- Kannada News Photo gallery Cricket photos Chris Gayle Said I am coming back out of retirement and I will see you next year Virat Kohli Kannada News
Virat Kohli: ಮುಂದಿನ ವರ್ಷ ಆರ್ಸಿಬಿ ಪರ ಕ್ರಿಸ್ ಗೇಲ್ ಕಣಕ್ಕೆ: ನಿವೃತ್ತಿ ಹಿಂಪಡೆದು ಐಪಿಎಲ್ ಆಡುತ್ತೇನೆ ಎಂದ ಯೂನಿರ್ವಸಲ್ ಬಾಸ್
Chris Gayle: ವಿರಾಟ್ ಕೊಹ್ಲಿ ಒಬ್ಬ ಅಸಾಧಾರಣ ಆಟಗಾರ. ಅತ್ಯುತ್ತಮ ಆಟ ಆಡುತ್ತಾರೆ. ಅವರು ತಂಡವನ್ನು ಗೆಲ್ಲಿಸಲು ಸಾಕಷ್ಟು ಶ್ರಮವಹಿಸುತ್ತಾರೆ. ಡುಪ್ಲೆಸಿಸ್ ಮತ್ತು ಕೊಹ್ಲಿ ಆಟ ಅದ್ಭುತವಾಗಿರುತ್ತದೆ ಎಂಬುದು ಕ್ರಿಸ್ ಗೇಲ್ ಮಾತು.
Updated on: May 23, 2023 | 8:52 AM

ಐಪಿಎಲ್ 2023 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಬಿದ್ದಾಗಿದೆ. ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಾಣುವ ಮೂಲಕ ಪ್ಲೇ ಆಫ್ಗೆ ಕ್ವಾಲಿಫೈ ಆಗಲು ವಿಫಲವಾದ ಆರ್ಸಿಬಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಆದರೆ, ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿ ಎಲ್ಲರ ಮನ ಗೆದ್ದರು.

16ನೇ ಆವೃತ್ತಿಯ ಐಪಿಎಲ್ನಲ್ಲಿ ಎರಡನೇ ಶತಕ ಸಿಡಿಸಿದ ಕೊಹ್ಲಿ ನೂತನ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಪಟ್ಟವನ್ನು ವಿರಾಟ್ ಈಗ ಅಲಂಕರಿಸಿದ್ದಾರೆ.

ಐಪಿಎಲ್ನಲ್ಲಿ ಕೊಹ್ಲಿಯ ಶತಕದ ಸಂಖ್ಯೆ 7ಕ್ಕೇರಿದೆ. ಹೈದರಾಬಾದ್ ವಿರುದ್ಧ ಶತಕ ಬಾರಿಸಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ್ದ ಕ್ರಿಸ್ ಗೇಲ್ ಜತೆ ಜಂಟಿ ದಾಖಲೆ ಹೊಂದಿದ್ದರು. ಗೇಲ್ ಅವರು 6 ಐಪಿಎಲ್ ಶತಕ ಬಾರಿಸಿದ್ದಾರೆ. ಇದೀಗ ಕೊಹ್ಲಿ ಗೇಲ್ ದಾಖಲೆ ಮುರಿದಿದ್ದಾರೆ.

ಈ ಬಗ್ಗೆ ಮಾತನಾಡಿದ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಕಡೆಯಿಂದ ಅದ್ಭುತ ಇನ್ನಿಂಗ್ಸ್ ಮೂಡಿಬಂದಿದೆ. ಅವರು ಯೂನಿವರ್ಸಲ್ ಬಾಸ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಾನು ನಿವೃತ್ತಿ ಹಿಂಪಡೆದು ಐಪಿಎಲ್ಗೆ ಕಮ್ಬ್ಯಾಕ್ ಮಾಡುತ್ತೇನೆ. ಮುಂದಿನ ವರ್ಷ ನಿನ್ನನ್ನು ನೋಡುತ್ತೇನೆ ವಿರಾಟ್ ಎಂದು ಗೇಲ್ ಹೇಳಿದ್ದಾರೆ.

ಕೊಹ್ಲಿ ಒಬ್ಬ ಅಸಾಧಾರಣ ಆಟಗಾರ. ಅತ್ಯುತ್ತಮ ಆಟ ಆಡುತ್ತಾರೆ. ಅವರು ತಂಡವನ್ನು ಗೆಲ್ಲಿಸಲು ಸಾಕಷ್ಟು ಶ್ರಮವಹಿಸುತ್ತಾರೆ. ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆಟ ಅದ್ಭುತವಾಗಿರುತ್ತದೆ ಎಂಬುದು ಕ್ರಿಸ್ ಗೇಲ್ ಮಾತು.

ಗೇಲ್ ಶತಕದ ದಾಖಲೆಯನ್ನು ಅಳಿಸಿ ಹಾಕುವ ಜೊತೆಗೆ ವಿರಾಟ್ ಕೊಹ್ಲಿ ಇನ್ನೂ ಅನೇಕ ದಾಖಲೆ ನಿರ್ಮಿಸಿದ್ದಾರೆ. ಆರ್ಸಿಬಿ ಪರ ಐಪಿಎಲ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಪಾಲಾಗಿದೆ. ಅಂತೆಯೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್ 2023 ರಲ್ಲಿ 14 ಪಂದ್ಯಗಳನ್ನು ಆಡಿದ ವಿರಾಟ್ ಕೊಹ್ಲಿ, 639 ರನ್ ಗಳಿಸಿದರು. 53.25 ಸರಾಸರಿ ಜೊತೆಗೆ 139.82 ಸ್ಟ್ರೈಕ್ರೇಟ್ ಕಾಪಾಡಿಕೊಂಡಿದ್ದಾರೆ. ಫಾಪ್, ಶುಭ್ಮನ್ ಗಿಲ್ ಬಳಿಕ ಈ ಬಾರಿಯ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
