IPL 2024 Auction: ಐಪಿಎಲ್ ಹರಾಜಿನಲ್ಲಿ ಜಮ್ಮು-ಕಾಶ್ಮೀರದ 9 ಆಟಗಾರರು
IPL 2024 Auction: ಈಗಾಗಲೇ ಜಮ್ಮು-ಕಾಶ್ಮೀರದ ಆಟಗಾರರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಇದೀಗ ಮತ್ತಷ್ಟು ಹೊಸ ಮುಖಗಳು ಐಪಿಎಲ್ ಹರಾಜಿನ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಐಪಿಎಲ್ (IPL 2024) ಸೀಸನ್ 17 ಹರಾಜು ಪಟ್ಟಿಯಲ್ಲಿ ಜಮ್ಮು-ಕಾಶ್ಮೀರದ ಒಟ್ಟು 9 ಆಟಗಾರರು ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಹರಾಜಿಗಾಗಿ 333 ಆಟಗಾರರ ಹೆಸರುಗಳನ್ನು ಫೈನಲ್ ಮಾಡಲಾಗಿದೆ. ಇದರಲ್ಲಿ ಜಮ್ಮು-ಕಾಶ್ಮೀರ ರಾಜ್ಯ ತಂಡವನ್ನು ಪ್ರತಿನಿಧಿಸುವ ಒಂಭತ್ತು ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಈಗಾಗಲೇ ಜಮ್ಮು-ಕಾಶ್ಮೀರದ ಆಟಗಾರರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಇದೀಗ ಮತ್ತಷ್ಟು ಹೊಸ ಮುಖಗಳು ಐಪಿಎಲ್ ಹರಾಜಿನ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
5 ಬೌಲರ್ಗಳು:
ವಿಶೇಷ ಎಂದರೆ ಜಮ್ಮು-ಕಾಶ್ಮೀರದಿಂದ ಐಪಿಎಲ್ ಹರಾಜಿಗೆ ಆಯ್ಕೆಯಾಗಿರುವ 9 ಆಟಗಾರರಲ್ಲಿ ಐವರು ಬೌಲರ್ಗಳು. ಇವರಲ್ಲಿ ರಾಸಿಖ್ ಸಲಾಮ್ ಹಾಗೂ ವಿವ್ರಾಂತ್ ಶರ್ಮಾ ಈಗಾಗಲೇ ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಸಿಖ್ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರೆ, ವಿವ್ರಾಂತ್ ಶರ್ಮಾ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.
ಐಪಿಎಲ್ ಹರಾಜಿನಲ್ಲಿರುವ ಜಮ್ಮು-ಕಾಶ್ಮೀರದ ಆಟಗಾರರು:
- ಮಣಿತ್ ಸಿಂಗ್ ಜಸ್ರೋತಿಯಾ
- ಬಾಸಿತ್ ಬಶೀರ್ (ಬೌಲರ್)
- ವಸೀಮ್ ಬಶೀರ್ (ಬೌಲರ್)
- ಮುಜ್ತಾಬಾ ಯೂಸುಫ್ (ಬೌಲರ್)
- ರಾಸಿಖ್ ಸಲಾಮ್ ದಾರ್ (ಬೌಲರ್)
- ವಿವ್ರಾಂತ್ ಶರ್ಮಾ (ಆಲ್ರೌಂಡರ್)
- ನಾಸಿರ್ ಲೋನ್ (ಆಲ್ರೌಂಡರ್)
- ಅಬಿದ್ ಮುಷ್ತಾಕ್ (ಆಲ್ರೌಂಡರ್)
- ಶುಭಂ ಸಿಂಗ್ (ಆಲ್ರೌಂಡರ್)
ಐಪಿಎಲ್ ಆಕ್ಷನ್ ಪಟ್ಟಿಯಲ್ಲಿ ಕರ್ನಾಟಕದ 14 ಆಟಗಾರರು:
ಈ ಬಾರಿಯ ಐಪಿಎಲ್ ಹರಾಜಿಗಾಗಿ ಫೈನಲ್ ಲೀಸ್ಟ್ ಮಾಡಲಾದ ಪಟ್ಟಿಯಲ್ಲಿ ಕರ್ನಾಟಕದ 14 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಇವರಲ್ಲಿ ಬಹುತೇಕ ಆಟಗಾರರು ಈಗಾಗಲೇ ಐಪಿಎಲ್ನಲ್ಲಿ ಪಾದಾರ್ಪಣೆ ಮಾಡಿದವರು. ಇದಾಗ್ಯೂ ಈ ಬಾರಿ ಕೆಲ ತಂಡಗಳಿಂದ ರಿಲೀಸ್ ಆಗಿದ್ದಾರೆ. ಅದರಂತೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಕರ್ನಾಟಕದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
- ಕರುಣ್ ನಾಯರ್
- ಶ್ರೇಯಸ್ ಗೋಪಾಲ್
- ಮನೀಶ್ ಪಾಂಡೆ
- ಜಗದೀಶ್ ಸುಚಿತ್
- ಶುಭಾಂಗ್ ಹೆಗ್ಡೆ
- ನಿಹಾಲ್ ಉಲ್ಲಾಳ್
- ಬಿಆರ್ ಶರತ್
- ಮನ್ವಂತ್ ಕುಮಾರ್
- ಎಲ್ಆರ್ ಚೇತನ್
- ಕೆಎಲ್ ಶ್ರೀಜಿತ್
- ಎಂ. ವೆಂಕಟೇಶ್
- ಮೋನಿಶ್ ರೆಡ್ಡಿ
- ಅಭಿಲಾಷ್ ಶೆಟ್ಟಿ
- ಕೆ.ಸಿ ಕಾರ್ಯಪ್ಪ.
ಇದನ್ನೂ ಓದಿ: IPL 2024 Auction: ಮೊದಲ ಸುತ್ತಿನಲ್ಲಿ ಹರಾಜಾಗುವ ಆಟಗಾರರು ಯಾರು ಗೊತ್ತಾ?
ಐಪಿಎಲ್ ತಂಡಗಳಲ್ಲಿ ರಿಟೈನ್ ಆಗಿರುವ ಕರ್ನಾಟಕದ ಆಟಗಾರರು:
- ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್)
- ಕೃಷ್ಣಪ್ಪ ಗೌತಮ್ (ಲಕ್ನೋ ಸೂಪರ್ ಜೈಂಟ್ಸ್)
- ದೇವದತ್ ಪಡಿಕಲ್ (ಲಕ್ನೋ ಸೂಪರ್ ಜೈಂಟ್ಸ್)
- ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್ ಹೈದರಾಬಾದ್)
- ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್)
- ಪ್ರವಿಣ್ ದುಬೆ (ಡೆಲ್ಲಿ ಕ್ಯಾಪಿಟಲ್ಸ್)
- ಅಭಿನವ್ ಮನೋಹರ್ (ಗುಜರಾತ್ ಟೈಟಾನ್ಸ್)
- ವಿದ್ವತ್ ಕಾವೇರಪ್ಪ (ಪಂಜಾಬ್ ಕಿಂಗ್ಸ್)
- ವೈಶಾಕ್ ವಿಜಯ್ಕುಮಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
- ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು).
Published On - 8:30 am, Mon, 18 December 23