- ಸಿದ್ದಾರ್ಥ್ ಕೌಲ್ (ಬೌಲರ್): ಐಪಿಎಲ್ 2022 ರಲ್ಲಿ ಆರ್ಸಿಬಿ ಪರ 1 ಪಂದ್ಯವಾಡಿದ್ದ ಸಿದ್ದಾರ್ಥ್ ಕೌಲ್ಗೆ ಕಳೆದ ಬಾರಿ ಒಂದೇ ಒಂದು ಚಾನ್ಸ್ ನೀಡಿರಲಿಲ್ಲ. ಅಲ್ಲದೆ ಈ ಬಾರಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
2- ಸೋನು ಯಾದವ್ (ಆಲ್ರೌಂಡರ್): ಐಪಿಎಲ್ 2023ರ ಹರಾಜಿನಲ್ಲಿ 20 ಲಕ್ಷ ರೂ. ನೀಡಿ ಖರೀದಿಸಿದ್ದ ಸೋನು ಯಾದವ್ ಅವರನ್ನು ಆರ್ಸಿಬಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಇದೀಗ ಅವರು ಸಹ ತಂಡದಿಂದ ಹೊರಬಿದ್ದಿದ್ದಾರೆ.
3- ಅವಿನಾಶ್ ಸಿಂಗ್ (ಬೌಲರ್): 60 ಲಕ್ಷ ರೂ.ಗೆ ಆರ್ಸಿಬಿ ಖರೀದಿಸಿದ ಅವಿನಾಶ್ ಸಿಂಗ್ಗೂ ಕಳೆದ ಸೀಸನ್ನಲ್ಲಿ ಕೂಡ ಚಾನ್ಸ್ ಸಿಕ್ಕಿರಲಿಲ್ಲ. ಅಲ್ಲದೆ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ಅವಿನಾಶ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿದೆ.
4- ಮನೋಜ್ ಭಾಂಡಗೆ (ಆಲ್ರೌಂಡರ್): ಆರ್ಸಿಬಿ ತಂಡದಲ್ಲಿರುವ ಕನ್ನಡಿಗ ಮನೋಜ್ ಭಾಂಡಗೆಗೂ ಕಳೆದ ಸೀಸನ್ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಿರಲಿಲ್ಲ. ಈ ಬಾರಿ ಕೂಡ ಮನೋಜ್ ತಂಡದಲ್ಲಿದ್ದು, ಚೊಚ್ಚಲ ಚಾನ್ಸ್ ಅನ್ನು ಎದುರು ನೋಡುತ್ತಿದ್ದಾರೆ.
5- ರಜನ್ ಕುಮಾರ್ (ಬೌಲರ್): ಐಪಿಎಲ್ 2023 ರಲ್ಲಿ ಆರ್ಸಿಬಿ 70 ಲಕ್ಷ ರೂ.ಗೆ ಖರೀದಿಸಿದ್ದ ರಜನ್ ಕುಮಾರ್ ಕಳೆದ ಸೀಸನ್ನಲ್ಲಿ ಒಂದೇ ಒಂದು ಪಂದ್ಯವಾಡಿರಲಿಲ್ಲ. ಇದಾಗ್ಯೂ ಅವರನ್ನು ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಇದೀಗ ಅವರು ಸಹ ಪಾದಾರ್ಪಣೆಯ ಅವಕಾಶವನ್ನು ನಿರೀಕ್ಷಿಸುತ್ತಿದ್ದಾರೆ.
6- ಫಿನ್ ಅಲೆನ್ (ಬ್ಯಾಟ್ಸ್ಮನ್): 2021 ರಿಂದ ತಂಡದಲ್ಲಿದ್ದ ಯುವ ಸ್ಪೋಟಕ ಬ್ಯಾಟ್ಸ್ಮನ್ 3ನೇ ವರ್ಷಗಳ ಆರ್ಸಿಬಿ ಪರ ಬೆಂಚ್ ಕಾದಿದ್ದಾರೆ. ಅಂದರೆ ಕಳೆದ 3 ವರ್ಷಗಳಿಂದ ತಂಡದಲ್ಲಿದ್ದರೂ ಅಲೆನ್ಗೆ ಒಂದೇ ಒಂದು ಚಾನ್ಸ್ ನೀಡಿರಲಿಲ್ಲ. ಅಲ್ಲದೆ ಈ ಬಾರಿಯ ಐಪಿಎಲ್ಗೂ ಮುನ್ನ ಅವರನ್ನು ಟೀಮ್ಯಿಂದ ಕೈ ಬಿಡಲಾಗಿದೆ.
Published On - 10:52 pm, Mon, 22 May 23