ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಅನ್ಬಾಕ್ಸ್ ಕಾರ್ಯಕ್ರಮ ನಡೆಸಿಕೊಟ್ಟ ಆರ್ಸಿಬಿ (RCB) ಪಡೆ ಈಗ ತನ್ನ ಮೊದಲ ಐಪಿಎಲ್ (IPL 2024) ಪಂದ್ಯಕ್ಕಾಗಿ ಚೆನ್ನೈ ತಲುಪಿದೆ. ವಿರಾಟ್ ಕೊಹ್ಲಿ (Virat Kohli), ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಚಾರ್ಟರ್ಡ್ ಫ್ಲೈಟ್ ಮೂಲಕ ಚೆನ್ನೈ ತಲುಪಿದ್ದಾರೆ. ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಚೆನ್ನೈನಲ್ಲಿ ಆತಿಥೇಯ ಸಿಎಸ್ಕೆ ವಿರುದ್ಧ (RCB vs CSK) ಆಡಬೇಕಾಗಿದೆ. ಇದು ಈ ಟಿ20 ಲೀಗ್‌ನ 17 ನೇ ಆವೃತ್ತಿಯ ಮೊದಲ ಪಂದ್ಯವಾಗಿದೆ. ಹೀಗಾಗಿ ಲೀಗ್ ಅನ್ನು ಗೆಲುವಿನೊಂದಿಗೆ ಆರಂಭಿಸುವುದು ಉಭಯ ತಂಡಗಳ ಗುರಿಯಾಗಿದೆ. ಅದಕ್ಕಾಗಿಯೇ ಎರಡೂ ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದು, ಉದ್ಘಾಟನಾ ಪಂದ್ಯದಲ್ಲೇ ಅಬ್ಬರಿಸುವ ಸುಳಿವು ನೀಡಿವೆ.
ಇತ್ತ ಮೊದಲ ಪಂದ್ಯಕ್ಕಾಗಿ ಬೆಂಗಳೂರಿನಿಂದ ಚೆನ್ನೈಗೆ ಬಂದಿಳಿದ ಆರ್ಸಿಬಿ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರಕಿತು. ಅದರಲ್ಲೂ ಬರೋಬ್ಬರಿ 2 ತಿಂಗಳ ನಂತರ ಕ್ರಿಕೆಟ್ ಲೋಕದಲ್ಲಿ ಕಾಣಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿಯ ಹೆಸರು ಇಡೀ ವಿಮಾನ ನಿಲ್ದಾಣದ ತುಂಬ ಪ್ರತಿಧ್ವನಿಸಿತು. ಅಲ್ಲಿ ನೆರೆದಿದ್ದ ಅಭಿಮಾನಿಗಳು ವಿರಾಟ್-ವಿರಾಟ್ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಭದ್ರತಾ ಪಡೆಗಳು ಸುತ್ತುವರಿದಿರುವ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದು ಕಂಡುಬಂತು. ವಿಮಾನ ನಿಲ್ದಾಣದಿಂದ ತಂಡದ ಬಸ್ ಏರಿದ ವಿರಾಟ್ ಇತರ ಆಟಗಾರರೊಂದಿಗೆ ಹೋಟೆಲ್‌ಗೆ ತೆರಳಿದರು.
The Roar for Virat Kohli and RCB team when they reach Chennai.
– THE CRAZE OF KING KOHLI & RCB…!!!! 🔥 pic.twitter.com/30NMkx4hdK
— CricketMAN2 (@ImTanujSingh) March 20, 2024
ಇನ್ನೇರಡು ದಿನಗಳಲ್ಲಿ ಐಪಿಎಲ್ ಆರಂಭವಾಗಲಿದ್ದು, ಲೀಗ್‌ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಸಿಎಸ್ಕೆ ಅಖಾಡಕ್ಕಿಳಿಯಲಿದೆ. ಹೀಗಾಗಿ ತಂಡದ ನಾಯಕ ಎಂಎಸ್ ಧೋನಿ ಚೆಪಾಕ್ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಧೋನಿ ತನ್ನ ಸಿಗ್ನೇಚರ್ ಶಾಟ್ ಹೆಲಿಕಾಪ್ಟರ್ ಶಾಟ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
MS Dhoni with a helicopter shot in the practice session.
– MSD is preparing hard for the IPL.pic.twitter.com/6YDYRK8QQy
— Mufaddal Vohra (@mufaddal_vohra) March 19, 2024
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಕರ್ಣ್ ಶರ್ಮಾ, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಆಕಾಶ್ ದೀಪ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Wed, 20 March 24