ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 17ನೇ ಆವೃತ್ತಿಯ ಐಪಿಎಲ್ನ (IPL 2024) ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ (Chennai Super Kings vs Royal Challengers Bengaluru) ಹಾಲಿ ಚಾಂಪಿಯನ್ನರಿಗೆ 174 ರನ್ಗಳ ಗೆಲುವಿನ ಗುರಿ ನೀಡಿದೆ. ಉತ್ತಮ ಆರಂಭದ ಹೊರತಾಗಿಯೂ ಆರ್ಸಿಬಿಯ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಹೀಗಾಗಿ ತಂಡ 78 ರನ್ ಆಗುವಷ್ಟರಲ್ಲೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಸಿಎಸ್ಕೆ ಪಂದ್ಯದಲ್ಲಿ ಪೂರ್ಣ ಹಿಡಿತ ಸಾಧಿಸಿತ್ತು. ಆದರೆ ಆ ಬಳಿಕ ಜೊತೆಯಾದ ದಿನೇಶ್ ಕಾರ್ತಿಕ್ (Dinesh Karthik) ಹಾಗೂ ಅನುಜ್ ರಾವತ್ (Anuj Rawat) 95 ರನ್ಗಳ ಅದ್ಭುತ ಜೊತೆಯಾಟ ನೀಡಿದರು. ಅಲ್ಲದೆ ಕೊನೆಯವರೆಗೂ ನಿಂತು ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಈ ವೇಳೆ ಈ ಇಬ್ಬರು ಸೇರಿ ಒಂದೇ ಓವರ್ನಲ್ಲಿ 25 ರನ್ ಕಲೆಹಾಕಿದ ಘಟನೆಯೂ ನಡೆಯಿತು.
ವಾಸ್ತವವಾಗಿ ನಿಯಮಿತ ಅಂತರದಲ್ಲಿ ವಿಕೆಟ್ಗಳು ಪತನವಾದುದ್ದರಿಂದ ಆರ್ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಆರು ಮತ್ತು ಏಳನೇ ವಿಕೆಟ್ಗೆ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ನಿಧಾನವಾಗಿ ತಂಡದ ಇನ್ನಿಂಗ್ಸ್ ಕಟ್ಟಿದರು. 13ನೇ ಓವರ್ ಆರಂಭದಿಂದ ಜೊತೆಯಾದ ಈ ಇಬ್ಬರು 20ನೇ ಓವರ್ವರೆಗೆ ಬ್ಯಾಟ್ ಬೀಸಿದರು. ಅಂತಿಮವಾಗಿ ಈ ಇಬ್ಬರ ನಡುವೆ ಆರನೇ ವಿಕೆಟ್ಗೆ ಕೇವಲ 50 ಎಸೆತಗಳಲ್ಲಿ 95 ರನ್ಗಳ ಜೊತೆಯಾಟ ಕೂಡ ಬಂತು.
IPL 2024: ಆರ್ಸಿಬಿಗೆ ಆಪತ್ಬಾಂಧವರಾದ ಡಿಕೆ- ಅನುಜ್; 174 ರನ್ ಟಾರ್ಗೆಟ್
ಈ ಹಂತದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಇನ್ನಿಂಗ್ಸ್ ವೇಗ ನೀಡಲು ಮುಂದಾದ ಈ ಇಬ್ಬರು ತುಷಾರ ದೇಶಪಾಂಡೆ ಬೌಲ್ ಮಾಡಿದ 18ನೇ ಓವರ್ ಅನ್ನು ಗುರಿಯಾಗಿಸಿಕೊಂಡರು. ಓವರ್ನ ಮೊದಲ ಎಸೆತ ವೈಡ್ ಆಯಿತು. ನಂತರದ ಎಸೆತವನ್ನು ದಿನೇಶ್ ಕಾರ್ತಿಕ್ ಸಿಕ್ಸರ್ಗಟ್ಟಿದರು. ಓವರ್ನ ಎರಡನೇ ಎಸೆತ ಕೂಡ ವೈಡ್ ಆಯಿತು. ಮುಂದಿನ ಎಸೆತದಲ್ಲಿ ಕಾರ್ತಿಕ್ ಸಿಂಗಲ್ ತೆಗೆದುಕೊಂಡರು. ನಂತರ ಸ್ಟ್ರೈಕ್ಗೆ ಬಂದ ಅನುಜ್ ಮೂರು ಮತ್ತು ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಒಟ್ಟು 25 ರನ್ಗಳು ಬಂದವು.
.@RCBTweets Dial 6⃣! 🔥
Anuj Rawat & Dinesh Karthik upping the ante! ⚡️ ⚡️
Head to @JioCinema and @StarSportsIndia to watch the match LIVE
Follow the match ▶️ https://t.co/4j6FaLF15Y#TATAIPL | #CSKvRCB | @AnujRawat_1755 | @DineshKarthik pic.twitter.com/c5o3rXdEZf
— IndianPremierLeague (@IPL) March 22, 2024
ಈ ಇಬ್ಬರು 95 ರನ್ಗಳ ಜೊತೆಯಾಟ ಆಡಿದಲ್ಲದೆ ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದರು. 20 ನೇ ಓವರ್ನ ಕೊನೆಯ ಎಸೆತದಲ್ಲಿ ರನೌಟ್ಗೆ ಬಲಿಯಾದ ಅನುಜ್ ರಾವತ್ ತಮ್ಮ ಇನ್ನಿಂಗ್ಸ್ನಲ್ಲಿ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 48 ರನ್ ಬಾರಿಸಿದರು. ಇತ್ತ ಅನುಜ್ಗೆ ಉತ್ತಮ ಸಾಥ್ ನೀಡಿದ ಕಾರ್ತಿಕ್ ಕೂಡ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 38 ರನ್ ಕಲೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 pm, Fri, 22 March 24