ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿಗೆ (IPL 2024 Auction) ಕ್ಷಣಗಣನೆ ಆರಂಭವಾಗಿದೆ. ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದೆ. ಭಾರತ ಮತ್ತು ವಿದೇಶಿ ಆಟಗಾರರು ಸೇರಿ ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ ಭಾರತದಿಂದ 214 ಹಾಗೂ ವಿದೇಶದಿಂದ 119 ಆಟಗಾರರು ಭಾಗವಹಿಸಲಿದ್ದಾರೆ. ಐಪಿಎಲ್ 2024 ರ ಸೀಸನ್ ‘ಮಿನಿ ಹರಾಜು’ ಆಗಿದೆ. ಏಕೆಂದರೆ 2025 ರ ಸೀಸನ್‌ಗಾಗಿ ಮೆಗಾ ಹರಾಜು ಆಯೋಜಿಸಲಾಗುತ್ತದೆ. ಈ ಬಾರಿಯದ್ದು ಮಿನಿ ಹರಾಜಾಗಿದ್ದರೂ ಸಾಕಷ್ಟು ಕುತೂಹಲ ಕೆರಳಿಸಿದೆ. 20 ಕೋಟಿಯ ವರೆಗೆ ಬಿಡ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಐಪಿಎಲ್ ಆಕ್ಷನ್ 2024 ಎಷ್ಟು ಗಂಟೆಗೆ ಶುರುವಾಗಲಿದೆ?, ನೇರಪ್ರಸಾರ ಯಾವುದರಲ್ಲಿ ವೀಕ್ಷಿಸಬಹುದು? ಎಂಬುದನ್ನು ನೋಡೋಣ.
ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಹರಾಜು ಯಾವಾಗ?
2024 ರ ಐಪಿಎಲ್ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಹರಾಜು ಎಲ್ಲಿ ನಡೆಯಲಿದೆ?
2024 ರ ಐಪಿಎಲ್ ಹರಾಜು ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆಯಲಿದೆ.
ಐಪಿಎಲ್ 2024 ಹರಾಜು ಡಿಸೆಂಬರ್ 19 ರಂದು ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
ಐಪಿಎಲ್ 2024 ಹರಾಜು ಸ್ಥಳೀಯ ಸಮಯ (ದುಬೈ) 11:30 AM ಕ್ಕೆ ಪ್ರಾರಂಭವಾಗುತ್ತದೆ, ಭಾರತದಲ್ಲಿ 1 ಗಂಟೆಗೆ ಶುರುವಾಗಲಿದೆ.
IND vs SA: ಅಮೋಘ ಗೆಲುವಿನೊಂದಿಗೆ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಐಪಿಎಲ್ 2024 ಹರಾಜನ್ನು ಯಾವ ಚಾನಲ್‌ಗಳು ನೇರ ಪ್ರಸಾರ ಮಾಡುತ್ತವೆ?
ಸ್ಟಾರ್ಟ್ ಸ್ಪೋರ್ಟ್ಸ್ ಐಪಿಎಲ್ 2024 ಹರಾಜಿನ ಅಧಿಕೃತ ಪ್ರಸಾರಕವಾಗಿದೆ. ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ವೀಕ್ಷಕರು ಹರಾಜನ್ನು ಲೈವ್ ಆಗಿ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ತೆಲುಗು, ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ.
ಐಪಿಎಲ್ 2024 ಹರಾಜಿನ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ನೋಡಬಹುದು?
ಐಪಿಎಲ್ 2024 ಹರಾಜಿನ ಲೈವ್ ಸ್ಟ್ರೀಮಿಂಗ್ JioCinema ನಲ್ಲಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ನಲ್ಲಿ
ಲಭ್ಯವಿರುತ್ತದೆ.
ದುಬೈನಲ್ಲಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಎಷ್ಟು ಮಂದಿ ಕ್ರಿಕೆಟಿಗರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ?
ಮುಂಬರುವ ಐಪಿಎಲ್ ಹರಾಜಿನಲ್ಲಿ ಒಟ್ಟು 333 ಕ್ರಿಕೆಟಿಗರು ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ