IPL 2024: ಟಿ20 ವಿಶ್ವಕಪ್ ಆಯ್ಕೆಗೆ ಐಪಿಎಲ್ ಪ್ರದರ್ಶನ ಮುಖ್ಯವಲ್ಲ, ಆದರೆ…: ಯುವ ಕ್ರಿಕೆಟಿಗರಿಗೆ ಬಿಸಿಸಿಐ ಬಿಗ್ ಶಾಕ್

ICC T20I World Cup: ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಮಾನದಂಡದ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವೆಬ್‌ಸೈಟ್ ವರದಿ ಮಾಡಿದೆ. ಇದರ ಪ್ರಕಾರ, 'ಐಪಿಎಲ್ ಬಹಳ ಮುಖ್ಯವಾಗಿದ್ದರೂ, ಅದರ ಆಧಾರದ ಮೇಲೆ ಟಿ20 ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

IPL 2024: ಟಿ20 ವಿಶ್ವಕಪ್ ಆಯ್ಕೆಗೆ ಐಪಿಎಲ್ ಪ್ರದರ್ಶನ ಮುಖ್ಯವಲ್ಲ, ಆದರೆ...: ಯುವ ಕ್ರಿಕೆಟಿಗರಿಗೆ ಬಿಸಿಸಿಐ ಬಿಗ್ ಶಾಕ್
IPL and Team India

Updated on: Mar 15, 2024 | 7:20 AM

ಮುಂಬರುವ ಐಪಿಎಲ್ 2024ರಲ್ಲಿ (IPL 2024) ಉತ್ತಮ ಪ್ರದರ್ಶನ ನೀಡಿ ಪ್ರತಿಷ್ಠಿತ ಟಿ20 ವಿಶ್ವಕಪ್ 2024ಕ್ಕೆ ಭಾರತ ತಂಡದಲ್ಲಿ ಅವಕಾಶ ಪಡೆಯುವ ಕನಸು ಕಾಣುತ್ತಿರುವ ಹಲವು ಕ್ರಿಕೆಟಿಗರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಕೆಲವು ವರದಿಗಳ ಪ್ರಕಾರ, 2024 ರ ಟಿ 20 ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಇದು ಹಲವು ಯುವ ಆಟಗಾರರು ಹಾಗೂ ಹಿರಿಯ ಆಟಗಾರರನ್ನು ಚಿಂತೆಗೀಡು ಮಾಡಿದೆ. ಐಪಿಎಲ್ ಮುಗಿದ ನಂತರ, 2024 ರ ಐಸಿಸಿ ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ತಕ್ಷಣ ಈ ಟೂರ್ನಿ ಆರಂಭವಾಗುವುದರಿಂದ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಬಿಸಿಸಿಐ ಆಯ್ಕೆ ಮಂಡಳಿ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ಪ್ರಮುಖವಾಗಿ ಪರಿಗಣಿಸುತ್ತದೆ ಎಂದು ಹಲವು ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದಲ್ಲಿ ಆಡದೇ ಮತ್ತು ದೇಶೀಯ ಟೂರ್ನಿಯಿಂದ ದೂರ ಉಳಿದಿರುವ ಹಲವು ಆಟಗಾರರು ಐಪಿಎಲ್​ನಲ್ಲಿ ಮಿಂಚುವ ಹಾಗೂ ಭಾರತ ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯುವ ಗುರಿ ಹೊಂದಿದ್ದಾರೆ. ಆದರೆ ಬಿಸಿಸಿಐನ ಇತ್ತೀಚಿನ ನಿರ್ಧಾರ ಅಂತಹ ಆಟಗಾರರಿಗೆ ಆಘಾತವಾಗಿ ಪರಿಣಮಿಸಿದೆ.

ಗೆದ್ದವರಿಗೆ ಫೈನಲ್ ಟಿಕೆಟ್; ಮುಂಬೈ ತಂಡವನ್ನು ಮಣಿಸುತ್ತಾ ಆರ್​ಸಿಬಿ?

ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಮಾನದಂಡದ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವೆಬ್‌ಸೈಟ್ ವರದಿ ಮಾಡಿದೆ. ಇದರ ಪ್ರಕಾರ, ‘ಐಪಿಎಲ್ ಬಹಳ ಮುಖ್ಯವಾಗಿದ್ದರೂ, ಅದರ ಆಧಾರದ ಮೇಲೆ ಟಿ20 ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಕ್ಕಾಗಿ ಟಿ20 ವಿಶ್ವಕಪ್ ಆಡಬಹುದು ಎಂದು ಯೋಚಿಸುತ್ತಿದ್ದರೆ ಅದು ತಪ್ಪು. ಟಿ20 ವಿಶ್ವಕಪ್‌ಗೆ ಆಟಗಾರರನ್ನು ಅಂತರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿದೆ. ದೇಶಿಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಭಾರತೀಯ ಆಟಗಾರರಿಗೆ ಇದು ಮತ್ತೊಂದು ಆಘಾತಕಾರಿ ಸುದ್ದಿ.

ರಣಜಿ ಆಡಿದ ಶ್ರೇಯಸ್ ಅಯ್ಯರ್​ಗೆ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ..! ವರದಿ

ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದರೆ ಟೀಮ್ ಇಂಡಿಯಾಗೆ ಎಂಟ್ರಿ ಸಿಗುವುದಲ್ಲದೆ ಐಪಿಎಲ್‌ನಲ್ಲಿ ಮೌಲ್ಯ ಹೆಚ್ಚುತ್ತದೆ ಎಂಬುದು ಆಟಗಾರರ ನಂಬಿಕೆ. ಈ ಕಾರಣದಿಂದಾಗಿ, ಕೆಲ ಆಟಗಾರರು ರಣಜಿ- ದೇಶೀಯ ಕ್ರಿಕೆಟ್ ಆಡಲು ನಿರಾಕರಿಸುತ್ತಿದ್ದಾರೆ. ದೇಶೀಯ ಕ್ರಿಕೆಟ್ ಆಡುವ ಬದಲು ಐಪಿಎಲ್ ತಯಾರಿಯಲ್ಲಿ ತೊಡಗುತ್ತಾರೆ. ಈ ವಿವಾದದಿಂದಾಗಿಯೇ ಇಶಾನ್ ಕಿಶನ್ ಕೆಲ ದಿನಗಳಿಂದ ಸುದ್ದಿಯಲ್ಲಿದ್ದರು. ಈ ಕಾರಣದಿಂದ ಬಿಸಿಸಿಐ ಅವರ ಕೇಂದ್ರ ಒಪ್ಪಂದವನ್ನೂ ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಇದೀಗ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲು ಐಪಿಎಲ್ ಪ್ರಮುಖ ಆಧಾರವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿರುವುದು ಐಪಿಎಲ್ ಹುಚ್ಚಿಗೆ ಬಿದ್ದಿರುವ ಆಟಗಾರರಿಗೆ ಭಾರೀ ಹಿನ್ನಡೆ ಎಂದೇ ಹೇಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ