ಮುಂಬೈ ತಂಡಕ್ಕೆ ಬರುವ ಮುನ್ನ ನಾಯಕತ್ವದ ಷರತ್ತು ಹಾಕಿದ್ರಾ ಹಾರ್ದಿಕ್ ಪಾಂಡ್ಯ..?

IPL 2024: ‘ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಪ್ರಕಾರ, ಮುಂಬೈಗೆ ಮರಳುವ ಮುನ್ನ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ, ನನಗೆ ತಂಡದ ನಾಯಕತ್ವ ನೀಡಿದರೆ ಮಾತ್ರ ನಾನು ಮುಂಬೈ ಇಂಡಿಯನ್ಸ್‌ಗೆ ಮರಳುವುದಾಗಿ ಫ್ರಾಂಚೈಸಿಗೆ ಷರತ್ತು ಹಾಕಿದ್ದರು ಎಂದು ವರದಿ ಮಾಡಿದೆ.

ಮುಂಬೈ ತಂಡಕ್ಕೆ ಬರುವ ಮುನ್ನ ನಾಯಕತ್ವದ ಷರತ್ತು ಹಾಕಿದ್ರಾ ಹಾರ್ದಿಕ್ ಪಾಂಡ್ಯ..?
ಹಾರ್ದಿಕ್ ಪಾಂಡ್ಯ
Follow us
ಪೃಥ್ವಿಶಂಕರ
|

Updated on:Dec 16, 2023 | 4:31 PM

ಮುಂಬೈ ಇಂಡಿಯನ್ಸ್ (Mumbai Indians) ತಂಡ ಮುಂದಿನ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ತಂಡದಲ್ಲಿ ಬಹು ದೊಡ್ಡ ಬದಲಾವಣೆ ಮಾಡಿದೆ. ಅದರಂತೆ ಹಲವು ವರ್ಷಗಳ ಕಾಲ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾರನ್ನು (Rohit Sharma) ನಾಯಕತ್ವದಿಂದ ತೆಗೆದುಹಾಕಿ, ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ಮಾಡಿದೆ. ಜನರ ದೃಷ್ಟಿಯಲ್ಲಿ ರಾತ್ರೋರಾತ್ರಿ ಈ ನಿರ್ಧಾರವನ್ನು ತೆಗೆದುಕೊಂಡಿರುವಂತೆ ಕಾಣುತ್ತಿದ್ದರೂ, ಇದರ ಹಿಂದಿನ ಆಂತರಿಕ ಸತ್ಯವೇ ಬೇರೆ ಇದೆ ಎಂಬುದು ಸದ್ಯದ ಮಾತಾಗಿದೆ. ಹಾರ್ದಿಕ್ ಅವರನ್ನು ತಂಡದ ನಾಯಕನನ್ನಾಗಿ ಮಾಡುವ ಯೋಜನೆ ಹಿಂದೆಯೇ ನಡೆದಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹಾಗೆಯೇ ನಾಯಕತ್ವದ ಷರತ್ತಿನ ಮೇರೆಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದರು ಎಂದು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ನಾಯಕತ್ವ ನೀಡಿದರೆ ಮಾತ್ರ

‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಪ್ರಕಾರ, ಮುಂಬೈಗೆ ಮರಳುವ ಮುನ್ನ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ, ನನಗೆ ತಂಡದ ನಾಯಕತ್ವ ನೀಡಿದರೆ ಮಾತ್ರ ನಾನು ಮುಂಬೈ ಇಂಡಿಯನ್ಸ್‌ಗೆ ಮರಳುವುದಾಗಿ ಫ್ರಾಂಚೈಸಿಗೆ ಷರತ್ತು ಹಾಕಿದ್ದರು ಎಂದು ತನ್ನ ವರದಿಯಲ್ಲಿ ಹೇಳಿದೆ.

ನಾಯಕತ್ವದಿಂದ ರೋಹಿತ್​ಗೆ ಕೋಕ್; ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್​ ಕಳೆದುಕೊಂಡ ಮುಂಬೈ..!

ರೋಹಿತ್ ಜೊತೆ ಚರ್ಚೆ

ಅದರಂತೆ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೇ ಈ ಪ್ರಕ್ರಿಯೆ ಆರಂಭವಾಗಿದ್ದು, ಹಾರ್ದಿಕ್​ರನ್ನು ತಂಡಕ್ಕೆ ಕರೆತರುವ ಬಗ್ಗೆ ಹಾಗೂ ಅವರಿಗೆ ನಾಯಕತ್ವ ಹಸ್ತಾಂತರಿಸುವ ಬಗ್ಗೆ ಮುಂಬೈ ಫ್ರಾಂಚೈಸಿ, ರೋಹಿತ್ ಅವರೊಂದಿಗೆ ನಿರಂತರವಾಗಿ ಚರ್ಚಿಸಿತ್ತು. ಅಲ್ಲದೆ ತಮ್ಮ ನಿರ್ಧಾರದ ಹಿಂದೆ ಇರುವ ಉದ್ದೇಶವನ್ನು ರೋಹಿತ್​ಗೆ ಅರ್ಥಮಾಡಿಸಲು ಪ್ರಯತ್ನಿಸಿತ್ತು.

ತನ್ನ ಯೋಜನೆ ಪ್ರಕಾರ ಮೊದಲು ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ವಾಪಸ್ ಕರೆತಂದ ಫ್ರಾಂಚೈಸಿ, ಆ ನಂತರ ಡಿಸೆಂಬರ್ 15 ರಂದು ಹಾರ್ದಿಕ್ ಅವರನ್ನು ಅಧಿಕೃತವಾಗಿ ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕ ಎಂದು ಘೋಷಿಸಿದೆ. ಆದರೆ ಈ ನಿರ್ಧಾರವನ್ನು ತಕ್ಷಣವೇ ತೆಗೆದುಕೊಳ್ಳಲಾಗಿದೆ ಎಂಬುದನ್ನು ಜನರಿಗೆ ತೋರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹಾರ್ದಿಕ್ ಪಾಂಡ್ಯ 2015 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 2021 ರವರೆಗೆ ಮುಂಬೈ ತಂಡದಲ್ಲಿದ್ದ ಅವರನ್ನು 2022ರ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಖರೀದಿಸಿ ನಾಯಕನನ್ನಾಗಿ ಮಾಡಿತು. ಅವರ ನಾಯಕತ್ವದಲ್ಲಿ, ಹಾರ್ದಿಕ್ ಮೊದಲ ಸೀಸನ್​ನಲ್ಲಿ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದರು. ನಂತರ ಎರಡನೇ ಸೀಸನ್​ನಲ್ಲಿ, ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಆಯಿತು.

ಹಾರ್ದಿಕ್ ಐಪಿಎಲ್ ವೃತ್ತಿಜೀವನ

ಹಾರ್ದಿಕ್ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 123 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 115 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿದ ಅವರು 30.38 ಸರಾಸರಿ ಮತ್ತು 145.86 ಸ್ಟ್ರೈಕ್ ರೇಟ್‌ನಲ್ಲಿ 2309 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 10 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, 81 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿ 33.26 ಸರಾಸರಿಯಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sat, 16 December 23