
ಐಪಿಎಲ್ 2025 (IPL 2025) ರ ಫೈನಲ್ ಪಂದ್ಯವು ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ಜನಪ್ರಿಯ ತಂಡಗಳು ಫೈನಲ್ಗೇರಿರುವ ಕಾರಣ ಇಡೀ ಕ್ರೀಡಾಂಗಣ ಪೂರ್ಣ ಭರ್ತಿಯಾಗುವುದು ಖಚಿತ. ಇದಕ್ಕೆ ಪೂರಕವಾಗಿ ಈ ಪಂದ್ಯದ ಟಿಕೆಟ್ ಬೆಲೆ ಕಾಳ ಸಂತೆಯಲ್ಲಿ ಭಾರಿ ಮೊತ್ತಕ್ಕೆ ಭಿಕರಿಯಾಗುತ್ತಿವೆ. ವರದಿಯ ಪ್ರಕಾರ, ಐಪಿಎಲ್ 2025 ಫೈನಲ್‌ನ ಅಗ್ಗದ ಟಿಕೆಟ್ 1500 ರೂ.ಗಳಾಗಿದ್ದರೆ, ಅತ್ಯಂತ ದುಬಾರಿ ಟಿಕೆಟ್ 30,000 ರೂ.ಗಳಾಗಿದೆ.
ಐಪಿಎಲ್ 2025 ರ ಫೈನಲ್ ಪಂದ್ಯದ 80000 ಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ. ಇದರಲ್ಲಿ 25000 ಟಿಕೆಟ್‌ಗಳು ಉಚಿತವಾಗಿರುತ್ತವೆ. ಇವುಗಳನ್ನು ಕ್ರಿಕೆಟ್ ಮಂಡಳಿ ಸೇರಿದಂತೆ ಇತರ ಸಂಸ್ಥೆಗಳಿಗೆ ನೀಡಲಾಗುವುದು. ಇಷ್ಟೇ ಅಲ್ಲ, ಮಿಲಿಟರಿ ಸಿಬ್ಬಂದಿಗೂ ಸೀಟುಗಳನ್ನು ಕಾಯ್ದಿರಿಸಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಗರಿಷ್ಠ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಪಂದ್ಯವನ್ನು ವೀಕ್ಷಿಸುವ ಅಭಿಮಾನಿಗಳಿಗೆ ಅನಾನುಕೂಲತೆಯನ್ನು ತಪ್ಪಿಸಲು, ಜೂನ್ 3 ರಂದು, ಮೆಟ್ರೋ ಸೇವೆಗಳು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಸಮಯ ಚಲಿಸುತ್ತವೆ, ಅಂದರೆ ರಾತ್ರಿ 12:30 ರವರೆಗೆ ಮೆಟ್ರೋ ಓಡಾಟ ಇರಲಿದೆ.
ಇಂದು ಅಂದರೆ ಜೂನ್ 2 ರಂದು ದೆಹಲಿ, ಬೆಂಗಳೂರು, ಮುಂಬೈ, ಚಂಡೀಗಢದಿಂದ ಅಹಮದಾಬಾದ್‌ಗೆ ಬರುವ ವಿಮಾನಗಳ ದರ 25,000 ರೂ.ಗಳನ್ನು ತಲುಪಿದೆ. ಈ ದರ ಸಾಮಾನ್ಯ ದಿನಗಳಲ್ಲಿ 3500 ರೂ.ಗಳಿಂದ 5000 ರೂ.ಗಳವರೆಗೆ ಇರುತ್ತದೆ. ಇಷ್ಟೇ ಅಲ್ಲ, ಜೂನ್ 4 ರಂದು ಮುಂಬೈ, ದೆಹಲಿ, ಬೆಂಗಳೂರಿಗೆ ಬೆಳಗಿನ ವಿಮಾನ ಪ್ರಯಾಣದ ದರ ರೂ. 30,000 ಆಗಿದೆ. ಮಧ್ಯಾಹ್ನ 12 ಗಂಟೆಯೊಳಗೆ ಬೆಂಗಳೂರಿಗೆ ಒಟ್ಟು ಐದು ವಿಮಾನಗಳು ಹೊರಡಲಿದ್ದು, ಅವುಗಳಲ್ಲಿ ಎರಡು ವಿಮಾನಗಳಲ್ಲಿ ಮಾತ್ರ ಕೆಲವು ಸೀಟುಗಳು ಉಳಿದಿವೆ.
IPL 2025: ಸಮಾರೋಪ ಸಮಾರಂಭದಲ್ಲಿ ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ
ಇಲ್ಲಿಯವರೆಗೆ ಪಂಜಾಬ್ ಕಿಂಗ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಮ್ಮೆಯೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. 2025 ರ ಐಪಿಎಲ್ ಅನ್ನು ಯಾವ ತಂಡ ಗೆದ್ದರೂ ಅದು ಮೊದಲ ಬಾರಿಗೆ ಈ ಭವ್ಯವಾದ ಟೂರ್ನಮೆಂಟ್‌ನ ಟ್ರೋಫಿಯನ್ನು ಗೆಲ್ಲುತ್ತದೆ. ಮುಂಬರುವ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ತಮ್ಮ ಶೇಕಡಾ 100 ರಷ್ಟು ಪ್ರದರ್ಶನ ನೀಡುವುದು ಈಗ ಬಹಳ ಮುಖ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ