AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ‘ಟ್ರಾವಿಶೇಕ್’ ಬ್ರೇಕ್: ಐಪಿಎಲ್​ನಿಂದ ಸ್ಟಾರ್ ಆಟಗಾರ ಔಟ್!

IPL 2027 Retention: ಐಪಿಎಲ್ 2027ರ ರೀಟೆನ್ಷನ್ ಪ್ರಕ್ರಿಯೆಗೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ (SRH) ಅಭಿಮಾನಿಗಳಿಗೆ ಭಾರಿ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಮೂರು ಆವೃತ್ತಿಗಳಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಟ್ರಾವಿಸ್ ಹೆಡ್, ಮುಂಬರುವ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

IPL 2027: 'ಟ್ರಾವಿಶೇಕ್' ಬ್ರೇಕ್: ಐಪಿಎಲ್​ನಿಂದ ಸ್ಟಾರ್ ಆಟಗಾರ ಔಟ್!
Travis Head - Abhishek SharmaImage Credit source: IPL
ಝಾಹಿರ್ ಯೂಸುಫ್
|

Updated on: Nov 17, 2026 | 1:01 PM

Share

ಸನ್​ರೈಸರ್ಸ್ ಹೈದರಾಬಾದ್ ತಂಡದ  ಸ್ಫೋಟಕ ದಾಂಡಿಗ ಟ್ರಾವಿಸ್ ಹೆಡ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027)  ಸೀಸನ್-20 ರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ತಮ್ಮ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ಅವರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ನವೆಂಬರ್ 17ರ ಆಟಗಾರರ ರೀಟೆನ್ಷನ್ ಗಡುವಿಗೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಗೆ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಹೀಗಾಗಿ, ಐಪಿಎಲ್ 2027ರ ರೀಟೆನ್ಷನ್ ಪಟ್ಟಿಯಿಂದ ಎಸ್‌ಆರ್‌ಹೆಚ್ ತಂಡವು ಹೆಡ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ.

ನಿರ್ಧಾರದ ಹಿಂದಿನ ಕಾರಣವೇನು?

2027ರಲ್ಲಿ ಆಸ್ಟ್ರೇಲಿಯಾ ತಂಡವು ಅತ್ಯಂತ ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಹೊಂದಿದೆ. ಮುಂದಿನ ವರ್ಷ ಆಸ್ಟ್ರೇಲಿಯಾ ಬರೋಬ್ಬರಿ 20 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್, ಜೂನ್‌ನಿಂದ ಆಗಸ್ಟ್‌ವರೆಗೆ ಪ್ರತಿಷ್ಠಿತ ಆ್ಯಶಸ್ ಸರಣಿ ಹಾಗೂ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗಳು ನಡೆಯಲಿವೆ.

ದೇಶದ ಪರ ಪ್ರಮುಖ ಟೂರ್ನಿಗಳಲ್ಲಿ ಆಡಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಜ್ಜಾಗಿರಬೇಕಾದರೆ, ಹಿರಿಯ ಆಟಗಾರರು ಐಪಿಎಲ್‌ನಂತಹ ಲೀಗ್‌ಗಳ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಸೀಸ್ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಈ ಹಿಂದೆಯೇ ಸುಳಿವು ನೀಡಿದ್ದರು. ಅದರಂತೆ, ಇದೀಗ ಟ್ರಾವಿಸ್ ಹೆಡ್ ಐಪಿಎಲ್‌ನಿಂದ ಹಿಂದೆ ಸರಿದು ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.

SRH ತಂಡದ ಮೇಲಾಗುವ ಪರಿಣಾಮಗಳೇನು?

  •  ಪರ್ಸ್ ಮೊತ್ತ ಹೆಚ್ಚಳ: 2025ರ ಮೆಗಾ ಹರಾಜಿಗೂ ಮುನ್ನ ಎಸ್‌ಆರ್‌ಹೆಚ್ ತಂಡವು ಟ್ರಾವಿಸ್ ಹೆಡ್ ಅವರನ್ನು ಬರೋಬ್ಬರಿ 14 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಇದೀಗ ಹೆಡ್ ಅವರ ನಿರ್ಗಮನದಿಂದ, ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಹೈದರಾಬಾದ್ ತಂಡದ ಪರ್ಸ್‌ಗೆ 14 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದು ಬದಲಿ ಆಟಗಾರನನ್ನು ಖರೀದಿಸಲು ತಂಡಕ್ಕೆ ದೊಡ್ಡ ಬಲ ನೀಡಲಿದೆ.
  •  ‘ಟ್ರಾವಿಶೇಕ್’ ಜೋಡಿಗೆ ಬ್ರೇಕ್: ಹೆಡ್ ಅವರ ಈ ನಿರ್ಧಾರದಿಂದ ಅಭಿಮಾನಿಗಳ ನೆಚ್ಚಿನ ಆರಂಭಿಕ ಜೋಡಿಯಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ (‘ಟ್ರಾವಿಶೇಕ್’) ಜೊತೆಯಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇವರಿಬ್ಬರೂ 42 ಇನ್ನಿಂಗ್ಸ್‌ಗಳಲ್ಲಿ 46.14ರ ಸರಾಸರಿಯಲ್ಲಿ 1,892 ರನ್ ಕಲೆಹಾಕಿದ್ದರು. ಪ್ರತಿ ಓವರ್‌ಗೆ 12.27ರ ರನ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಈ ಜೋಡಿ, ಐಪಿಎಲ್ ಇತಿಹಾಸದಲ್ಲೇ 1,000ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ವೇಗದ ಜೊತೆಯಾಟ ಎಂಬ ದಾಖಲೆ ಹೊಂದಿದೆ.
  •  ಹೆಡ್ ಅಂಕಿ ಅಂಶ: 2024ರಿಂದ 2026ರವರೆಗೆ ಹೈದರಾಬಾದ್ ಪರ 43 ಪಂದ್ಯಗಳನ್ನು ಆಡಿರುವ ಟ್ರಾವಿಸ್ ಹೆಡ್, 176.14ರ ಭರ್ಜರಿ ಸ್ಟ್ರೈಕ್ ರೇಟ್ ಹಾಗೂ 32.95ರ ಸರಾಸರಿಯಲ್ಲಿ ಒಟ್ಟು 1,351 ರನ್ ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಅತಿರೇಕ, ಆವೇಶ… ಟೀಮ್ ಇಂಡಿಯಾಗೆ ಅಖ್ತರ್ ಭೇಷ್, ಪಾಕ್ ಪಡೆಗೆ ಚಾಟಿಯೇಟು!

ಒಟ್ಟಿನಲ್ಲಿ, ಟ್ರಾವಿಸ್ ಹೆಡ್ ಅವರ ಅಲಭ್ಯತೆಯು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾದರೂ, ಹರಾಜಿನಲ್ಲಿ ಹೊಸ ಸ್ಫೋಟಕ ಆರಂಭಿಕ ಆಟಗಾರನನ್ನು ಖರೀದಿಸಲು ಫ್ರಾಂಚೈಸಿಗೆ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಇದೀಗ ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಎಸ್‌ಆರ್‌ಹೆಚ್ ತಂಡವು ಹೆಡ್ ಸ್ಥಾನಕ್ಕೆ ಯಾವ ಬಲಿಷ್ಠ ಆಟಗಾರನನ್ನು ಕರೆತರಲಿದೆ ಎಂಬುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ