IPL Auction 2024: ಹರಾಜಿನಲ್ಲಿ ಈ ಆಟಗಾರರೇ ನಮ್ಮ ಟಾರ್ಗೆಟ್ ಎಂದ ಆರ್​ಸಿಬಿ ಡೈರೆಕ್ಟರ್

IPL Auction 2024: ಹರಾಜಿಗೂ ಮುನ್ನ ತಂಡದ ಯೋಜನೆಯ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮೊ ಬಾಬಟ್, ‘ಮುಂಬರುವ ಐಪಿಎಲ್ ಹರಾಜಿನಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಬೆಂಬಲಿಸಲು ಹೆಚ್ಚಿನ ಬೌಲಿಂಗ್ ಆಯ್ಕೆಗಳನ್ನು ಪಡೆದುಕೊಳ್ಳುವುದು ತಂಡದ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.

IPL Auction 2024: ಹರಾಜಿನಲ್ಲಿ ಈ ಆಟಗಾರರೇ ನಮ್ಮ ಟಾರ್ಗೆಟ್ ಎಂದ ಆರ್​ಸಿಬಿ ಡೈರೆಕ್ಟರ್
ಆರ್​ಸಿಬಿ
Follow us
ಪೃಥ್ವಿಶಂಕರ
|

Updated on: Dec 18, 2023 | 7:40 PM

ಐಪಿಎಲ್ 2024ರ ಹರಾಜಿನ (IPL Auction 2024) ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆ ಅಂದರೆ ಡಿಸೆಂಬರ್ 19 ರಂದು ದುಬೈನಲ್ಲಿ ಮಿನಿ ಹರಾಜು ನಡೆಯಲ್ಲಿದೆ. ಹರಾಜಿನಲ್ಲಿರುವ 333 ಆಟಗಾರರ ಪೈಕಿ 77 ಆಟಗಾರರು ಖರೀದಿದಾರರನ್ನು ಪಡೆಯಲ್ಲಿದ್ದಾರೆ. ಎಲ್ಲಾ 10 ತಂಡಗಳು ಯಾವ ಆಟಗಾರನ ಮೇಲೆ ಹಣದ ಹೂಡಿಕೆ ಮಾಡಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿವೆ. ಅದರಲ್ಲಿ ಆರ್​ಸಿಬಿ (RCB) ಕೂಡ ವಿಭಿನ್ನ ಯೋಜನೆಯೊಂದಿಗೆ ಹರಾಜಿಗಿಳಿಯುತ್ತಿದೆ ಎಂಬುದನ್ನು ತಂಡದ ನಿರ್ದೇಶಕ ಮೊ ಬೊಬಾಟ್ (Director of Cricket Mo Bobat) ಹೇಳಿಕೊಂಡಿದ್ದಾರೆ. ಪ್ರಸ್ತುತ ಆರ್​ಸಿಬಿ ಒಟ್ಟು 18 ಆಟಗಾರರನ್ನು ಉಳಿಸಿಕೊಂಡಿದೆ. ಹಾಗೆಯೇ ಹರಾಜಿಗೂ ಮುನ್ನ 11 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.

ತಂಡದ ಬೌಲಿಂಗ್ ವಿಭಾಗ ದುರ್ಬಲಗೊಂಡಿದೆ

ಹರಾಜಿಗೂ ಮುನ್ನ ತಂಡದ ಯೋಜನೆಯ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮೊ ಬಾಬಟ್, ‘ಮುಂಬರುವ ಐಪಿಎಲ್ ಹರಾಜಿನಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಬೆಂಬಲಿಸಲು ಹೆಚ್ಚಿನ ಬೌಲಿಂಗ್ ಆಯ್ಕೆಗಳನ್ನು ಪಡೆದುಕೊಳ್ಳುವುದು ತಂಡದ ಪ್ರಮುಖ ಆದ್ಯತೆಯಾಗಿದೆ. ಪ್ರಸ್ತುತ ಆರ್​ಸಿಬಿ ಬಿಡುಗಡೆ ಮಾಡಿರುವ ಆಟಗಾರರ ಪೈಕಿ ವೇಗದ ಬೌಲರ್ ಹರ್ಷಲ್ ಪಟೇಲ್, ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗಾ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಸೇರಿದ್ದಾರೆ. ಇದರಿಂದಾಗಿ ತಂಡದ ಬೌಲಿಂಗ್ ವಿಭಾಗ ದುರ್ಬಲಗೊಂಡಿದೆ. ಹೀಗಾಗಿ ಸಿರಾಜ್ ಅವರನ್ನು ಬೆಂಬಲಿಸಲು ಸಾಗರೋತ್ತರ ಬೌಲರ್‌ಗಳು ಸೇರಿದಂತೆ ಇನ್ನೂ ಕೆಲವು ಬೌಲಿಂಗ್ ಆಯ್ಕೆಗಳನ್ನು ತಂಡದಲ್ಲಿ ಸೇರಿಸುವುದು ನಮಗೆ ನಿಜವಾದ ಆದ್ಯತೆಯಾಗಿದೆ ಎಂದಿದ್ದಾರೆ.

IND vs SA: ಏಕದಿನ ಸರಣಿಯಿಂದ ಹಿಂದೆ ಸರಿದ ದೀಪಕ್ ಚಹರ್; ಆರ್​ಸಿಬಿ ಹುಲಿಗೆ ಒಲಿದ ಅದೃಷ್ಟ..!

ಅನುಭವಿ ಬ್ಯಾಟ್ಸ್‌ಮನ್‌ಗಳ ದಂಡೆ ಇದೆ

ಮುಂದುವರೆದು, ನಮ್ಮಲ್ಲಿ ಹಲವು ಸ್ಥಳೀಯ ಸ್ಪಿನ್ನರ್‌ಗಳ ಆಯ್ಕೆ ಇದೆ. ಅವರಲ್ಲಿ ಕೆಲವರು ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ಸೀಮಿತ ಅವಕಾಶಗಳನ್ನು ಪಡೆದಿದ್ದಾರೆ. ಮುಂದಿನ ಆವೃತ್ತಿಗಳಲ್ಲಿ ಅವರು ತಂಡದ ಪ್ರಮುಖ ಸ್ಪಿನ್ ಆಯ್ಕೆಯಾಗಬಹುದು. ಇನ್ನು ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳ ದಂಡೆ ಇದೆ. ಅಲ್ಲದೆ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಸಲುವಾಗಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ.

ಏಳು ಸ್ಲಾಟ್‌ಗಳು ಖಾಲಿ

ನಮ್ಮ ತಂಡದ ಅಗ್ರ ಕ್ರಮಾಂಕ ತುಂಬಾ ಬಲಿಷ್ಠವಾಗಿದೆ. ಆಟಗಾರರನ್ನು ಬಿಡುಗಡೆ ಮಾಡುವ ನಮ್ಮ ನಿರ್ಧಾರದ ಭಾಗವೆಂದರೆ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಪ್ರಯತ್ನಿಸುವುದಾಗಿತ್ತು. ಅದರಂತೆ ಕ್ಯಾಮರೂನ್ ಗ್ರೀನ್ ಅವರನ್ನು ತಂಡಕ್ಕೆ ಕರೆತಂದಿರುವುದು ಮಧ್ಯಮ ಕ್ರಮಾಂಕವನ್ನು ಬಲ ಪಡಿಸಿದೆ. ತಂಡದಲ್ಲಿ ಒಟ್ಟು ಏಳು ಸ್ಲಾಟ್‌ಗಳು ಖಾಲಿ ಇದ್ದು, ಆದಷ್ಟು ಉತ್ತಮ ಆಟಗಾರರನ್ನು ತಂಡಕ್ಕೆ ಖರೀದಿ ಮಾಡಲಿದ್ದೇವೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ