ಐಪಿಎಲ್ನ (IPL) ಅತ್ಯಂತ ನತದೃಷ್ಟ ಫ್ರಾಂಚೈಸಿ ಎಂದರೆ ಅದು ಪಂಜಾಬ್ ಕಿಂಗ್ಸ್ (Punjab Kings). ಅದಕ್ಕೆ ಪ್ರಮುಖ ಕಾರಣವೆಂದರೆ, ಪ್ರತಿ ಸೀಸನ್ ಆರಂಭಕ್ಕೂ ಮೊದಲು ಬಲಿಷ್ಟ ಆಟಗಾರರನ್ನು ಖರೀದಿಸಿ, ತಂಡ ಕಟ್ಟುವ ಈ ಫ್ರಾಂಚೈಸಿಗೆ ಒಮ್ಮೆಯೂ ಐಪಿಎಲ್ ಚಾಂಪಿಯನ್ ಆಗುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ಮುಂಬರುವ ಸೀಸನ್ಗೆ ಎಲ್ಲಾ ರೀತಿಯ ಸಿದ್ದತೆಗಳಲ್ಲಿ ತೊಡಗಿರುವ ಕಿಂಗ್ಸ್ ಫ್ರಾಂಚೈಸಿ 2023 ರ ಸೀಸನ್ ಆರಂಭಕ್ಕೂ ಮೊದಲು ತನ್ನ ತಂಡಕ್ಕೆ ಹೊಸ ಕೋಚ್ ನೇಮಿಸಿದೆ. ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ (Trevor Bayliss) ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ಫ್ರಾಂಚೈಸಿ ನೇಮಿಸಿದೆ. ಈ ಹಿಂದೆ ತಂಡದ ಕೋಚ್ ಆಗಿದ್ದ ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ (Anil Kumble) ಸ್ಥಾನಕ್ಕೆ ಟ್ರೆವರ್ ಬೇಲಿಸ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪಂಜಾಬ್ ಕಿಂಗ್ಸ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಪಂಜಾಬ್ ತಂಡ 2008 ರಿಂದ ಐಪಿಎಲ್ ಆಡುತ್ತಿದೆ ಆದರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2014ರಲ್ಲಿ ಫೈನಲ್ ತಲುಪಿದ್ದ ಕಿಂಗ್ಸ್ಗೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. ಬೇಲಿಸ್ ಆಗಮನದೊಂದಿಗೆ, ಫ್ರ್ಯಾಂಚೈಸ್ ಈ ವರ್ಷ ತನ್ನ ಬರವನ್ನು ಕೊನೆಗೊಳಿಸಲು ಆಶಿಸುತ್ತಿದೆ.
? New Coach Alert ?
IPL winner ✅
ODI World Cup winner ✅
CLT20 winner ✅Here’s wishing a very warm welcome to our new Head Coach, Trevor Bayliss. ?
Here’s looking forward to a successful partnership! ?#PunjabKings #SaddaPunjab #TrevorBayliss #HeadCoach pic.twitter.com/UKdKi2Lefi
— Punjab Kings (@PunjabKingsIPL) September 16, 2022
ಐಪಿಎಲ್‌ನಲ್ಲಿ ಶ್ರೇಷ್ಠ ದಾಖಲೆ
ಬೇಲಿಸ್ ತಮ್ಮ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವನ್ನು 2019 ರಲ್ಲಿ ಮೊದಲ ODI ವಿಶ್ವಕಪ್‌ಗೆ ಮುನ್ನಡೆಸಿದರು. ಇದಕ್ಕೂ ಮೊದಲು ಅವರು 2007 ರಲ್ಲಿ ಶ್ರೀಲಂಕಾ ತಂಡದ ಮುಖ್ಯ ತರಬೇತುದಾರರಾಗಿದ್ದರು. ಅದೇ ವರ್ಷದಲ್ಲೇ ಲಂಕಾ ತಂಡ ವಿಶ್ವಕಪ್‌ನ ಫೈನಲ್‌ಗೆ ಎಂಟ್ರಿಕೊಟ್ಟಿತ್ತು. ಆದರೆ ಆಸ್ಟ್ರೇಲಿಯಾದ ಎದುರು ಲಂಕಾ ಸೋಲನನುಭವಿಸಬೇಕಾಯಿತು. ಬೇಲಿಸ್ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕೋಚ್ ಆಗುತ್ತಿಲ್ಲ. ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಜವಬ್ದಾರಿ ವಹಿಸಿಕೊಂಡಿದ್ದರು. ಆ ಅವಧಿಯಲ್ಲೇ ಕೋಲ್ಕತ್ತಾ ತಂಡ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಕೋಲ್ಕತ್ತಾ ತಂಡ 2012 ಮತ್ತು 2014ರಲ್ಲಿ ಐಪಿಎಲ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಸಂದರ್ಭದಲ್ಲಿ ಬೇಲಿಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಬಳಿಕ ಇಂಗ್ಲೆಂಡ್ ತಂಡದ ಸಾರಥ್ಯವಹಿಸಿದ ಬೇಲಿಸ್ ಮೊದಲ ಬಾರಿಗೆ ಇಂಗ್ಲೆಂಡ್ ತಮಡ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮತ್ತೆ ಐಪಿಎಲ್‌ಗೆ ಮರಳಿದ ಬೇಲಿಸ್, ಸನ್‌ರೈಸರ್ಸ್ ಹೈದರಾಬಾದ್‌ನ ತರಬೇತುದಾರರಾದರು. ಅವರ ಅಡಿಯಲ್ಲಿ, ಹೈದರಾಬಾದ್ 2020 ರಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತು. ಆದರೆ ನಂತರದ ಸೀಸನ್ಗಳಲ್ಲಿ ಹೈದರಾಬಾದ್ ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಆದ್ದರಿಂದ ಫ್ರಾಂಚೈಸ್ ಬೇಲಿಸ್ ಅವರನ್ನು ತಂಡದಿಮದ ಕೈಬಿಟ್ಟಿತ್ತು.
ಕುಂಬ್ಳೆ ಯಶಸ್ವಿಯಾಗಲಿಲ್ಲ
ಫ್ರಾಂಚೈಸಿ ಅನಿಲ್ ಕುಂಬ್ಳೆ ಅವರನ್ನು ನಾಲ್ಕು ವರ್ಷಗಳ ಕಾಲ ಕೋಚ್ ಆಗಿ ಉಳಿಸಿಕೊಂಡಿತ್ತು. 2019 ರಲ್ಲಿ ತಂಡಗೆ ಎಂಟ್ರಿಕೊಟ್ಟ ಕುಂಬ್ಳೆ, ಕಳೆದ ಸೀಸನ್ವರೆಗೂ ತಂಡದಲ್ಲಿಯೇ ಇದ್ದರು. ಆದರೆ ಅವರ ನೇತೃತ್ವದಲ್ಲಿ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಒಂದು ಬಾರಿಯೂ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಮೆಗಾ ಹರಾಜಿನಲ್ಲಿ ತಂಡವು ಅನೇಕ ಶ್ರೇಷ್ಠ ಆಟಗಾರರನ್ನು ಖರೀದಿಸಿತ್ತು, ಆದರೆ ಆ ಸೀಸನ್ನಲ್ಲೂ ತಂಡಕ್ಕೆ ಪ್ಲೇ ಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
Published On - 1:38 pm, Fri, 16 September 22