IND vs SA: ಅಮೋಘ ಗೆಲುವಿನೊಂದಿಗೆ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
India vs South Africa: 117 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಯುವ ದಾಂಡಿಗ ಸಾಯಿ ಸುದರ್ಶನ್ (55) ಅಜೇಯ ಅರ್ಧಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 52 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಕೇವಲ 16.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಯುವ ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ದಾಳಿಗೆ ತತ್ತರಿಸಿತು.
ಎಡಗೈ ವೇಗಿ ಅರ್ಷದೀಪ್ ಸಿಂಗ್ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಅವೇಶ್ ಖಾನ್ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ್ದರು. ಇದರಿಂದ ಕೇವಲ 27.3 ಓವರ್ಗಳಲ್ಲಿ 116 ರನ್ಗಳಿಸಿ ಸೌತ್ ಆಫ್ರಿಕಾ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್ 10 ಓವರ್ಗಳಲ್ಲಿ 37 ರನ್ ನೀಡಿ 5 ವಿಕೆಟ್ ಪಡೆದರೆ, ಅವೇಶ್ ಖಾನ್ 8 ಓವರ್ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಿದರು. ಹಾಗೆಯೇ ಒಂದು ವಿಕೆಟ್ ಕುಲ್ದೀಪ್ ಯಾದವ್ ಪಾಲಾಯಿತು.
ಇನ್ನು 117 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಯುವ ದಾಂಡಿಗ ಸಾಯಿ ಸುದರ್ಸನ್ (55) ಅಜೇಯ ಅರ್ಧಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 52 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಕೇವಲ 16.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ:
ಇದು ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾಗೆ ಲಭಿಸಿದ ಅತ್ಯುತ್ತಮ ಗೆಲುವುಗಳಲ್ಲಿ ಒಂದು. ಏಕೆಂದರೆ ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು 200 ಎಸೆತಗಳನ್ನು ಬಾಕಿಯಿರಿಸಿ ಜಯ ಸಾಧಿಸಿದೆ. ಇದಕ್ಕೂ ಮುನ್ನ 2022 ರಲ್ಲಿ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ 185 ಎಸೆತಗಳನ್ನು ಬಾಕಿಯಿರಿಸಿ ಗೆದ್ದಿದ್ದು ಸಾಧನೆಯಾಗಿತ್ತು. ಇದೀಗ ಮೊದಲ ಬಾರಿಗೆ 200 ಎಸೆತಗಳು ಬಾಕಿ ಇರುವಂತೆ ಭರ್ಜರಿ ಜಯ ಸಾಧಿಸಿರುವುದು ವಿಶೇಷ.
ಇನ್ನು ಸೌತ್ ಆಫ್ರಿಕಾ ತಂಡವನ್ನು ಅತೀ ಹೆಚ್ಚು ಬಾಲ್ಗಳ ಅಂತರದಲ್ಲಿ ಸೋಲಿಸಿದ ಖ್ಯಾತಿ ಈಗಲೂ ಇಂಗ್ಲೆಂಡ್ ತಂಡದ ಹೆಸರಿನಲ್ಲಿದೆ. 2008 ರಲ್ಲಿ ಇಂಗ್ಲೆಂಡ್ ತಂಡವು ಸೌತ್ ಆಫ್ರಿಕಾವನ್ನು 215 ಎಸೆತಗಳನ್ನು ಬಾಕಿಯಿರಿಸಿ ಸೋಲಿಸಿತ್ತು.
ಆದರೆ ಸೌತ್ ಆಫ್ರಿಕಾವನ್ನು ತವರಿನಲ್ಲಿಯೇ 200 ಎಸೆತಗಳನ್ನು ಬಾಕಿ ಇರಿಸಿ ಸೋಲಿಸಿದ ಮೊದಲ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿರುವುದು ವಿಶೇಷ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ರೀಝ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್ , ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೇಝ್ ಶಮ್ಸಿ.
ಇದನ್ನೂ ಓದಿ: IPL 2024: ಈ ಬಾರಿಯ ಐಪಿಎಲ್ನೊಂದಿಗೆ 3 ಆಟಗಾರರು ವಿದಾಯ..!
ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
Published On - 7:08 am, Mon, 18 December 23