- Kannada News Photo gallery Cricket photos Kannada News | Time for Virat Kohli to move to Delhi Capitals Says Kevin Pietersen
Virat Kohli: ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೋಗಲು ಇದು ಸಕಾಲ: ಮಾಜಿ ಆರ್ಸಿಬಿ ಆಟಗಾರ
IPL 2023 Kannada: ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರರಾದ ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ಎಲ್ಲರೂ ತಂಡಗಳನ್ನು ಬದಲಿಸಿದ್ದಾರೆ. ಹೀಗಾಗಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಂತೆ ಈ ಹಿಂದೊಮ್ಮೆ ಮನವಿ ಮಾಡಿದ್ದರು.
Updated on: May 23, 2023 | 4:09 PM

IPL 2023: ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. 14 ಇನಿಂಗ್ಸ್ಗಳಲ್ಲಿ 2 ಭರ್ಜರಿ ಶತಕದೊಂದಿಗೆ ಕಿಂಗ್ ಕೊಹ್ಲಿ 639 ರನ್ ಬಾರಿಸಿ ಅಬ್ಬರಿಸಿದ್ದರು. ಇದಾಗ್ಯೂ ಆರ್ಸಿಬಿ ಪ್ಲೇಆಫ್ ಹಂತಕ್ಕೇರುವಲ್ಲಿ ವಿಫಲವಾಗಿದೆ. ಹೀಗಾಗಿಯೇ ವಿರಾಟ್ ಕೊಹ್ಲಿ ತವರು ತಂಡದ ಪರ ಮುಖ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಆರ್ಸಿಬಿ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸೋಲಿನ ಬೆನ್ನಲ್ಲೇ ಟ್ವೀಟ್ ಮಾಡಿರುವ ಕೆವಿನ್ ಪೀಟರ್ಸನ್, ರಾಜಧಾನಿಯತ್ತ ಮುಖ ಮಾಡಲು ಇದು ವಿರಾಟ್ ಕೊಹ್ಲಿಗೆ ಇದು ಸಕಾಲ ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಕಿಂಗ್ ಕೊಹ್ಲಿ ತಮ್ಮ ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕೆಂಬ ಅಭಿಪ್ರಾಯವನ್ನು ಕೆವಿನ್ ಪೀಟರ್ಸನ್ ಮುಂದಿಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸತತ 16 ವರ್ಷಗಳಿಂದ ಆರ್ಸಿಬಿ ಪರ ಆಡಿದರೂ ಕಿಂಗ್ ಕೊಹ್ಲಿಗೆ ಟ್ರೋಫಿಗೆ ಮುತ್ತಿಕ್ಕಲು ಸಾಧ್ಯವಾಗದಿರುವುದು.

ಹೀಗಾಗಿ ಮುಂಬರುವ ಸೀಸನ್ಗಳಲ್ಲಿ ತಮ್ಮ ತವರಿನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಂತೆ ಕೆವಿನ್ ಪೀಟರ್ಸನ್ ಸೂಚಿಸಿದ್ದಾರೆ. ಅಂದಹಾಗೆ ತಂಡವನ್ನು ಬದಲಿಸುವಂತೆ ಪೀಟರ್ಸನ್ ಈ ಹಿಂದೆ ಕೂಡ ಕಿಂಗ್ ಕೊಹ್ಲಿಗೆ ಸಲಹೆ ನೀಡಿದ್ದರು.

ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರರಾದ ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ಎಲ್ಲರೂ ತಂಡಗಳನ್ನು ಬದಲಿಸಿದ್ದಾರೆ. ಹೀಗಾಗಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಂತೆ ಈ ಹಿಂದೊಮ್ಮೆ ಮನವಿ ಮಾಡಿದ್ದರು. ಇದೀಗ ಮತ್ತೊಮ್ಮೆ ಕಿಂಗ್ ಕೊಹ್ಲಿಗೆ ಡೆಲ್ಲಿ ಕ್ಯಾಪಿಟಲ್ಸ್ಗೆ ಹೋಗಲು ಇದು ಸಕಾಲ ಎಂದು ನೆನಪಿಸಿದ್ದಾರೆ.

ಅಂದಹಾಗೆ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ 2009 ಹಾಗೂ 2010 ರಲ್ಲಿ ಆರ್ಸಿಬಿ ಪರ ಆಡಿದ್ದರು. ಈ ವೇಳೆ 6 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಕೂಡ ಮುನ್ನಡೆಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟು 13 ಪಂದ್ಯಗಳನ್ನಾಡಿದ್ದ ಪೀಟರ್ಸನ್ 329 ರನ್ ಕಲೆಹಾಕಿದ್ದರು.
