IPL 2024: ‘ಯಾವನೋ ಇವ್ನು, ಹಿಡ್ಕೊಳ್ರೋ’; ಐಪಿಎಲ್ ಪ್ರೋಮೋದಲ್ಲಿ ಕನ್ನಡ ಕಲರವ; ನೀವೇ ನೋಡಿ
IPL 2024 Promo Released: ವಾಹಿನಿ ಹಂಚಿಕೊಂಡಿರುವ ಲೀಗ್ನ ಮೊದಲ ಪ್ರೋಮೋದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ 3 ತಂಡದ ನಾಯಕರು ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ಚಾಂಪಿಯನ್ ಕ್ಯಾಪ್ಟನ್‌ಗಳು ಈ ಪ್ರೋಮೋದಿಂದ ಕಾಣೆಯಾಗಿದ್ದಾರೆ.
2024 ರ ಐಪಿಎಲ್ (IPL 2024) ಆರಂಭಕ್ಕೆ ಇನ್ನ ತಿಂಗಳಿಗೂ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಲೀಗ್ನ ಪ್ರಸಾರದ ಹಕ್ಕನ್ನು ಗಿಟ್ಟಿಸಿಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಭಿನ್ನ ವಿಭಿನ್ನವಾದ ಪ್ರೋಮೋಗಳ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಇಂದಿನಿಂದಲೇ ಐಪಿಎಲ್ನತ್ತ ಸೆಳೆಯಲು ಮುಂದಾಗಿದೆ. ಅದರಂತೆ ವಾಹಿನಿ ಹಂಚಿಕೊಂಡಿರುವ ಲೀಗ್ನ ಮೊದಲ ಪ್ರೋಮೋದಲ್ಲಿ (IPL 2024 Promo) ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸೇರಿದಂತೆ 3 ತಂಡದ ನಾಯಕರು ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ಚಾಂಪಿಯನ್ ಕ್ಯಾಪ್ಟನ್‌ಗಳು ಈ ಪ್ರೋಮೋದಿಂದ ಕಾಣೆಯಾಗಿದ್ದಾರೆ. ಆದರೆ ಪ್ರೋಮೋದೊಳಗೆ ಕಾಣಿಸಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ಕನ್ನಡದಲ್ಲಿ ರಗಡ್ ಆಗಿ ಮಾತನಾಡಿದ್ದು, ಅಂಪೈರ್ ವಿರುದ್ಧ ಸಿಡಿದಿದ್ದಾರೆ. ಇದೀಗ ಅದರ ಝಲಕ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಐಪಿಎಲ್ ಆರಂಭಕ್ಕೆ ಕೆಲವೇ ದಿನ ಬಾಕಿ
17ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳು ಮಾರ್ಚ್ 22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಐಪಿಎಲ್ ಹೊಸ ಸೀಸನ್ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದ್ದು, ಅದರ ಪ್ರಯುಕ್ತ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ ಪ್ರೋಮೋ
Jab saath mil kar Star Sports par dekhenge #TataIPL 2024, tab Gajab IPL ka #AjabRangDikhega! 🤩
IPL starts on MARCH 22 on Star Sports
The real magic of #IPL2024 is unleashed when you watch it together on the big screen – Because it’s always #BetterTogether! 🫂🤌
Don’t miss… pic.twitter.com/h7wran9DRY
— Star Sports (@StarSportsIndia) March 3, 2024
ರಾಹುಲ್ ಕನ್ನಡ ಸೂಪರ್
ಈ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ತಂಡಗಳ ನಾಯಕರು ತಮ್ಮ ತಮ್ಮ ತಂಡದ ಸ್ಥಳೀಯ ಭಾಷೆಯನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಕನ್ನಡಿಗ ರಾಹುಲ್ ಕೂಡ ಕಾಣಿಸಿಕೊಂಡಿದ್ದು, ಗೆಳೆಯರೊಂದಿಗೆ ಆರ್ಸಿಬಿ ಮ್ಯಾಚ್ ನೋಡುತ್ತಿದ್ದಾರೆ. ಈ ವೇಳೆ ಅಂಪೈರ್ ಆರ್ಸಿಬಿ ಬ್ಯಾಟರ್ ಔಟೆಂದು ತೀರ್ಪು ನೀಡಿದ್ದಾರೆ. ಇದನ್ನು ಗಮನಿಸಿದ ರಾಹುಲ್, ‘ಯಾರೋ ಇವ್ನು, ಅಂಪೈರ್ ಅಂತೆ ಅಂಪೈರ್, ಅದು ಔಟಿಲ್ಲ ಮಾರಾಯ, ಹುಚ್ಚಾನಾ ನೀನು, ಹಿಡ್ಕೊಳ್ರೋ ಹೊಡೆದಾಕ್ಬೀಡಣ’ ಎಂದಿದ್ದಾರೆ.
ರಿಷಬ್ ಪಂತ್ ಆಡುವುದು ಖಚಿತ
ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಒಂದಂತೂ ಖಚಿತವಾಗಿದೆ. ಅದೆನೆಂದರೆ ಕಾರು ಅಪಘಾತಕ್ಕೀಡಾಗಿ ವರ್ಷಗಳಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಈ ಹಿಂದೆ ಫ್ರಾಂಚೈಸಿಯ ಕೆಲವು ಸಿಬ್ಬಂದಿಗಳು ಕೂಡ ಇದೇ ಮಾತನ್ನು ಹೇಳಿದ್ದರು. ಆದರೆ ಪಂತ್ ನಾಯಕರಾಗಿ ಆಡುತ್ತಾರೋ ಅಥವಾ ಆಟಗಾರನಾಗಿ ಕಣಕ್ಕಿಳಿಯುತ್ತಾರೋ ಎಂಬುದು ಖಚಿತವಾಗಿರಲಿಲ್ಲ. ಆದರೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಇತರೆ ತಂಡದ ನಾಯಕರ ಜೊತೆ ಕಾಣಿಸಿಕೊಂಡಿರುವ ಪಂತ್, ಡೆಲ್ಲಿ ತಂಡದ ನಾಯಕತ್ವವಹಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಪ್ರೋಮೋದಲ್ಲಿ ರಾಹುಲ್
ಹಾಗೆಯೇ ಪ್ರಸ್ತುತ ಕಾಲಿನ ಇಂಜುರಿಗೆ ಒಳಗಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್ ಆಡುವ ಬಗ್ಗೆಯೂ ಅನುಮಾನ ಹೆಚ್ಚಾಗಿದೆ. ರಾಹುಲ್ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ತೆರಳಲಿದ್ದು, ಈ ಬಾರಿಯ ಐಪಿಎಲ್ನಲ್ಲಿ ಆಡುವುದು ಅನುಮಾನ ಎಂದು ಈ ಹಿಂದೆ ವರದಿಯಾಗಿತ್ತು. ಆದರೀಗ ರಾಹುಲ್ ಕೂಡ ಲಕ್ನೋ ತಂಡದ ನಾಯಕನಾಗಿ ಪ್ರೋಮೋದಲ್ಲಿ ಕಾಣಿಸಿಕೊಂಡಿರುವುದರಿಂದ ಅವರು ಐಪಿಎಲ್ ಆಡುವ ಸಾಧ್ಯತೆಗಳು ಹೆಚ್ಚಾಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:10 pm, Sun, 3 March 24