IPL 2024: ಐಪಿಎಲ್ ಸೀಸನ್ 17 ಹರಾಜಿಗಾಗಿ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 19 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಪ್ರಸ್ತುತ 10 ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಸಂಖ್ಯೆ ಕೇವಲ 77. ಅಂದರೆ 77 ಆಟಗಾರರಿಗಾಗಿ ಈ ಬಾರಿ ಹರಾಜು ನಡೆಯಲಿದೆ. ಆದರೆ ಇಲ್ಲಿ ಪ್ರತಿ ತಂಡಗಳ ಪರ್ಸ್ ಮೊತ್ತಕ್ಕೆ ಅನುಗುಣವಾಗಿ ಆಟಗಾರರಿಗೆ ಅವಕಾಶ ದೊರೆಯಲಿದೆ. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರಿಗೆ ಮಾತ್ರ ಅವಕಾಶ.
ಆದರೆ ಇಲ್ಲಿ ಒಂದು ತಂಡದಲ್ಲಿ 25 ಆಟಗಾರರು ಇರಲೇಬೇಕೆಂಬ ನಿಯಮವಿಲ್ಲ. ಹೀಗಾಗಿ ಪ್ರತಿ ತಂಡಗಳು 18 ಕ್ಕಿಂತ ಹೆಚ್ಚಿನ ಆಟಗಾರರನ್ನು ಖರೀದಿಸಿದರೆ ಸಾಕಾಗುತ್ತದೆ. ಹೀಗಾಗಿ ಪರ್ಸ್ ಮೊತ್ತಕ್ಕೆ ಅನುಗುಣವಾಗಿ ಕೆಲ ತಂಡಗಳು ಆಟಗಾರರನ್ನು ಖರೀದಿಸಲಿದ್ದಾರೆ. ಅದರಂತೆ 10 ತಂಡಗಳು ಉಳಿಸಿಕೊಂಡಿರುವ ಆಟಗಾರರಿಗೆ ಅನುಗುಣವಾಗಿ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ…
1- ಗುಜರಾತ್ ಟೈಟಾನ್ಸ್ (GT): ಈ ಬಾರಿಯ ಮಿನಿ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 6 ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.
2- ಸನ್‌ರೈಸರ್ಸ್ ಹೈದರಾಬಾದ್ (SRH): ಎಸ್ಆರ್ಹೆಚ್ ತಂಡದಲ್ಲಿ ಲಭ್ಯವಿರುವ ಒಟ್ಟು ಸ್ಲಾಟ್ಗಳು 6. ಅಂದರೆ ಮೂವರು ಭಾರತೀಯರು ಹಾಗೂ ಮೂವರು ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಿದೆ.
3- ಕೋಲ್ಕತ್ತಾ ನೈಟ್ ರೈಡರ್ಸ್ (KKR): ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಖಾಲಿಯಿರುವ ಸ್ಲಾಟ್ಗಳ ಸಂಖ್ಯೆ 12. ಇದರಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರಿಗೆ ಅವಕಾಶ ನೀಡಬಹುದು.
4- ಚೆನ್ನೈ ಸೂಪರ್ ಕಿಂಗ್ಸ್ (CSK): ಸಿಎಸ್ಕೆ ತಂಡವು ಈ ಬಾರಿ 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.
5- ಪಂಜಾಬ್ ಕಿಂಗ್ಸ್ (PBKS): ಪಂಜಾಬ್ ತಂಡದಲ್ಲಿರುವ 8 ಸ್ಲಾಟ್ಗಳು ಖಾಲಿಯಿದ್ದು, ಇಬ್ಬರು ವಿದೇಶಿ ಆಟಗಾರರನ್ನು ಹಾಗೂ 6 ಭಾರತೀಯರನ್ನು ಖರೀದಿಸಬಹುದಾಗಿದೆ.
6- ಡೆಲ್ಲಿ ಕ್ಯಾಪಿಟಲ್ಸ್ (DC): ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 9 ಸ್ಲಾಟ್ಗಳನ್ನು ಹೊಂದಿದ್ದು, ಇದರಲ್ಲಿ 4 ವಿದೇಶಿ ಆಟಗಾರರಿಗೆ, ಐವರು ಭಾರತೀಯ ಅವಕಾಶ ನೀಡಬಹುದು.
7- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಆರ್ಸಿಬಿ ತಂಡವು ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದು.
8- ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಒಟ್ಟು 8 ಸ್ಲಾಟ್ಗಳನ್ನು ಹೊಂದಿದ್ದು, ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.
9- ರಾಜಸ್ಥಾನ್ ರಾಯಲ್ಸ್ (RR): ಆರ್ಆರ್ ತಂಡದಲ್ಲಿ ಖಾಲಿಯಿರುವ 8 ಸ್ಲಾಟ್ಗಳಲ್ಲಿ ಮೂವರು ವಿದೇಶಿ ಹಾಗೂ 5 ಭಾರತೀಯ ಆಟಗಾರರಿಗೆ ಅವಕಾಶ ನೀಡಬಹುದು.
10- ಲಕ್ನೋ ಸೂಪರ್ ಜೈಂಟ್ಸ್ (LSG): ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಒಟ್ಟು 6 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಲ್ಲಿ ನಾಲ್ವರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.
ಇದನ್ನೂ ಓದಿ: IPL 2024: 3 ತಂಡಗಳಿಗೆ ಹೊಸ ನಾಯಕ..!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಿದ್ದು, ಇದಾದ ಬಳಿಕ ಆಟಗಾರರ ಹರಾಜು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.