
ಗುಜರಾತ್ ಟೈಟಾನ್ಸ್ 3ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಇದು ಐದು ಆವೃತ್ತಿಗಳಲ್ಲಿ ತಂಡದ ಮೂರನೇ ಫೈನಲ್ ಪ್ರವೇಶವಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಾಯಕ ಗಿಲ್ 215 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಅದ್ಭುತ ಶತಕ ಬಾರಿಸಿದರು. ಈ ಇನ್ನಿಂಗ್ಸ್ ವೈಭವ್ ಸೂರ್ಯವಂಶಿ ಬಾರಿಸಿದ 96 ರನ್‌ಗಳ ಹೋರಾಟವನ್ನು ಮರೆಮಾಡಿತು.ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 214 ರನ್ ಬಾರಿಸಿ ಗುಜರಾತ್ಗೆ 215 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿತು.
ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಫೈನಲ್‌ಗೆ ಸ್ಥಾನ ಪಡೆದುಕೊಂಡಿದೆ. ತಂಡವು 18.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 215 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ರಾಹುಲ್ ತೆವಾಟಿಯಾ 19 ನೇ ಓವರ್‌ನಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಗುರಿಯತ್ತ ಕೊಂಡೊಯ್ದರು.
ಗುಜರಾತ್ ಟೈಟಾನ್ಸ್ ತಂಡವು ತನ್ನ ಮೂರನೇ ವಿಕೆಟ್ ಕಳೆದುಕೊಂಡಿದ್ದು, ವಾಷಿಂಗ್ಟನ್ ಸುಂದರ್ ಅವರ ಸಣ್ಣ ಆದರೆ ವೇಗದ ಇನ್ನಿಂಗ್ಸ್ (16) ಕೊನೆಗೊಂಡಿದೆ.ಆದಾಗ್ಯೂ, ಗುಜರಾತ್ 200 ರನ್‌ಗಳನ್ನು ತಲುಪಿದ್ದು ಗೆಲುವಿನ ಸಮೀಪದಲ್ಲಿದೆ.
ಗುಜರಾತ್ ನಾಯಕ ಶುಭಮನ್ ಗಿಲ್ ಮತ್ತೊಮ್ಮೆ ಪ್ಲೇಆಫ್‌ನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿ ಸ್ಮರಣೀಯ ಶತಕ ಗಳಿಸಿದರು. ಗಿಲ್ ಕೇವಲ 47 ಎಸೆತಗಳಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ತಮ್ಮ ಐದನೇ ಐಪಿಎಲ್ ಶತಕವನ್ನು ಪೂರೈಸಿದರು. ಗಿಲ್ ಈ ಹಿಂದೆ 2023 ರ ಪ್ಲೇಆಫ್‌ನಲ್ಲಿ ಶತಕ ಗಳಿಸಿದ್ದರು.
ಸಾಯಿ ಸುದರ್ಶನ್ ಮತ್ತೊಮ್ಮೆ ಹಿಟ್ ವಿಕೆಟ್ ಔಟಾದರು. ಈ ಬಾರಿ ಅವರು ಕಟ್ ಶಾಟ್ ನಲ್ಲಿ ಬೌಂಡರಿ ಹೊಡೆಯಲು ಪ್ರಯತ್ನಿಸಿದರು, ಆದರೆ ಅವರ ಬ್ಯಾಟ್ ಕೈಯಿಂದ ಜಾರಿ ಸ್ಟಂಪ್ ಗೆ ಅಪ್ಪಳಿಸಿತು. ಸುದರ್ಶನ್ 58 ರನ್ ಗಳಿಗೆ ಔಟಾದರು, ಇದು ಗುಜರಾತ್ ನ ಮೊದಲ ವಿಕೆಟ್ ಆಗಿದೆ.
ಗಿಲ್ ನಂತರ, ಸಾಯಿ ಸುದರ್ಶನ್ ಕೂಡ ಅರ್ಧಶತಕ ಬಾರಿಸಿದರು. ಸುದರ್ಶನ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಇದು ಆವೃತ್ತಿಯ ಎಂಟನೇ ಅರ್ಧಶತಕ ಮತ್ತು ಒಟ್ಟಾರೆಯಾಗಿ ಒಂಬತ್ತನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ.
ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಈ ಬಿಗ್ ಮ್ಯಾಚ್ ನಲ್ಲಿ ಬಲಿಷ್ಠ ಇನ್ನಿಂಗ್ಸ್ ಆಡಿ, ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಈ ಆವೃತ್ತಿಯಲ್ಲಿ ಗಿಲ್ ಅವರ ಆರನೇ ಅರ್ಧಶತಕವಾಗಿದೆ. ಗುಜರಾತ್ ಕೇವಲ ಒಂಬತ್ತು ಓವರ್ ಗಳಲ್ಲಿ 100 ರನ್ ಗಳನ್ನು ತಲುಪಿದೆ.
ಗುಜರಾತ್ ತಂಡದ ಪವರ್‌ಪ್ಲೇ ಮುಗಿದಿದ್ದು, ಈ ಆರು ಓವರ್‌ಗಳಲ್ಲಿ ಗಿಲ್ ಮತ್ತು ಸುದರ್ಶನ್ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡಿದೆ. ಅವರು ತಂಡವನ್ನು ವಿಕೆಟ್ ಕಳೆದುಕೊಳ್ಳದೆ 69 ರನ್‌ಗಳಿಗೆ ಕೊಂಡೊಯ್ದಿದ್ದಾರೆ.
ಸುದರ್ಶನ್ ಮತ್ತು ಶುಭಮನ್ ಗಿಲ್ ಜೋಡಿ ಬಂದ ಕ್ಷಣದಿಂದಲೇ ರನ್‌ಗಳ ಸುರಿಮಳೆಗೈದರು. ಅವರು ಬಹುತೇಕ ಪ್ರತಿಯೊಂದು ಎಸೆತದಲ್ಲೂ ಸಿಂಗಲ್ಸ್, ಡಬಲ್ಸ್ ಅಥವಾ ಬೌಂಡರಿಗಳನ್ನು ಬಾರಿಸಿದರು, ಗುಜರಾತ್ ಕೇವಲ ಮೂರು ಓವರ್‌ಗಳಲ್ಲಿ 41 ರನ್ ಗಳಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 214 ರನ್ ಗಳಿಸಿದೆ. ವೈಭವ್ ಅವರ 96 ರನ್‌ಗಳು ತಂಡವು ಈ ಮೈಲಿಗಲ್ಲು ತಲುಪಲು ಸಹಾಯ ಮಾಡಿತು, 20 ನೇ ಓವರ್‌ನಲ್ಲಿ ರಶೀದ್ ಖಾನ್ ಬೌಲಿಂಗ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ ಡೊನೊವನ್ ಫೆರೇರಾ ಕೂಡ ಉತ್ತಮ ಪ್ರದರ್ಶನ ನೀಡಿದರು. ಫೆರೇರಾ ಕೇವಲ 11 ಎಸೆತಗಳಲ್ಲಿ 38 ರನ್ ಗಳಿಸಿದರು. ರವೀಂದ್ರ ಜಡೇಜಾ ಕೂಡ ಅಜೇಯ 45 ರನ್ ಗಳಿಸಿದರು.
ವೈಭವ್ ಸೂರ್ಯವಂಶಿ ಮತ್ತೊಮ್ಮೆ ಶತಕದ ಅಂಚಿನಲ್ಲಿ ಔಟಾದರು. ಎಲಿಮಿನೇಟರ್‌ನಲ್ಲಿ 97 ರನ್ ಬಾರಿಸಿ ಔಟಾಗಿದ್ದ ವೈಭವ್ ಈ ಪಂದ್ಯದಲ್ಲಿ 96 ರನ್‌ಗಳಿಗೆ ಔಟಾದರು. ಮತ್ತೊಮ್ಮೆ, ಅವರು ಥರ್ಡ್ ಮ್ಯಾನ್ನಲ್ಲಿ ಕ್ಯಾಚ್ ನೀಡಿ ಔಟಾದರು. ವೈಭವ್ ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಒಳಗೊಂಡಂತೆ 96 ರನ್ ಗಳಿಸಿದರು. ರಬಾಡ ವಿಕೆಟ್ ಪಡೆದರು.
ವೈಭವ್ ಅವರ ಅಬ್ಬರದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು 150 ರನ್ ಗಳಿಸಿದೆ. 16 ನೇ ಓವರ್‌ನಲ್ಲಿ, ವೈಭವ್ ಜೇಸನ್ ಹೋಲ್ಡರ್ ವಿರುದ್ಧ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಒಟ್ಟು 16 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ತಂಡವು ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಹೋಲ್ಡರ್ ಬೌಲಿಂಗ್‌ನಲ್ಲಿ ದಾಸುನ್ ಶನಕ (3) ಔಟಾದರು.
ರಾಜಸ್ಥಾನ್ ರಾಯಲ್ಸ್ ತಂಡವು ನಾಯಕ ರಿಯಾನ್ ಪರಾಗ್ ಅವರ ವಿಕೆಟ್ ಕಳೆದುಕೊಂಡಿದೆ. ಪರಾಗ್ ಕೇವಲ 11 ರನ್ ಗಳಿಸಿ ಔಟಾದರು.
ರಾಜಸ್ಥಾನ್ ರಾಯಲ್ಸ್ ತಂಡ ಕೇವಲ ಐದು ಓವರ್‌ಗಳಲ್ಲಿ 50 ರನ್‌ಗಳನ್ನು ಗಳಿಸಿದ್ದು, ಕಳಪೆ ಆರಂಭದಿಂದ ಚೇತರಿಸಿಕೊಂಡು ಬಲವಾದ ಮೊತ್ತ ಗಳಿಸುವತ್ತ ಸಜ್ಜಾಗಿದೆ. ಬಡ್ತಿ ಪಡೆದಿರುವ ರವೀಂದ್ರ ಜಡೇಜಾ ವೈಭವ್ ಜೊತೆಗೆ ಕ್ರೀಸ್‌ನಲ್ಲಿದ್ದಾರೆ.
ಎರಡನೇ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಎರಡನೇ ವಿಕೆಟ್ ಕಳೆದುಕೊಂಡಿತು, ಈ ಬಾರಿ ಧ್ರುವ್ ಜುರೆಲ್ (7) ಅವರನ್ನು ಕಗಿಸೊ ರಬಾಡ ಔಟ್ ಮಾಡಿದರು.
ರಾಜಸ್ಥಾನ್ ರಾಯಲ್ಸ್ ತಂಡ ಕಳಪೆ ಆರಂಭ ಪಡೆಯಿತು, ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ (1) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.
ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ದಾಸುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಗುಜರಾತ್ ಮೊದಲು ಬೌಲಿಂಗ್ ಮಾಡಲಿದೆ.
Published On - 7:03 pm, Fri, 29 May 26